ಅಡಿಕೆ ತೋಟದಲ್ಲಿದ್ದ ಔಷಧಿ ಡ್ರಂಗೆ ವಿಷಕಾರಕ ಕೀಟನಾಟಕ ಬೆರೆಸಿದ ಕಿಡಿಗೇಡಿಗಳು

Written by Koushik G K

Published on:

ತೀರ್ಥಹಳ್ಳಿ ; ಅಡಿಕೆ ತೋಟದ ಅಡಿಕೆ ಮರಕ್ಕೆ ಔಷಧಿ ಹೊಡೆಯಲು ಇಟ್ಟಿದ್ದ ಡ್ರಂಗೆ ಕಿಡಿಗೇಡಿಗಳು ಸುಣ್ಣ ಮತ್ತು ರಾಳಕ್ಕೆ ವಿಷಕಾರಕ ಕೀಟನಾಶಕವನ್ನು ಔಷಧಕ್ಕೆ ಮಿಶ್ರಣ ಮಾಡಿರುವುದರಿಂದ ಗೊತ್ತಿಲ್ಲದೆ ಔಷಧಿಯನ್ನು ಸಿಂಪಡಣೆ ಮಾಡಿರುವುದರಿಂದ 300ಕ್ಕೂ ಹೆಚ್ಚು ಫಸಲು ಬರುವ ಅಡಿಕೆ ಮರಗಳು ಸುಟ್ಟು ಹೋದ ಘಟನೆ ತಾಲೂಕಿನ ಹೆಗ್ಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೇಕೊಪ್ಪ ಗ್ರಾಮದಲ್ಲಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಈ ಗ್ರಾಮದ ಶಂಕ್ರಪ್ಪಗೌಡ ಎಂಬುವವರ ತೋಟದಲ್ಲಿ ಔಷಧಿ ಹೊಡೆಯಲು ಸುಣ್ಣ ಮತ್ತು ರಾಳವನ್ನು ಮಿಶ್ರಿತ ಮಾಡಿ ಇಡಲಾಗಿತ್ತು. ಈ ಮಿಶ್ರಿತ ಡ್ರಂಗೆ ಕಿಡಿಗೇಡಿಗಳು ವಿಷವನ್ನು ಬೆರೆಸಿರುವುದರಿಂದ ಗೊತ್ತಾಗದೆ ಗೊನೆಗಾರರು ಔಷಧಿಯನ್ನು ಸಿಂಪಡಿಸಿದ್ದಾರೆ.

ಔಷಧಿ ಸಿಂಪಡಿಸಿ ಎರಡ್ಮೂರು ದಿನಕ್ಕೆ ಅಡಿಕೆ ಗಿಡಗಳು ಸುಟ್ಟು ಹೋಗುತ್ತಿರುವುದನ್ನು ಗಮನಿಸಿದ ಮನೆಯ ಮಾಲೀಕರು ತೋಟದ ಔಷಧಿಯವರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಿದಾಗ ಸುಣ್ಣ ಮತ್ತು ರಾಳ ಮಿಶ್ರಿತ ಡಂಗೆ ಕಿಡಿಗೇಡಿಗಳು ಬೇರೆ ಪಾಯಿಸನ್ ವಸ್ತು ಸೇರ್ಪಡೆಯಾಗಿರುವುದು ತಿಳಿದು ಬಂದಿದೆ.

ಈ ಘಟನೆ ಬಗ್ಗೆ ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜು.24 | ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶದಲ್ಲಿ ಎಷ್ಟಾಗಿದೆ ಮಳೆ ?

Leave a Comment