RIPPONPETE ; ವೀರಶೈವ ಲಿಂಗಾಯಿತ ಜನಾಂಗದಲ್ಲಿ ಸಾಕಷ್ಟು ಉಪ ಪಂಗಡಗಳಿದ್ದರೂ ಕೂಡಾ ಸಂಘಟಿತರಾಗಿ ಸಮಾಜವನ್ನು ಸರಿದಾರಿಗೆ ತಂದು ನಮ್ಮ ಗುರು ವಿರಕ್ತರಲ್ಲಿನ ಪರಂಪರೆ ಬೇರೆ ಬೇರೆಯಾಗಿದರೂ ಕೂಡಾ ಧರ್ಮ ಬೋಧನೆಯು ಸಮಾಜಕ್ಕೆ ಮಾರ್ಗದರ್ಶನ ಮಾಡುವ ಗುರಿ ಒಂದೇ ಆಗಿರುತ್ತದೆಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಶ್ರೀಶಿವಲಿಂಗೇಶ್ವರ ಬೃಹನ್ಮಠದಲ್ಲಿ ಶಿಲಾಮಂಟಪ ಉದ್ಘಾಟನೆ ಕರ್ತೃ ಗದ್ದುಗೆ ಲಿಂಗ ಪ್ರತಿಷ್ಠಾಪನೆ ಗುರುನಿವಾಸ ಲೋಕಾರ್ಪಣೆ ಚಂದ್ರಶಾಲೆ ಉದ್ಘಾಟನೆ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಗುರುವಿರಕ್ತರ ಸಮಾಗಮ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಗುರು ಜ್ಞಾನ ಸಂಕೇತ. ವಿರಕ್ತ ವೈರಾಗ್ಯಕ್ಕೆ ಹೆಚ್ಚು ಆಧ್ಯತೆ ನೀಡಿದರೆ ಭಕ್ತರು ಭಕ್ತಿ ಹೊಂದಿದವರು ಪೂಜೆ ಮಾಡುವುದು ಶ್ರೇಷ್ಟ. ಪರಂಪರೆ ಭಕ್ತ ಪರಂಪರೆಯೇ ತ್ರಿವಳಿ ಸಂಗಮ ಎಂದರು.
ಮನೆ ಆಸ್ತಿ ಮಠ ಬಿಟ್ಟು ಗೆಡ್ಡೆ-ಗೆಣಸು ತಿಂದು ಕಠಿಣವಾಗಿ ತಪಸ್ವಿಯಾಗಿ ದೊರೆಯದ ಸೇವೆ ನಿಷ್ಟೆಮಾಡಿದರೆ ಪುಣ್ಯ ಪ್ರಾಪ್ತಿಯಾಗದು. ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಮಠದಲ್ಲಿನ ಕೊರತೆಯನ್ನು ನಿಭಾಯಿಸಿಕೊಂಡು ಭಕ್ತರ ಪ್ರೀತಿ ವಿಶ್ವಾಸಗಳಿಸಿದಾಗ ಮಾತ್ರ ಮಠದ ಕ್ರೀಯಾಶೀಲ ಪೀಠಾಧಿಕಾರಿಯಾಗಲು ಸಾಧ್ಯಯೆಂಬುದಕ್ಕೆ ಕೋಣಂದೂರು ಬೃಹನ್ಮಠದ ಶ್ರೀಗಳೇ ಪ್ರತ್ಯೇಕ್ಷ ಸಾಕ್ಷಿಯಾಗಿದ್ದಾರೆ.
ಮಡಿಲು ತುಂಬಿ ಸಮಾಜಕ್ಕೆ ನುಡಿ ತುಂಬುವ ಕೆಲಸ ಮಾಡಿದ್ದಾರೆ. ಗುರು ವಿರಕ್ತ ಎರಡು ಪರಂಪರೆ ಒಂದೆ ಆಗಿದೆ. ಕಣ್ಣು ಎರಡಾದರೂ ನೋಡುವ ದೃಷ್ಟಿ ಒಂದೇ. ಸಮಾಜದ ಕಲ್ಯಾಣ ಧರ್ಮದ ಅಭಿವೃದ್ದಿ ಎರಡು ಪರಂಪರೆ ಒಂದೇ ದೃಷ್ಟಿ ಕೋನದ ಕಡೆ ಸಾಗುವುದರಿಂದ ವೀರಶೈವ ಲಿಂಗಾಯಿತ ಸಮಾಜ ಸಂಘಟಿತರಾಗವಂತೆ ಶ್ರೀ ಕೋಣಂದೂರು ಬೃಹನ್ಮಠ ಗುರು ವಿರಕ್ತ ಸಮಾಗಮದ ಮೂಲಕ ಜಗದ್ಗುರುಗಳನ್ನು ಒಂದೆಡೆ ಸೇರಿಸುವ ಮಹಾತ್ಕಾರ್ಯ ಮಾಡಿದ್ದಾರೆಂದು ಹೇಳಿದರು.
ಆನಂದಪುರ ಮುರುಘಾರಾಜೇಂದ್ರ ಮಹಾಸಂಸ್ಥಾನ ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಜಿ ಆಶೀರ್ವಚನ ನೀಡಿ, ಒಂದು ಹೂವು ಸೂರ್ಯನ ಕಡೆ ತಿರುಗುತ್ತಿರುತ್ತದೆ. ಹಾಗೆ ನಮ್ಮ ದಾರಿ ಧರ್ಮದೆಡೆಗೆ. ಬೃಹನ್ಮಠ ಎಂಬ ಹೆಸರಿನಲ್ಲಿ ಬೃಹತ್ ಮಠ. ಆಸ್ತಿ ಅಂತಸ್ತು ಇಲ್ಲದೆ ಆಪಾರ ಭಕ್ತ ಸಮೂಹ ಪಡೆದಿರುವುದು ಈ ಮಠಕ್ಕೆ ಆಸ್ತಿ. ಫಲವತ್ತಾದ ಭೂಮಿಯಲ್ಲಿ ಬೀಜವನ್ನು ಉತ್ತಿದರೆ ಮಾತ್ರ ಉತ್ತಮ ಬೆಳೆ ಬೆಳೆಯಲು ಸಾಧ್ಯವೆಂಬುದಕ್ಕೆ ಇಲ್ಲಿನ ಶ್ರೀಗಳು ಭಕ್ತರ ಮನೆಮನದಲ್ಲಿ ಅಚ್ಚಳಿಯುವಂತೆ ಭಕ್ತರಲ್ಲಿ ಆಧ್ಯಾತ್ಮದ ಶಕ್ತಿ ತುಂಬಿ ಸಮಾಜಕ್ಕೆ ಕೊಟ್ಟರೆ ಸಮಾಜ ಸಂಪನ್ಮೂಲವನ್ನು ಕೊಟ್ಟಾಗ ಮಾತ್ರ ಮಠಗಳು ಸಮಾಜಮುಖಿ ಕೆಲಸ ಮಾಡುತ್ತವೆ ಎಂದುಕ್ಕೆ ಶ್ರೀಮಠವೇ ಸಾಕ್ಷಿಯಾಗಿದೆ.
ಸಂಸದ ಬಿ.ವೈ.ರಾಘವೇಂದ್ರ ಕಾರ್ಯಕ್ರಮದ ಉದ್ಘಾಟನೆ ನರೆವೇರಿಸಿ ಮಾತನಾಡಿ, ಗುರು-ವಿರಕ್ತರ ಗುರಿ ಒಂದೇ ಆಗಿದ್ದು ಸಮಾಜದ ಸಂಘಟನೆಯೊಂದಿಗೆ ರೇಣುಕರ ಮತ್ತು ಬಸವಾದಿ ಪ್ರಮಥರ ಸಂದೇಶವನ್ನು ನಮ್ಮ ಬದುಕಿನಲ್ಲಿ ಆಳವಡಿಸಿಕೊಂಡು ನೆಮ್ಮದಿಯ ಜೀವನ ನಡೆಸಲು ಇಂತಹ ಸಮಾಗಮದ ಮೂಲಕ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಕಾರ್ಯವನ್ನು ಇನ್ನೂ ಹೆಚ್ಚು-ಹೆಚ್ಚು ಮಾಡಿ ಸಮಾಜದಲ್ಲಿ ಜಾಗೃತಿಗೊಳಿಸುವ ಕೆಲಸ ಅಗತ್ಯವಿದೆ ಎಂದರು.
ಶಾಸಕ ಆರಗ ಜ್ಞಾನೇಂದ್ರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ತಾಲ್ಲೂಕ್ ಪಂಚಾಯಿತಿ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಅಖಿಲಭಾರತ ವೀರಶೈವ ಲಿಂಗಾಯಿತ ರಾಷ್ಟ್ರೀಯ ಮಹಿಳಾ ಘಟಕದ ಉಪಾಧ್ಯಕ್ಷೆ ವಿನುತಾರವಿ, ಉದ್ಯಮಿ ಕೆ.ಆರ್.ಪ್ರಕಾಶ್, ಕೋಣಂದೂರು ಗ್ರಾಮ ಪಂಚಾಯಿತ್ ಅಧ್ಯಕ್ಷ ಸತೀಶ ಮತ್ತು ಜಿಲ್ಲಾ ಮoಧೀಶರ ಪರಿಷತ್‌ನ ಮಠಾಧೀಶರುಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವೀರಶೈವ ಜ್ಞಾನಕಿರಣ’’ಗ್ರಂಥವನ್ನು ಬಿಡುಗಡೆ ಮಾಡಲಾಯಿತು ಮತ್ತು ಶ್ರೀಶೈಲ ಮಠದಿಂದ ಬೆಳಕೊಡು ಹಾಲಸ್ವಾಮಿಗೌಡರಿಗೆ “ಸೇವಾಭಾಸ್ಕರ’’ ಪ್ರಶಸ್ತಿ ಪ್ರದಾನ ಮಾಡಿ ಉಭಯ ಜಗದ್ಗುರುಗಳು ಆಶೀರ್ವದಿಸಿದರು.
ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮ ಅಭಿನವ ಚನ್ನಬಸವ ಮಹಾಸ್ವಾಮಿಜಿ ಸ್ವಾಗತಿಸಿದರು. ಶಾಂತಾ ಆನಂದ ನಿರೂಪಿಸಿದರು. ಜೆ.ಜಿ.ಸದಾನಂದ ವಂದಿಸಿದರು.