ಹೊಸನಗರ ; ತಾಲ್ಲೂಕಿನಲ್ಲಿ ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ಪುನರ್ ರಚನೆ ಆಗಿದೆ. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಸಂಚಾಲಕ ಹರಮಘಟ್ಟ ರಂಗಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲೂಕು ಮಟ್ಟದ ಹೊಸ ಸಮಿತಿ ರಚನೆಯಾಗಿದೆ.
ಸಭೆಯಲ್ಲಿ ರಾಜ್ಯ ಸಂಘಟನಾ ಸಂಚಾಲಕ ಧರ್ಮಪ್ಪ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದು ತಾಲೂಕಿನ ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡದ ಸಮುದಾಯದ ಕುಂದುಕೊರತೆಗಳನ್ನು ಸ್ಥಳೀಯರಿಂದ ಆಲಿಸಿದರು.
ಈ ವೇಳೆ ಬಿ.ಎಂ.ಪ್ರಕಾಶ್ ತಾಲೂಕು ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಸಲಹಾ ಸಮಿತಿ ಅಧ್ಯಕ್ಷರಾಗಿ ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಗುರುರಾಜ್ (ಬಜಾಜ್) ನೇಮಕಗೊಂಡರು.
ಲೇಖನವನ್ನು ಮುಂದುವರಿಸಿ ಓದಿ
ಸಂಘಟನಾ ಸಂಚಾಲಕರಾಗಿ ಹರೀಶ್, ಅಮೋದಿ, ಶ್ರೀನಿವಾಸ್, ಸುರೇಶ್, ಅವಿನಾಶ್, ನಾರಾಯಣ, ರಾಘವೇಂದ್ರ, ಜಾಫರ್, ಶ್ಯಾಮ್, ರವೀಂದ್ರ ಆಯ್ಕೆಯಾದರು. ಸಲಹಾ ಸಮಿತಿ ಸದಸ್ಯರಾಗಿ ನಾರಾಯಣ, ಗಣೇಶ್, ಸುಬ್ರಹ್ಮಣ್ಯ, ಸಚಿನ್,ನಾಗರಾಜ್ ನೇಮಕಗೊಂಡರು.
ಸಾಗರ ತಾಲೂಕು ಸಂಚಾಲಕ ಹೆಚ್.ರೇವಪ್ಪ, ಕಸಬಾ ಹೋಬಳಿ ಸಂಚಾಲಕ ಜಗನ್ನಾಥ ಭೀಮನೇರಿ, ಶಿವಮೊಗ್ಗ ತಾಲೂಕು ಸಂಚಾಲಕ ಎಸ್. ಕುಮಾರ್, ಶೇಖರಪ್ಪ ಚಟ್ನಳ್ಳಿ, ಸಂಚಾಲಕ ನಿತಿನ್, ನಗರ ಸಂಚಾಲಕ ಬಿ.ನಾಗಪ್ಪ ಗುರುಪ್ರಸಾದ್, ಶಿವಪ್ಪ ಹೆಚ್.ಕೆ, ಶೇಖರಪ್ಪ ಸಭೆಯಲ್ಲಿ ಉಪಸ್ಥಿತರಿದ್ದರು.

