ಹೊಸನಗರ ; ಸರ್ಕಾರ ಜಾರಿಗೆ ತಂದಿರುವ ಕಲಿಕಾ ಹಬ್ಬ ಒಂದು ಉತ್ತಮ ಕಾರ್ಯಕ್ರಮವಾಗಿದೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಆಯೋಜಿಸಿರುವುದು ಇನ್ನೂ ಉತ್ತಮ ವಿದ್ಯಾರ್ಥಿಗಳು ಸಣ್ಣ ವಯಸ್ಸಿನಲ್ಲಿ ಕಲಿಕೆಯ ವಿಷಯದಲ್ಲಿ ಜಾಗೃತರಾದರೇ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುತ್ತಾರೆ ಶಿಕ್ಷಕರ ಜೊತೆಗೆ ವಿದ್ಯಾರ್ಥಿಗಳ ಪೋಷಕರು ಕೈಜೊಡಿಸಬೇಕೆಂದು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಹೆಚ್.ಆರ್ ಸುರೇಶ್ ಹೇಳಿದರು.
ಶಾಲಾ ಶಿಕ್ಷಕರ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ ಹೊಸನಗರ, ಪ.ಪಂ, ಗ್ರಾ.ಪಂ. ಮುಂಬಾರು ಹಾಗೂ ಎಂ. ಗುಡ್ಡೆಕೊಪ್ಪ, ಸಮೂಹ ಸಂಪನ್ಮೂಲ ಕೇಂದ್ರ ಹೊಸನಗರ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಪಾಠ ಶಾಲೆ ಹೊಸನಗರ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣ ಪಂಚಾಯತಿಯ ಕುವೆಂಪು ರಂಗಮಂದಿರದಲ್ಲಿ ಹೊಸನಗರ ಕ್ಲಸ್ಟರ್ ಮಟ್ಟದ ಎಫ್.ಎಲ್.ಎನ್ ಆಧಾರಿತ 2024-25ನೇ ಸಾಲಿನ ಕಲಿಕಾ ಹಬ್ಬವನ್ನು ಆಯೋಜಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನದಲ್ಲಿ ಖಾಸಗಿ ಶಾಲೆಗಳ ಅಬ್ಬರದ ಪ್ರಚಾರದಿಂದ ಸರ್ಕಾರಿ ಶಾಲೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಸರ್ಕಾರ ಇಂಥಹ ಕಾರ್ಯಕ್ರಮಗಳನ್ನು ಆಯೋಜಿಸವುದರಿಂದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಸಹಕಾರಿಯಾಗಲಿದೆ ಕಲಿಕೆಯ ಕಾರ್ಯಕ್ರಗಳ ಖರ್ಚು ವೆಚ್ಚಗಳನ್ನು ಸರ್ಕಾರವೇ ನೀಡುವುದರಿಮದ ಶಿಕ್ಷಕರಿಗೆ ಕಾರ್ಯಕ್ರ ಆಯೋಜಿಸುವಲ್ಲಿ ಮುಖ್ಯ ಭಾಗವಾಗಿ ಕೆಲಸ ಮಾಡುತ್ತಾರೆ ಈ ಕಲಿಕೆಯ ವಿಷಯದಲ್ಲಿ ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಲಿದ್ದು ಇಂತಹ ಕಾರ್ಯಕ್ರದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಬಾಗವಹಿಸಬೇಕೆಂದು ಕರೆ ನೀಡಿದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಬಸವಣ್ಯಪ್ಪನವರು ಮಾತನಾಡಿ, ಕಲಿಕೆಯ ವಿಷಯದಲ್ಲಿ ಯಾವುದೇ ತಾರತಮ್ಯವಿಲ್ಲದಂತೆ ಶಿಕ್ಷಕರು ಕಲಿಸುತ್ತಾರೆ ದಿನದ 8 ಗಂಟೆ ವಿದ್ಯಾರ್ಥಿಗಳು ಶಾಲೆಯಲ್ಲಿದ್ದು ಉಳಿದ 16ಗಂಟೆಯು ಪೋಷಕರ ಜೊತೆಗಿರುತ್ತಾರೆ ವಿದ್ಯಾರ್ಥಿಗಳ ಬಗ್ಗೆ ಮುತುವರ್ಜಿವಹಿಸುವುದು ಪೋಷಕರ ಅಧ್ಯ ಕರ್ತವ್ಯವಾಗಿದೆ ವಿದ್ಯಾರ್ಥಿಗಳು ಯಾವ ವಿಷಯದಲ್ಲಿ ತಮ್ಮ ಜ್ಞಾನ ಉಪಯೋಗಿಸುತ್ತಾರೆ ಎಂದು ತಿಳಿದು ಆ ವಿಷಯಕ್ಕೆ ಹೆಚ್ಚು ಒತ್ತು ನೀಡುವುದರಲ್ಲಿ ಪೋಷಕರು ಮುಂದಾದರೇ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ನೀವೇ ದಾರಿ ದೀಪ ಮಾಡಿಕೊಟ್ಟಾಂತಾಗುತ್ತದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದು ಶಿಕ್ಷಕರ ಹಾಗೂ ಪೋಷಕರ ನಡುವೆ ಇದ್ದು ಪ್ರತಿಯೊಬ್ಬರು ವಿದ್ಯಾರ್ಥಿಗಳ ಚಲನ-ವಲನ ಗಮನಿಸಿ ಸೂಕ್ತ ಸಲಹೆ ಮಾರ್ಗದರ್ಶನ ನೀಡಬೇಕೆಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷೆ ರೇಷ್ಮಾ ವಹಿಸಿದ್ದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕೆ.ಪಿ, ಬಡ್ತಿ ಶಿಕ್ಷಕರ ಸಂಘದ ಉಪಾಧ್ಯಕ್ಷರು ಹಾಗೂ ಬಾಲಕರ ಪಾಠ ಶಾಲೆಯ ಮುಖ್ಯ ಶಿಕ್ಷಕಿಯಾದ ಲಿಲ್ಲಿ ಡಿಸೋಜ, ಟಿಪಿಎಂಸಿ ವಿನಯ್ ಹೆಗಡೆ, ಸಹಾಯಕ ನಿರ್ದೆಶಕ ಶೇಷಾಚಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ ಗಣೇಶ್, ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಬಸವಣ್ಯಪ್ಪ, ಶಿಕ್ಷಕರ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ದೇವೆಂದ್ರಪ್ಪ, ಸಿಆರ್‌ಪಿಗಳಾದ ಮಂಜಪ್ಪ, ಸಿಆರ್‌ಪಿ ವಾಣಿ ಹಾಗೂ ಬಾಲಕರ ಪಾಠ ಶಾಲೆಯ ಎಲ್ಲ ಶಿಕ್ಷಕರು, ಇನ್ನೂ ಮುಂತಾದವರು ಭಾಗವಹಿಸಿದರು.