RIPPONPETE ; ಟಿ.ವಿ, ಮೊಬೈಲ್ ಗಳಿಂದಾಗಿ ನಮ್ಮ ಮೂಲ ಕಲೆ ಸಾಹಿತ್ಯ ಮೂಲೆ ಗುಂಪಾಗುವುದೆಂಬ ಸಂಶಯ ಎಲ್ಲರನ್ನು ಕಾಡುವಂತಹ ದಿನಗಳಲ್ಲಿ ಮಂಗಳೂರಿನ ಅರೆಹೊಳೆ ಪ್ರತಿಷ್ಟಾನ ನಂದಗೋಕುಲ ಕಲಾವಿದರು ತಮ್ಮ ನೃತ್ಯ ರೂಪಕದ ಮೂಲಕ ಸಾಂಸ್ಕೃತಿಕ ಕಲಾ ಲೋಕಕ್ಕೆ ಕಲಾಸಕ್ತರನ್ನು ಕರೆದೊಯ್ದಿದರು.
ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇವಾ ಸಮಿತಿಯವರು ಆಯೋಜಿಸಲಾದ ಗಣೇಶೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳೂರಿನ ಅರೆಹೊಳೆ ಪ್ರತಿಷ್ಟಾನ ನಂದಗೋಕುಲ ಕಲಾವಿದರು ತಮ್ಮ ನೃತ್ಯ ರೂಪಕದ ಮೂಲಕ ‘ಮಹಿಷಾಸುರ ಮರ್ಧಿನಿ’ ಗಣಪತಿ ಮಹಿಮೆ ಹೀಗೆ ಹತ್ತು ಹಲವು ನೃತ್ಯಗಳನ್ನು ಪ್ರದರ್ಶಿಸುವ ಮೂಲಕ ಕಲಾ ರಸಿಕರನ್ನು ಮಂತ್ರಮುಗ್ಧರನ್ನಾಗಿ ಮಾಡಿದರು.
ಯಕ್ಷಗಾನದ ಕಲಾ ಪ್ರಕಾರ ಮತ್ತು ಭರತನಾಟ್ಯದಂತಹ ಉಡುಗೆಗಳೊಂದಿಗೆ ಕೃಷ್ಣನ ಬಾಲಲೀಲೆಗಳು ಮತ್ತು ಅಷ್ಟಲಕ್ಷ್ಮಿಯರ ಕಥಾ ಪ್ರಸಂಗವನ್ನು ನೃತ್ಯ ರೂಪಕದ ಮೂಲಕ ಪ್ರದರ್ಶಿಸಿ ಕಲಾ ರಸಿಕರನ್ನು ತನ್ನ ಹಿಂದಿನ ಗತವೈಭವಕ್ಕೆ ಕರೆದೊಯ್ದರು.
ಈ ಸಂದರ್ಭದಲ್ಲಿ ಗಣೇಶೋತ್ಸವ ಸೇವಾ ಸಮಿತಿಯ ಅಧ್ಯಕ್ಷ ರಾಮಚಂದ್ರಬಳೆಗಾರ್, ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ಸುಧೀಂದ್ರ ಪೂಜಾರಿ, ಮುರುಳಿಧರ್ ಕೆರೆಹಳ್ಳಿ, ರವೀಂದ್ರ ಕೆರೆಹಳ್ಳಿ, ಹೆಚ್.ಎನ್.ಉಮೇಶ್, ವೈ.ಜೆ.ಕೃಷ್ಣ, ಈಶ್ವರ ಮಳಕೊಪ್ಪ, ನಾಗರಾಜ ಪವಾರ್, ರಾಘವೇಂದ್ರ ಚಿಪ್ಪಳಿ, ರಾಘವೇಂದ್ರ, ಪಿ.ಸುಧೀರ್, ಡಿ.ಈ.ರವಿಭೂಷಣ, ಆರ್.ರಾಘವೇಂದ್ರ, ಲಕ್ಷ್ಮಣ ಬಳ್ಳಾರಿ, ನಾಗರಾಜ ಕೆದಲುಗುಡ್ಡೆ, ಹೆಚ್.ಎನ್.ಚೋಳರಾಜ್, ಯೋಗೀಶ, ತೀರ್ಥೇಶ ಅಡಿಕಟ್ಟು, ಲಿಂಗಪ್ಪ, ಶ್ರೀನಿವಾಸ ಆಚಾರ್, ಬೇಕರಿ ನಾರಾಯಣ, ಲಕ್ಷ್ಮಣ ಆಟೋ, ಭೀಮರಾಜ್, ನವೀನ್, ಭಾಸ್ಕರ್, ಅಶೋಕ ಇನ್ನಿತರರು ಹಾಜರಿದ್ದರು.