ವಾಟ್ಸ್ಆ್ಯಪ್‌ನಲ್ಲಿ ಬರುವ ಈ ಎಪಿಕೆ ಫೈಲ್‌ಗಳನ್ನು ತೆರೆಯುವ ಮುನ್ನ ಎಚ್ಚರ !

Written by malnadtimes.com

Published on:

ಹೊಸನಗರ ; ಇತ್ತೀಚಿನ ದಿನಗಳಲ್ಲಿ ತಮ್ಮ ಮೊಬೈಲ್‌ ವಾಟ್ಸ್ಆ್ಯಪ್‌ನಲ್ಲಿ ಪಿಎಂ ಕಿಸಾನ್ ಯೋಜನಾ, ಪಿಎಂ ಕಿಸಾನ್ ಇ-ಕೆವೈಸಿ ಅಪ್ಡೇಟ್ 1.0.1, ಪಿಎಂ ಕಿಸಾನ್ ನ್ಯೂ ಲಿಸ್ಟ್ 2024 ಎಂಬ ಎಪಿಕೆ ಹೆಸರಿನ ಫೈಲ್‌ಗಳನ್ನು ಅನಾಮಧೇಯ ವ್ಯಕ್ತಿಯಿಂದ ಅಥವಾ ತಮ್ಮ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿರುವವರಿಂದ ಮೆಸೇಜ್ ಕಳುಹಿಸಲಾಗುತ್ತಿದೆ.

WhatsApp Group Join Now
Telegram Group Join Now
Instagram Group Join Now

ದಯವಿಟ್ಟು ಈ ಎಪಿಕೆ ಫೈಲ್‌ಗಳನ್ನು ತೆರೆಯಲು ಪ್ರಯತ್ನಿಸಬೇಡಿ. ಕೆಲವೊಂದು ರೈತರು ಪಿಎಂ ಕಿಸಾನ್‌ ಯೋಜನೆಗೆ ಸಂಬಂಧಪಟ್ಟಿದ್ದೆಂದು ತೆರೆದಾಗ ಫೋನ್‌ ಹ್ಯಾಕ್‌ ಆಗುವುದು/ಹ್ಯಾಂಗ್‌ ಆಗುವುದು ಅಥವಾ ಬ್ಯಾಂಕ್‌ನಿಂದ ಹಣವನ್ನು ಕಳೆದುಕೊಂಡಿರುವುದು ನಮ್ಮ ಕಚೇರಿಯ ಗಮನಕ್ಕೆ ಬಂದಿರುತ್ತದೆ.

ಆದ್ದರಿಂದ ಈ ರೀತಿ ಮೆಸೇಜ್ ಗಳನ್ನು  ಕೂಡಲೇ ಡಿಲೀಟ್‌ ಮಾಡಲು ಹೊಸನಗರ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಚಿನ್ ಹೆಗಡೆ ಮನವಿ ಮಾಡಿದ್ದಾರೆ.

Leave a Comment