ರಿಪ್ಪನ್‌ಪೇಟೆ ; ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿಗಳು 2025-26ನೇ ಸಾಲಿನ ಪ್ರವೇಶಾತಿ ಅಭಿಯಾನ ಜನಜಾಗೃತಿ ಜಾಥಾವನ್ನು ನಡೆಸಿದರು.
ಸಾಗರ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಿಂದ ವಿದ್ಯಾರ್ಥಿಗಳ ಜಾಥಾ ಆರಂಭಗೊಂಡು ವಿಜ್ಞಾನದ ಆಯ್ಕೆ, ಉತ್ತಮ ಅವಕಾಶಗಳು ಉತ್ತಮ ಭವಿಷ್ಯ, ಕಾಲೇಜ್‌ನಲ್ಲಿ ವಿದ್ಯಾರ್ಥಿಗಳಿಗಿರುವ ಮೂಲಭೂತ ಸೌಲಭ್ಯಗಳು ಹಾಗೂ 2023-24ನೇ ಸಾಲಿನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಮತ್ತು ಸರ್ಕಾರದಿಂದ ವಿವಿಧ ವಿದ್ಯಾರ್ಥಿ ವೇತನ, ಅತ್ಯುತ್ತಮ ಬೋಧಕರ ಬೋಧಕೇತರ ಕುರಿತು ಜನಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿ ಘೋಷಣೆಯ ನಾಮಫಲಕದೊಂದಿಗೆ ವಿನಾಯಕ ವೃತ್ತದ ಮಾರ್ಗವಾಗಿ ಶಿವಮೊಗ್ಗ ರಸ್ತೆ ಮೂಲಕ ಕಾಲೇಜ್‌ವರಗೆ ಜಾಥಾ ನಡೆಸಲಾಯಿತು.
ವಿದ್ಯಾರ್ಥಿಗಳ ಪ್ರವೇಶಾತಿ ಜಾಥಾದಲ್ಲಿ ಕಾಲೇಜ್ ಪ್ರಾಚಾರ್ಯ ಪ್ರೋ. ವಿರುಪಾಕ್ಷಪ್ಪ, ಸಿಡಿಸಿ ಉಪಾಧ್ಯಕ್ಷ ಬೆಳಕೋಡು ಹಾಲಸ್ವಾಮಿಗೌಡ ಹಾಗೂ ಉಪನ್ಯಾಸಕ ವೃಂದ ಕಾಲೇಜ್ ಅಭಿವೃದ್ದಿ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.