ಹೊಸನಗರ ; ಬಂಟರು ಯಾನೆ ನಾಡವ ಶೆಟ್ಟರು ಯಾವುದೇ ಊರಿರಲಿ, ನಾಡಿರಲಿ ಯಾವುದೇ ರಾಜ್ಯ, ರಾಷ್ಟ್ರ ಅಂತರ ರಾಷ್ಟ್ರೀಯ ದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಅವರು ನಂಬಿಕೆಗೆ ಅರ್ಹರದವರು ಮತ್ತು ಜನರು ನಮ್ಮ ಜಾತಿಯ ಜನರನ್ನು ನಂಬುತ್ತಾರೆ ಎಂದು ಬಂಟರ ಯಾನೆ ನಾಡವರ ಶೆಟ್ಟರ ಸಂಘದ ರಾಜ್ಯಾಧ್ಯಕ್ಷ ಅಶೋಕ ಶೆಟ್ಟಿ ಹೇಳಿದರು.
ಪಟ್ಟಣದ ಗಣಪತಿ ದೇವಸ್ಥಾನದ ಆವರಣದಲ್ಲಿ ಬಂಟರ ಯಾನೆ ನಾಡವರ ಸಂಘ ಹೊಸನಗರ ಹಾಗೂ ಬಂಟರ ಯಾನೆ ನಾಡವರ ಸಂಘ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ, ಅಂಗ ವಿಕಲ ಕುಟುಂಬಕ್ಕೆ ಧನ ಸಹಾಯ ಮತ್ತು ತಾಲ್ಲೂಕಿನಲ್ಲಿ ಬಂಟರ ಸಂಘದವರು ಚುನಾವಣೆಗಳಲ್ಲಿ ಆಯ್ಕೆಯಾದ ಸದಸ್ಯರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಂಡರ ಸಂಘದಲ್ಲಿ ಹಿಂದೆ ಸದಸ್ಯರಾಗಬೇಕು ಎಂದು ಮನೆ-ಮನೆಗೆ ಭೇಟಿ ನೀಡಿದಾಗ ಯಾರು ಮುಂದೆ ಬರುತ್ತಿರಲಿಲ್ಲ ಆದರೆ ಈಗ ಬಂಟರ ಸಂಘದ ನಿರ್ದೇಶಕರಾಗಬೇಕಾದರೆ ಚುನಾವಣೆ ನಡೆಯುವ ನಡೆಸುವ ಸಂದರ್ಭ ಬಂದಿದೆ. ಹಿಂದೆ ಎಲ್ಲ ಸದಸ್ಯರನ್ನು ಹುಡುಕುವ ಪರಿಸ್ಥಿತಿ, ಈಗ 18 ಸಾವಿರಕ್ಕಿಂತಲೂ ಹೆಚ್ಚು ಸದಸ್ಯರು ನಮ್ಮ ಸಂಘದಲ್ಲಿದ್ದು ಒಳ್ಳೊಳೆಯ ಕೆಲಸ ಮಾಡುವುದರ ಜೊತೆಗೆ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ನೀಡುತ್ತಿದೆ. ನಾವು ಈ ತಾಲ್ಲೂಕಿನಲ್ಲಿ ಅಲ್ಪ ಸಂಖ್ಯಾತರಾಗಿರಬಹುದು ಅದರೇ ಯಾವುದರಲ್ಲಿ ಹಿಂದೆ ಬಿದ್ದಿಲ್ಲ ಬಂಟರ ಸಂಘ ಎಂದೆಂದಿಗೂ ಬಡವರ ಆರ್ಥಿಕವಾಗಿ ಹಿಂದುಳಿದವರ ಹಾಗೂ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಇದರ ಉಪಯೋಗವನ್ನು ಎಲ್ಲ ಸದಸ್ಯರು ಪಡೆದು ಕೊಳ್ಳುವ ಜೊತೆಗೆ ಶಿಕ್ಷಣ ಕ್ಞೇತ್ರದಲ್ಲಿ ಉತ್ತಮವಾಗಿ ಓದಿ ದೇಶ-ವಿದೇಶಗಳಿಗೆ ಹೋಗುವುದರ ಜೊತೆಗೆ ನಂಬಿಕೆ ಉಳಿಸಿಕೊಳ್ಳಬೇಕೆಂದು ಈ ಮೂಲಕ ಕರೆ ನೀಡಿದರು.

ವಿದ್ಯಾರ್ಥಿವೇತನ ಮತ್ತು ಪ್ರಶಸ್ತಿ ಸಮಿತಿಯ ಬೆಂಗಳೂರಿನ ಬಂಟರ ಸಂಘದ ಅಧ್ಯಕ್ಷರಾದ ಉಮೇಶ ಕುಮಾರ್ ಈ ಸಂದರ್ಭದಲ್ಲಿ ಮಾತನಾಡಿ, ನಾವು ಪ್ರತಿ ವರ್ಷ ಪ್ರತಿಭಾ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರಶಸ್ತಿ ನೀಡುವುದರ ಜೊತೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ 2 ಲಕ್ಷದವರೆಗೆ ಸುಮಾರು 60 ವಿದ್ಯಾರ್ಥಿಗಳಿಗೆ ಬೆಂಗಳೂರು ಸಂಘದಿಂದ ಧನ ಸಹಾಯ ಕಾರ್ಯಕ್ರಮವನ್ನು ಅಧ್ಯಕ್ಷರಾದ ಅಶೋಕಕುಮಾರ್ ನೇತೃತ್ವದಲ್ಲಿ ನಡೆಯಲಿದ್ದು ಈ ಸಹಾಯ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ನೀಡಲಾಗುತ್ತಿದೆ ಇದರ ಜೊತೆಗೆ ಡಿಗ್ರಿ ಮುಗಿಸಿ ಮುಂದಿನ ವಿದ್ಯಾಬ್ಯಾಸಕ್ಕಾಗಿ ಲೋನ್ ರೂಪದಲ್ಲಿ ಯಾವುದೇ ಬಡ್ಡಿ ರಹಿತ ಸಾಲವನ್ನು ಓದುವ ಉದ್ದೇಶದಿಂದ ನೀಡಲಾಗುತ್ತಿದೆ ಅರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಆಯ್ಕೆ ಮಾಡಿಕೊಂಡು ಈ ಸಹಾಯ ಹಸ್ತ ನೀಡಲಾಗುತ್ತಿದೆ ಬಡವರು ಹಿಂದುಳಿದವರ ಮದುವೆಗೆ 8 ಗ್ರಾಂ ತಾಳಿ ಸರವನ್ನು ನಮ್ಮ ಸಂಘ ನೀಡಲು ಬಯಸಿದ್ದು ಬಂಟರ ಸಂಘ ಎಂದೆಂದಿಗೂ ನಿಮ್ಮ ಜೊತೆಗಿದ್ದು ನೀವು ನಮಗೆ ಯಾವುದೇ ಸಹಾಯ ಕೊಡುವುದು ಬೇಡ ವರ್ಷಕ್ಕೆ ಒಂದೆರಡು ಬಾರಿ ಬಂದು ಸಂಘದ ಕಾರ್ಯಚಟುವಟಿಗೆಗಳಲ್ಲಿ ಬಾಗವಹಿಸಿ ಎಂದು ಮಾತ್ರ ನಿಮ್ಮಲ್ಲಿ ಕೇಳಿಕೊಳುತ್ತೇವೆ ನಮ್ಮ ಸಂಘದೊಂದಿಗೆ ಎಲ್ಲರೂ ಕೈ ಜೋಡಿಸಿ ಎಂದರು.
ಈ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಕೀರ್ತಿ ಶೆಟ್ಟಿ ಹಾಗೂ ಇತರೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಿವಾಕರ ಶೆಟ್ಟಿ ವಹಿಸಿ ಮಾತನಾಡಿ, ನಮ್ಮ ತಾಲ್ಲೂಕಿನಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಬಂಟರು ಸಂಘದ ಸದಸ್ಯರಾಗಬೇಕು ಹಾಗೂ ಬಂಟರ ಸಂಘದ ಎಳಿಗೆಗಾಗಿ ಎಲ್ಲರೂ ಶ್ರಮಿಸಬೇಕು ತಾಲ್ಲೂಕಿನಲ್ಲಿ ನಮ್ಮ ಸಂಘಕ್ಕೆ ಒಂದು ಸಬಾಭವನದ ಅವಶ್ಯಕತೆಯಿದ್ದು ನಿಮ್ಮೆಲ್ಲರ ಸಹಕಾರದೊಂದಿಗೆ ಜಾಗ ಮಾಡಿ ಸಭಾಭವನ ನಿರ್ಮಿಸಲು ಶ್ರಮಿಸುವುದಾಗಿ ಹಾಗೂ ಸಂಘದ ಸದಸ್ಯರ ಸಹಕಾರ ಅತ್ಯಮೂಲ್ಯವಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಬೆಂಗಳೂರು ಬಂಟರ ಸಂಘದ ನಿರ್ದೇಶಕಿ ಗೀತಾ ಶೆಟ್ಟಿ, ತಾಲ್ಲೂಕು ಬಂಟರ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ, ಉಪಾಧ್ಯಕ್ಷ ನಗರ ಚಂದ್ರಶೇಖರ ಶೆಟ್ಟಿ, ಮುಡುಬಾ ಶಿವರಾಮ್ ಶೆಟ್ಟಿ, ಸಂಪೆಕಟ್ಟೆ ಚಂದ್ರಶೇಖರ ಶೆಟ್ಟಿ, ಕಾರ್ಯದರ್ಶಿ ಶಿಕ್ಷಕ ನಾಗರಾಜ್, ಹೊಸನಗರ ತಾಲ್ಲೂಕಿನ ಕಾರ್ಯಕಾರಿ ಸಮಿತಿಯ ಎಲ್ಲ ನಿರ್ದೆಶಕರು ಹಾಗೂ ಸದಸ್ಯರು ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಮಾಲಶ್ರೀ ಶೆಟ್ಟಿ ನಿರೂಪಿಸಿದರು. ಕಾರ್ಯದರ್ಶಿ ನಾಗರಾಜ್ ಸ್ವಾಗತಿಸಿ, ವಂದಿಸಿದರು.