ಹೊಸನಗರ

ಹೊಸನಗರದ ಅಕ್ಷಯ್ ಶಾಂತಾರಾಮ್‌ಗೆ ಪಿಎಚ್‌ಡಿ ಪದವಿ

ಹೊಸನಗರದ ಅಕ್ಷಯ್ ಶಾಂತಾರಾಮ್‌ಗೆ ಪಿಎಚ್‌ಡಿ ಪದವಿ – InShot 20260721 183756190

ಹೊಸನಗರ : ಅಮೃತ ವಿಶ್ವವಿದ್ಯಾಪೀಠ ಮೈಸೂರು ಕ್ಯಾಂಪಸ್‌ನ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪ ಮುಖ್ಯಸ್ಥ ಹಾಗೂ ಸಹ ಪ್ರಾಧ್ಯಾಪಕ ಡಾ. ಅಕ್ಷಯ್ ಶಾಂತಾರಾಮ್ ಪಿಎಚ್‌ಡಿ ಸಂಶೋಧನಾ ಪ್ರಬಂಧಕ್ಕೆ ವಿಶ್ವವಿದ್ಯಾಲಯದಿಂದ ಅಂಗೀಕಾರ ದೊರೆತಿದೆ.

WhatsApp Group Join Now
Telegram Group Join Now
Instagram Group Join Now

ಅವರು “ಎ ಮಷಿನ್ ಲರ್ನಿಂಗ್ ಫ್ರೇಮ್‌ವರ್ಕ್ ಟು ಐಡೆಂಟಿಫೈ ದಿ ಎಫೆಕ್ಟ್ ಆಫ್ ಪಾರ್ಕಿನ್ಸನ್ಸ್ ಡಿಸೀಸ್ ಆನ್ ವಿಷುಯಲ್ ಕಾಗ್ನಿಷನ್ ಅಬಿಲಿಟೀಸ್” ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿದ್ದು, ಈ ಸಂಶೋಧನೆಯನ್ನು ಅಮೃತ ವಿಶ್ವವಿದ್ಯಾಪೀಠದ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಡಾ. ಅಮುದ ಜಿ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಈ ಸಂಶೋಧನೆಯು ಕೃತಕ ಬುದ್ಧಿಮತ್ತೆ ಹಾಗೂ ಯಂತ್ರ ಕಲಿಕೆ ತಂತ್ರಜ್ಞಾನಗಳ ನೆರವಿನಿಂದ ಪಾರ್ಕಿನ್ಸನ್ಸ್ ಕಾಯಿಲೆಯು ದೃಷ್ಟಿ-ಜ್ಞಾನ ಸಾಮರ್ಥ್ಯದ ಮೇಲೆ ಬೀರುವ ಪರಿಣಾಮವನ್ನು ಗುರುತಿಸಲು ನೂತನ ವಿಧಾನವನ್ನು ಅಭಿವೃದ್ಧಿಪಡಿಸಿದ್ದು, ನರಸಂಬಂಧಿ ಕಾಯಿಲೆಗಳ ಆರಂಭಿಕ ಪತ್ತೆ ಹಾಗೂ ವೈದ್ಯಕೀಯ ನಿರ್ಧಾರ ಪ್ರಕ್ರಿಯೆಗೆ ಮಹತ್ವದ ಕೊಡುಗೆ ನೀಡುವ ನಿರೀಕ್ಷೆಯಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಡಾ.ಅಕ್ಷಯ್ ಶಾಂತಾರಾಮ್ ಹೊಸನಗರ ಪಟ್ಟಣದ ಹಿರಿಯ ಪತ್ರಕರ್ತ ಶಾಂತಾರಾಮ್ ಹಾಗೂ ಅಮೃತ ದಂಪತಿ ಪುತ್ರ.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]