ವರ್ಲ್ಡ್ ರಾಮಾಯಣ ಚಾಂಪಿಯನ್ ಪ್ರಶಸ್ತಿ ಪಡೆದ ಅಭಿಷೇಕ್ ಎಸ್ ಕಶ್ಯಪ್

Written by Mahesh Hindlemane

Updated on:

ಹೊಸನಗರ ; ಅಯೋಧ್ಯ ಫೌಂಡೇಶನ್ ಬೆಂಗಳೂರು ಇವರು ಹೊಸನಗರದಲ್ಲಿ ನಡೆಸಿದ ವರ್ಲ್ಡ್ ರಾಮಾಯಣ ಚಾಂಪಿಯನ್ ಶಿಪ್-2024 ಅಂತರಾಷ್ಟ್ರೀಯ ಮಟ್ಟದ ಪರೀಕ್ಷೆ ಸೀನಿಯರ್ ವಿಭಾಗದಲ್ಲಿ ಹೊಸನಗರದ ಅಭಿಷೇಕ್ ಎಸ್ ಕಶ್ಯಪ್‌ರವರು ಪ್ರಥಮ ಸ್ಥಾನ ಹಾಗೂ ಬಹುಮಾನ ಪಡೆದಿದ್ದು ಪ್ರಥಮ ಸ್ಥಾನ ಪಡೆದ ಕುಟುಂಬ ಸಮೇತ ಉಚಿತ ಅಯೋಧ್ಯ ಪ್ರವಾಸ ಹಾಗೂ ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರವನ್ನು ಫೆಬ್ರವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿತರಿಸಲಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅಭಿಷೇಕ್ ಕಶ್ಯಪ್‌ರವರು ಶ್ರೀ ರಾಮಕೃಷ್ಣ ವಿದ್ಯಾ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದು ಇವರು ಗುಬ್ಬಿಗಾ ಸುನೀಲ್ ಹಾಗೂ ಕೃಪರವರ ಪುತ್ರ ಹಾಗೂ ಸ್ಪೋಟ್ಸ್ ಅಸೋಸಿಯೇಷನ್ ಕ್ಲಬ್ ಅಧ್ಯಕ್ಷ ಗುಬ್ಬಿಗಾ ಅನಂತರಾವ್‌ರವರ ಮೊಮ್ಮಗನಾಗಿರುತ್ತಾರೆ.

ಅಭಿನಂದನೆ ;

ಇವರ ಈ ಸಾಧನೆಗೆ ಹೊಸನಗರ ಸಾರ್ವಜನಿಕರು ಹಾಗೂ ಗುಬ್ಬಿಗಾ ಗ್ರಾಮಸ್ಥರು ಅಭಿನಂದಿಸಿ ಹೊಸನಗರ ತಾಲ್ಲೂಕಿನ ಹೆಸರು ಅಯೋಧ್ಯೆಯವರೆಗೆ ಕೊಂಡೊಯ್ಯಲಿ ಎಂದು ಹಾರೈಸಿದ್ದಾರೆ.

Leave a Comment