ಹೊಸನಗರ ರಾಮಚಂದ್ರಪುರ ಮಠದ ಶ್ರೀ ಗೋವರ್ಧನಗಿರಿ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಮಾ.1 ರಿಂದ ಭಾಗವತ ಸಪ್ತಾಹ

Written by Mahesha Hindlemane

Updated on:

ಹೊಸನಗರ ; ಪಟ್ಟಣಕ್ಕೆ ಹೊಂದಿಕೊಂಡಂತಿರುವ ಶ್ರೀರಾಮಚಂದ್ರಾಪುರ ಮಠದ ಮಹಾನಂದಿ ಗೋಲೋಕ ಈಗ ಗೋವರ್ಧನ ಗಿರಿಧಾರಿ ಗೋಪಾಲಕೃಷ್ಣ ದೇವಸ್ಥಾನದ ಆಶ್ರಯದಲ್ಲಿ ಮಾರ್ಚ್ 1ರಿಂದ ಮಾರ್ಚ್ 7 ರವರೆಗೆ ಪರಮ ಪೂಜ್ಯ ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಭಾರತಿ ಮಹಾಸ್ವಾಮಿಗಳ ವಿಶೇಷ ಯೋಜನೆಯಾದ ಮಹಾನಂದಿ ಗೋಲೋಕದ ಹೃದಯ ಭಾಗದಲ್ಲಿ ಭಕ್ತಾನುಗೃಹ ಶಕ್ತಿಯಾಗಿ ನೆಲೆಸಿರುವ ಶ್ರೀ ಗೋವರ್ನಗಿರಿ ಧಾರಿಯ ಸನ್ನಿಧಿಯಲ್ಲಿ ವೇದಮೂರ್ತಿ ವೇದ ಸಂಸ್ಕೃತ ವಿದ್ವಾಂಸರು ಪುರೋಹಿತರು ಪ್ರವಚನಕಾರರು ಆದ ವಿದ್ವಾನ್ ಕೇಶವಭಟ್ ಕೇಕಣಾಜೆ ರವರು ಭಾಗವತ ಮಹಾ ಪುರಾಣದ ಕಥಾ ಶ್ರವಣವನ್ನು ಏಳು ದಿನಗಳ ಕಾಲ ಪ್ರತಿ ದಿನ ಬೆಳಗ್ಗೆ 6:00 ಯಿಂದ 12:30 ರವರೆಗೆ ಪಾರಾಯಣ ಹಾಗೂ ಸಂಜೆ 6 ಗಂಟೆಯಿಂದ 9 ಗಂಟೆಯವರೆಗೆ ಪ್ರವಚನ ನಡೆಸಲಾಗುತ್ತದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮಾ.08ರ ಶನಿವಾರ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಂದ್ರ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಮಹಾನಂದಿ ಭೂಲೋಕದ ಹೃದಯ ಭಾಗದಲ್ಲಿ ಭಕ್ತಾನುಗ್ರಹ ಶಕ್ತಿಯಾಗಿ ನೆಲೆಸಿರುವ ಶ್ರೀ ಗೋವರ್ಧನ ಗಿರಿಧಾರಿಯ ಪ್ರತಿಷ್ಠ ವಾರ್ಷಿಕೋತ್ಸವ ಕೃಷ್ಣಾರ್ಪಣಂ ಹಾಗೂ ಸೋಫಾನ ಪೂಜೆ ವಿಷ್ಣುಪಡಂ ವಿಷ್ಣು ಸಹಸ್ರನಾಮ ಪಾರಾಯಣ ಛತ್ರ ಸಮರ್ಪಣೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅನ್ನಸಂತರ್ಪಣೆ ಹಾಗೂ ಧರ್ಮಸಭೆ ನಡೆಯಲಿದೆ ಮಾರ್ಚ್ 9ರ ಭಾನುವಾರ ಸಂಜೆ ಪೂರ್ಣಚಂದ್ರ ಯಕ್ಷಗಾನ ಪ್ರತಿಷ್ಠಾನ ಕೊಂಡದಕುಳಿ ಆಯೋಗದಲ್ಲಿ ಸುಪ್ರಸಿದ್ಧ ಕಲಾವಿದರಿಂದ ರುಕ್ಮಿಣಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಶ್ರೀ ಕೃಷ್ಣ ಅವತಾರಾಂತ್ಯದ ವರೆಗಿನ ಈ ಕಥಾ ಪ್ರಪಂಚಕ್ಕೆ ಶ್ರವಣವೇ ನಮಗಿರುವ ಪ್ರಮುಖ ಸಾಧನ ಇದಕ್ಕೆ ಯಾವುದೇ ಜಾತಿ ಮತ ಪಂಥಗಳೆಂಬ ಭೇದ ತಾರತಮ್ಯವಿಲ್ಲದೆ ಕೇವಲ ಶರಣಾಗತಿ ಭಾವದ ಮತ್ತು ನಿಷ್ಕಲ್ಮಶವಾದ ಶ್ರದ್ಧಾಭಕ್ತಿಗಳೇ ಅರ್ಹತೆಯಾಗಿದೆ.

ಭಕ್ತವೃಂದದವರು ಈ ಭಾಗವತ ಸಪ್ತಾಹ ಆಚರಣೆಯಲ್ಲಿ ಪಾಲ್ಗೊಳ್ಳುವ ಮೂಲಕ ಪುನೀತರಾಗಬೇಕೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

Leave a Comment