ರಿಪ್ಪನ್ಪೇಟೆ ; ದೆಹಲಿಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿರುವ ಸುದ್ದಿ ಹರಡುತ್ತಿದ್ದಂತೆ ರಿಪ್ಪನ್ಪೇಟೆಯಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರು ವಿನಾಯಕ ವೃತ್ತದಲ್ಲಿ ಪಟಾಕಿ ಸಿಡಿಸಿ ಜಯ ಘೋಷಣೆಯೊಂದಿಗೆ ವಿಜಯೋತ್ಸವದ ಸಂಭ್ರಮಾಚರಣೆ ನಡೆಸಿದರು.
ವಿಜಯೋತ್ಸವದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎನ್.ಸತೀಶ್, ನಾಗಾರ್ಜುನಸ್ವಾಮಿ, ಎಂ.ಬಿ.ಮಂಜುನಾಥ, ನಾಗರತ್ನ ದೇವರಾಜ್, ಸುಧೀಂದ್ರ ಪೂಜಾರಿ, ದೇವೇಂದ್ರಪ್ಪಗೌಡ, ಪದ್ಮಾ ಸುರೇಶ್, ಜಿ.ಡಿ.ಮಲ್ಲಿಕಾರ್ಜುನ, ಸುಂದರೇಶ್, ರಾಮಚಂದ್ರ, ನವೀನ್, ಮೆಣಸೆ ಆನಂದ್, ಕೀರ್ತಿರಾಜ್, ಕುಷನ್ ದೇವರಾಜ್, ಬಸವರಾಜ್, ಬೆಳ್ಳೂರು ಗ್ರಾಮ ಪಂಚಾಯ್ತಿ ಸದಸ್ಯೆ ಭವಾನಿ, ದಿವಾಕರ್ ಬೆಳ್ಳೂರು, ಗಣೇಶ್ ಮೂಗುಡ್ತಿ ಮತ್ತಿತರರು ಇದ್ದರು.