ಹೊಸನಗರ ; ತಾಲ್ಲೂಕಿನ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿಯ ಅಧ್ಯಕ್ಷ ಪ್ರವೀಣ್ ಜಿ.ಎನ್ ಬಿಜೆಪಿ ಬೂತ್ ಸಮಿತಿ ಮತ್ತು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಪ್ರವಿಣ್ ಜಿ.ಎನ್‌ರವರು ತಮ್ಮ ರಾಜೀನಾಮೆ ಪತ್ರವನ್ನು ಹೊಸನಗರ ತಾಲ್ಲೂಕು ಬಿಜೆಪಿ ಕಛೇರಿಗೆ ತಲುಪಿಸಿದ್ದು ಅದರಲ್ಲಿ, 10 ವರ್ಷಗಳಿಂದ ಎಂ ಗುಡ್ಡೆಕೊಪ್ಪ ಗ್ರಾಮದ ಬೂತ್ ಸಂಖ್ಯಾ 251 ಬೂತ್ ಅಧ್ಯಕ್ಷನಾಗಿದ್ದು ನಮ್ಮ ಬಿಜೆಪಿ ಸರ್ಕಾರ ಇದ್ದಾಗಲೇ ನಮ್ಮ ಜಿಲ್ಲೆಯವರೇ ಆದಾ ಆರಗ ಜ್ಞಾನೇಂದ್ರರವರು ಗೃಹಮಂತ್ರಿಯಾಗಿದ್ದರೂ ನನ್ನ ಮೇಲೆ ಒಂದೇ ಒಂದು ದೂರು ಇಲ್ಲದಿದ್ದರೂ ನನಗೆ ರೌಡಿಶೀಟ್ ಹಾಕಿದ್ದು ಮತ್ತು ಬಿಜೆಪಿ ಹೊಸನಗರ ಮಂಡಲದ ಪ್ರಧಾನ ಕಾರ್ಯದರ್ಶಿಯವರು ಮತ್ತು ಕೆಲವು ಸದಸ್ಯರು ನನ್ನ ಮೇಲೆ ಸುಳ್ಳು ಆಪಾದನೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಪೋಸ್ಟರ್ ಹಾಕಿದ್ದು ಇದನ್ನೆಲ್ಲ ಪಕ್ಷದ ತಾಲ್ಲೂಕು ಅಧ್ಯಕ್ಷರ ಹಾಗೂ ಮುಖಂಡರ ಗಮನಕ್ಕೆ ಹಲವು ಬಾರಿ ತಂದರೂ ನಿರ್ಲಕ್ಷ್ಯ ತೋರಿರುವುದರಿಂದ ನಾನು ಬೂತ್ ಅಧ್ಯಕ್ಷ ಸ್ಥಾನಕ್ಕೆ ಮತ್ತು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.