ಹೊಸನಗರ ; ಎಂ ಗುಡ್ಡೆಕೊಪ್ಪ ಗ್ರಾಮದ ಶಿವಶಂಕರ (57) ಅನಾರೋಗ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ನಿಧನರಾದರು.
ಇವರು ಹೊಸನಗರದ ಅಶೋಕ ರೈಸ್‌ಮಿಲ್ (ಶಿವಪ್ರಕಾಶ್ ಸಂಸ್ಥೆಯಲ್ಲಿ) ಸುಮಾರು 35 ವರ್ಷ ಸೇವೆ ಸಲ್ಲಿಸಿದ್ದು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗದವನ್ನು ಅಗಲಿದ್ದಾರೆ.
ಇವರ ಪಾರ್ಥಿವ ಶರೀರವನ್ನು ಶುಕ್ರವಾರ ಬೆಳಿಗ್ಗೆ ಅಶೋಕ ರೈಸ್‌ಮಿಲ್ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ನಂತರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಸಂತಾಪ :
ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ಅಶೋಕ ರೈಸ್ ಮಿಲ್ ಮಾಲೀಕ ಈಶ್ವರಪ್ಪ ಗೌಡ ಮತ್ತು ಕುಟುಂಬ, ದುಮ್ಮಾ ವಿನಯ್‌ಕುಮಾರ್, ಹೆಚ್. ಶ್ರೀನಿವಾಸ್, ಮುರುಳಿಧರ ಹತ್ತಾರ್, ಜಿ.ಟಿ ಈಶ್ವರಪ್ಪ ಗೌಡ, ಗುತ್ತಿಗೆದಾರ ಹೆಚ್.ಮಹಾಬಲ, ಗೌತಮ್ ಕುಮಾರಸ್ವಾಮಿ, ಹೆಚ್.ಆರ್. ಸುರೇಶ್ ಇನ್ನೂ ಮುಂತಾದವರು ಮೃತರ ಮನೆಗೆ ಭೇಟಿ ಮೃತರ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ ಹೇಳಿದರು.