ತರೀಕೆರೆ ; ಶಾಲೆಯ ಯೂನಿಫಾರ್ಮ್ (Uniforms) ಇಲ್ಲವೆಂದು ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ತರಿಕೇರೆ (Tharikere) ತಾಲೂಕಿನ ಲಿಂಗದಹಳ್ಳಿ ಸಮೀಪದ ಸಹ್ಯಾದ್ರಿಪುರದಲ್ಲಿ ನಡೆದಿದೆ.
ಸಹ್ಯಾದ್ರಿಪುರದ ನಂದಿತಾ (13) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಎರಡು ವರ್ಷದ ಬಳಿಕ ಶಾಲೆಗೆ ತೆರಳಿದ್ದರಿಂದ ವಿದ್ಯಾರ್ಥಿನಿಯ ಬಳಿ ಹಳೆಯ ಸಮವಸ್ತ್ರ ಕೂಡ ಇಲ್ಲದೇ ತೆರಳಿದ್ದಳು. ಶಾಲೆಯಲ್ಲಿ ಸಮವಸ್ತ್ರ ಧರಿಸದ ಬಗ್ಗೆ ವಿದ್ಯಾರ್ಥಿನಿಯ ಶಿಕ್ಷಕರು ಪ್ರಶ್ನಿಸಿದ್ದರು ಎನ್ನಲಾಗಿದೆ. ಆ ಬಳಿಕ ಮನೆಗೆ ಬಂದು ಪೋಷಕರ ಬಳಿ ಸಮವಸ್ತ್ರದ ಬಗ್ಗೆ ವಿಚಾರಿಸಿದ್ದಕ್ಕೆ ಎರಡು ದಿನದಲ್ಲಿ ಸಮವಸ್ತ್ರ ದೊರಕಲಿದೆ ಎಂದು ವಿದ್ಯಾರ್ಥಿನಿ ತಂದೆ ಉತ್ತರಿಸಿದ್ದರು. ಆದರೂ ಸಮವಸ್ತ್ರ ಇಲ್ಲವೆಂದು ಮನನೊಂದು ವಿಷ ಸೇವಿಸಿದ್ದಳು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ವಿದ್ಯಾರ್ಥಿನಿ ನಂದಿತಾ ಮೃತಪಟ್ಟಿದ್ದಾಳೆ.
ಈ ಘಟನೆ ಸಂಬಂಧ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯೂನಿಫಾರ್ಮ್ ವಿಚಾರವಾಗಿ ವಿದ್ಯಾರ್ಥಿಗಳಿಗೆ ಒತ್ತಡ ಹೇರಿಲ್ಲ ; ಬಿಇಒ
ಎರಡು ದಿನಗಳ ಹಿಂದಷ್ಟೇ ಸಮವಸ್ತ್ರಗಳ ಶಾಲೆಗಳಿಗೆ ನೀಡಲಾಗಿದೆ. ವಿದ್ಯಾರ್ಥಿಗಳು ಸಮವಸ್ತ್ರ ಹೊಲಿಸಿಕೊಳ್ಳಲು ತಡವಾಗುವುದರಿಂದ ಜುಲೈವರೆಗೂ ಮಕ್ಕಳ ಮೇಲೆ ಯಾವುದೇ ರೀತಿಯ ಒತ್ತಡ ಹೇರುವುದಿಲ್ಲ. ಯಾವ ಕಾರಣಕ್ಕಾಗಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ತಿಳಿದು ಬಂದಿಲ್ಲ.
– ರುದ್ರಪ್ಪ, ಬೀರೂರು ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.