HOSANAGARA ; ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ, ಶಿವಮೊಗ್ಗದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಶ್ರೀ ರಾಮಚಂದ್ರಪುರ ಮಠ, ಶ್ರೀ ಕ್ಷೇತ್ರ ಸಿಗಂದೂರು, ಪಟ್ಟಣ ಪಂಚಾಯತ್ ನವಜೀವನ ಸಮಿತಿ ಗಾಯತ್ರಿ ಮಂದಿರ ವ್ಯವಸ್ಥಾಪನ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಪಟ್ಟಣದ ಶ್ರೀ ಗಾಯತ್ರಿ ಮಂದಿರದಲ್ಲಿ 1897ನೇ ಮದ್ಯ ವರ್ಜನ ಶಿಬಿರ ಜಿಲ್ಲಾ ಜನಜಾಗೃತಿ ಯೋಜನೆಯ ಸದಸ್ಯ ಎನ್.ಆರ್. ದೇವಾನಂದ್ ಅಧ್ಯಕ್ಷತೆಯಲ್ಲಿ ಮೂಲೆಗದ್ದೆ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮಿಗಳವರು ಉದ್ಘಾಟಿಸಿ, ದುಷ್ಚಟಗಳಿಂದ ದೂರವಿದ್ದು ಪ್ರೀತಿ ವಿಶ್ವಾಸಗಳ ಮೂಲಕ ಮನಃಪರಿವರ್ತನೆ ಮಾಡಿ ಹೊಸ ಜೀವನವನ್ನು ಆರಂಭಿಸುವಂತೆ ಯುವ ಪೀಳಿಗೆಗೆ ಕರೆ ನೀಡಿದರು.
ಇದೊಂದು ಪವಾಡ ಸದೃಷ್ಟ ಕಾರ್ಯಕ್ರಮವಾಗಿದೆ ಎಂದ ಶೀಗಳವರು ಈಗಾಗಲೇ ಶ್ರೀ ಕ್ಷೇತ್ರ ಧರ್ಮಸ್ಥಳದ ಮದ್ಯವರ್ಜನ ಶಿಬಿರಗಳಿಂದ ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಮದ್ಯ ವರ್ಜಿಸಿದ್ದ ಪರಿಣಾಮ ಈ ಕುಟುಂಬಗಳು ಎಲ್ಲರಂತೆ ಉತ್ತಮ ಸಂಸಾರಸ್ಥರಾಗಿ ಜೀವನ ನಿರ್ವಹಣೆ ಮಾಡುತ್ತಿರುವುದು ಶ್ಲಾಘನೀಯವೆಂದರು.
ಈ ಸಮಾರಂಭದಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕ ಮುರಳಿಧರ ಶೆಟ್ಟಿ, ಸಿಪಿಐ ಗುರಣ್ಣ ಎಸ್ ಹೆಬ್ಬಾಳ್, ಪಪಂ ಮಾಜಿ ಅಧ್ಯಕ್ಷ ಹೆಚ್.ಎನ್ ಶ್ರೀಪತಿ ರಾವ್, ಒಕ್ಕೂಟದ ಅಧ್ಯಕ್ಷೆ ವಸಂತಿ ರಮೇಶ್, ಮಹಿಳಾ ಸಿರಿ ಕನ್ನಡ ವೇದಿಕೆಯ ಶಶಿಕಲಾ ಮಲ್ಲಪ್ಪ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ನಾಗರತ್ನ ದೇವರಾಜ್, ಪಪಂ ಮಾಜಿ ಉಪಾಧ್ಯಕ್ಷೆ ಕೃಷ್ಣವೇಣಿ, ವರ್ತಕರ ಸಂಘದ ವಿಜೇಂದ್ರ ಶೇಟ್ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ನಾಗರತ್ನ ದೇವರಾಜ್ ಪ್ರಾರ್ಥಿಸಿದರು. ಯೋಜನಾಧಿಕಾರಿ ಪ್ರದೀಪ್ ಸ್ವಾಗತಿಸಿದರು. ಯೋಜನಾಧಿಕಾರಿ ನಾಗರಾಜ್ ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಜನ ಜಾಗೃತಿಯ ನಾರಾಯಣ ಕಾಮತ್ ಅಭಾರ ಮನ್ನಿಸಿದರು.