ರಿಪ್ಪನ್‌ಪೇಟೆ ; ಮಹಿಳೆ ಅಬಲೆಯಲ್ಲ ಭಾರತ ದೇಶದಲ್ಲಿ ಮಹಿಳೆಗೆ ಗೌರವ ಸ್ಥಾನ ನೀಡಲಾಗಿದೆ. ರಾಜ್ಯದಲ್ಲಿ ಈಡಿಗ ಸಮಾಜ ನಾಲ್ಕನೇ ಸ್ಥಾನದಲ್ಲಿದೆ. ಸಮಾಜದ ಸಂಘಟನೆಯ ವಿಷಯದಲ್ಲಿ ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು ಎಂದು ಶಾಸಕ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ರಿಪ್ಪನ್‌ಪೇಟೆಯ ರಾಮಮಂದಿರದಲ್ಲಿ ಬ್ರಹ್ಮಶ್ರೀನಾರಾಯಣಗುರು ಧರ್ಮಪಾಲನಾ ಸಂಘ ರಾಜ್ಯ ಹಾಗೂ ಶಿವಮೊಗ್ಗ ಜಿಲ್ಲೆ ಮಹಿಳಾ ಘಟಕದವರು ಅಂತರಾಷ್ಟ್ರೀಯ ವಿಶ್ವ ಮಹಿಳಾ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರ ಈಡಿಗರ ನಿಗಮ ಸ್ಥಾಪನೆ ಮಾಡಿದ್ದಾರೆ ಹೊರತು ಹಣ ಬಿಡುಗಡೆ ಮಾಡಿಲ್ಲ. ಬೇರೆ ಸಮಾಜದ ನಿಗಮಕ್ಕೆ ನೀಡುವಷ್ಟು ಅನುದಾನ ನೀಡದೆ ಈಡಿಗ ಸಮಾಜವನ್ನು ಕಡೆಗಣಿಸಿದ್ದಾರೆಂದು ಬೇಸರ ವ್ಯಕ್ತಪಡಿಸಿ, ಬಂಗಾರಪ್ಪ ಮತ್ತು ಕಾಗೋಡು ತಿಮ್ಮಪ್ಪ ಸಮಾಜದ ಎರಡು ಕಣ್ಣು ಅವರು ಕಾಗೋಡು ಹೋರಾಟದೊಂದಿಗೆ ಗೇಣಿದಾರರ ಪರವಾಗಿ ಮತ್ತು ಶರಾವತಿ ಸಂತ್ರಸ್ತರ ಪರ ಧ್ವನಿಯಾಗಿ ಹೋರಾಟ ಮಾಡಿದ್ದಾರೆಂದು ಹೇಳಿ ನಾರಾಯಣಗುರುಗಳು ಮೌನಕ್ರಾಂತಿಯ ಮೂಲಕ ಮಹಿಳಾ ಸಮಾನತೆಯನ್ನು ತಂದವರು ಅಲ್ಲದೆ ಮಕ್ಕಳಿಗೆ ಶಿಕ್ಷಣ ಕೊಡಿಸಿ ಅವರನ್ನು ವಿದ್ಯಾವಂತರನ್ನಾಗಿ ಮಾಡಿ ಸಮಾಜದ ಉನ್ನತಿಗೆ ಶ್ರಮಿಸಿದವರು ಅವರ ತತ್ವ ಅದರ್ಶಗಳು ಇಂದಿಗೂ ಪ್ರಸ್ತುತ ಎಂದು ಹೇಳಿ ನಮ್ಮಲ್ಲಿಯೇ ಗುಂಪುಗಳಿದ್ದು ಅವುಗಳನ್ನು ಒಟ್ಟು ಗೂಡಿಸುವ ಬದಲು ಒಡೆಯವ ಪ್ರಯತ್ನ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿ ಸಮಾಜದ ಸಂಘಟನೆ ವಿಷಯದಲ್ಲಿ ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು ಎಂದರು.ಧರ್ಮಸ್ಥಳ ಸ್ವಸಹಾಯ ಸಂಘದವರು ಸಂಘಟನೆಯೊಂದಿಗೆ ಮಹಿಳೆಯರಲ್ಲಿ ಉಳಿತಾಯ ಮನೋಭಾವನೆ ಬೆಳೆಸಿ ಸ್ವಾವಲಂಬಿ ಬದುಕಿಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಅಭಿವೃದ್ದಿಯೊಂದಿಗೆ ಮಹಿಳೆಯರು ಪುರುಷ ಸಮಾಜದಲ್ಲಿ ಮಹಿಳೆ ಸಮಾನತೆ ಹೊಂದಿದ್ದಾರೆಂದರು.

ಸಮಾರಂಭದ ಅಧ್ಯಕ್ಷತೆಯನ್ನು ಬಿ.ಎಸ್.ಎನ್.ಡಿ.ಪಿ ಘಟಕದ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಲೇಖನಚಂದ್ರನಾಯ್ಕ್ ವಹಿಸುವರು.
ಮುಖ್ಯ ಅತಿಥಿಗಳಾಗಿ ಬಿ.ಎಸ್.ಎನ್.ಡಿ.ಪಿ. ಸಂಘಟನೆಯ ರಾಜ್ಯಾಧ್ಯಕ್ಷ ಸೈದಪ್ಪ ಕೆ.ಗುತ್ತೇದಾರ್ ಮತ್ತು ಪ್ರಧಾನ ಕಾರ್ಯದರ್ಶಿ ಕಾಂತರಾಜ್ ಆರ್ಯ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ರಾಘವೇಂದ್ರ ನಾಯ್ಕ್, ಬಿ.ನವೀನ್ ಚಂದ್ರಪೂಜಾರಿ, ಅಂಜನೇಯ, ಕೆ.ಓ.ಶಂಕರಣ್ಣ, ಮಮತಾ ಪೂಜಾರಿ, ಲಕ್ಷ್ಮಿನಾರಾಯಣಪ್ಪ, ಜಯಲಕ್ಷ್ಮಿ, ನಾಗೇಶ್, ಇನ್ನಿತರರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಸಾಧನೆ ಗೈದ ಗಣ್ಯರಾದ ರಾಷ್ಟ್ರಪ್ರಶಸ್ತಿ ವಿಜೇತ ಜಾನಪದ ಕಲಾವಿದೆ. ಡಾ.ಜಯಲಕ್ಷ್ಮಿ ನಾರಾಯಣಪ್ಪ, ಸೂಲಗಿತ್ತಿ ಜಯಮ್ಮ, ಜಾನಪದ ಕಲಾವಿದ ಲಕ್ಷ್ಮಿ ರಾಮಪ್ಪ, ಕರಕುಶಲತೆಯಲ್ಲಿ ಅತಿ ಹೆಚ್ಚು ಪರಿಣತ ರತ್ನಮ್ಮ ಜನಾರ್ಧನ,ಈಡಿಗ ಜಾನಪದ ಕಲಾವಿದ ಲಕ್ಷ್ಮಿ ಬಂಗಾರಪ್ಪ ಈ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕು.ವರ್ಷಿತಾ ಪ್ರಾರ್ಥಿಸಿದರು. ಕು.ಕಾವ್ಯ ಸ್ವಾಗತಿಸಿದರು. ಶಿಕ್ಷಕಿ ಅಂಬಿಕಾ ನಿರೂಪಿಸಿದರು. ಹೆಸರಾಂತ ಕಲಾ ತಂಡದವರಿಂದ ಜಾನಪದ ನೃತ್ಯ ರೂಪಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.