ಹೊಸನಗರ : ಯಾವುದೇ ಒಂದು ಸಂಘ-ಸಂಸ್ಥೆಗಳು ಗಾಳಿಯಲ್ಲಿ ದೀಪ ಉರಿದಂತೆ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿರುತ್ತದೆ ಗಾಳಿಗೆ ದೀಪ ಉರಿಯಲು ಬಹುದು ಅದೇ ಹೆಚ್ಚು ಗಾಳಿ ಬೀಸಿದರೆ ಆರಿ ಹೋಗಬಹುದು. ಯಾವುದೇ ಸಂಘ-ಸಂಸ್ಥೆ ಬೆಳೆದು ಹೆಮ್ಮರವಾಗಬೇಕಾದರೆ ಆ ಸಂಸ್ಥೆಗಳಲ್ಲಿರುವ ಸದಸ್ಯರ ಶಿಸ್ತು-ಸಂಯಮ ಹಾಗೂ ಗುಣ ನಡತೆಯಿಂದ ಸಂಸ್ಥೆ ಬೆಳೆಯಲು, ಬೆಳೆಸಲು ಸಹಕಾರಿಯಾಗುತ್ತದೆ ಸಂಘ-ಸಂಸ್ಥೆ ಬೆಳೆಯಬೇಕಾದರೆ ಬೆನ್ನ ಹಿಂದೆ ಇರುವ ಸದಸ್ಯರ ಪಾತ್ರ ಹಿರಿದಾಗಿರುತ್ತದೆ ಎಂದು ಸ್ಪೋಟ್ಸ್ ಅಸೋಸಿಯೇಷನ್ ಕ್ಲಬ್ ಅಧ್ಯಕ್ಷ ಗುಬ್ಬಿಗಾ ಅನಂತರಾವ್ ಹೇಳಿದರು.
ಇಲ್ಲಿನ ಸ್ಪೋಟ್ಸ್ ಅಸೋಸಿಯೇಷನ್ ಕ್ಲಬ್ ಆವರಣದಲ್ಲಿ ಕ್ಲಬ್‌ನ ಸರ್ವ ಸದಸ್ಯರ ಸಭೆ ನಡೆಸಲಾಗಿದ್ದು ಈ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ನಮ್ಮ ಈ ಸಂಸ್ಥೆಗೆ ಸುಮಾರು 63 ವರ್ಷಗಳು ಕಳೆದಿದೆ ನಮ್ಮ ಸಂಸ್ಥೆಯ ವತಿಯಿಂದ ಮಕ್ಕಳಿಗೆ ಜೋಕಾಲಿ, ಜಾರುಬಂಡಿ, ತೊಟ್ಟಿಲು, ವ್ಯಾಯಾಮ ಶಾಲೆಗಳು ಇತ್ಯಾದಿಗಳನ್ನು ನಮ್ಮ ಸಂಸ್ಥೆಯ ಸದಸ್ಯರ ಸಹಕಾರದೊಂದಿಗೆ ಇಲ್ಲಿಯವರೆಗೆ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದೇವೆ. ನಮ್ಮ ಸಂಸ್ಥೆಯ ವತಿಯಿಂದ ಮರಣ ನಿಧಿಯನ್ನು ತೆರೆಯಲಾಗಿದ್ದು ನಮ್ಮ ಸಂಸ್ಥೆಯ ಯಾವುದೇ ಸದಸ್ಯರು ಮರಣ ಹೊಂದಿದ್ದಲ್ಲಿ ತಕ್ಷಣವೇ ಅವರ ಕುಟುಂಬಕ್ಕೆ 10 ಸಾವಿರ ಮರಣ ನಿಧಿಯ ಹಣವನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ.
ಶಾಲಾ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಪಿಯುಸಿ, ಡಿಗ್ರಿಯಲ್ಲಿ ಅತೀ ಹೆಚ್ಚು ಅಂಕ ಪಡೆದವರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಆನಾರೋಗ್ಯ ಪೀಡಿತರಿಗೆ ಬಡವರಿಗೆ ನಮ್ಮ ಸಂಸ್ಥೆಯಿಂದ ಸಹಾಯ ಹಸ್ತವನ್ನು ನೀಡುವ ವ್ಯವಸ್ಥೆಯನ್ನು ನಮ್ಮ ಸಂಸ್ಥೆ ಮಾಡುತ್ತಾ ಬಂದಿದೆ. ಈ ಸಂಸ್ಥೆಯ ಸದಸ್ಯರ ಸಹಕಾರದೊಂದಿಗೆ ಈ ಕಟ್ಟಡದ ಮೇಲ್ಬಾಗ ಕಟ್ಟಡವನ್ನು ನಿರ್ಮಿಸಿ ಇನ್ನೂ ಹೆಚ್ಚಿನ ಸದಸ್ಯರನ್ನು ಸೇರಿಸಿ ಸಂಸ್ಥೆಯನ್ನು ಬೆಳೆಸುವ ಉದ್ದೇಶ ಹೊಂದಿದ್ದು ನಮ್ಮ ಸಂಸ್ಥೆಯ ಸದಸ್ಯರ ಸಹಕಾರ ಅತ್ಯಗತ್ಯವೆಂದರು.
ನಮ್ಮ ಸಂಸ್ಥೆಯ ಜನಪರ ಕೆಲಸದಿಂದ ಉಳಿದಿದೆ :
ನಾವು ಈ ಸಂಸ್ಥೆ ಕಟ್ಟಿ ಬೆಳೆಸುತ್ತಿರುವುದು ಹಣ ಮಾಡುವ ಉದ್ದೇಶ ಹೊಂದಿಲ್ಲ ನಮ್ಮ ಸಂಸ್ಥೆಯಿಂದ ಬಡವರಿಗೆ ಶಾಲೆ, ಕಾಲೇಜ್ ವಿದ್ಯಾರ್ಥಿಗಳಿಗೆ ಅನಾರೋಗ್ಯ ಪೀಡಿತರಿಗೆ ಹಾಗೂ ಕ್ರೀಡಾ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ಹಾಗೂ ನಾಡ ಹಬ್ಬಗಳಂಥಹ ಕಾರ್ಯಕ್ರಮಗಳಿಗೆ ನಮ್ಮ ಸಂಸ್ಥೆ ತಮ್ಮಿಂದಾಗುವ ಕೆಲಸ ಮಾಡುತ್ತಿದ್ದು ಸದಾ ಹೊಸನಗರ ಜನತೆಯ ಶ್ರೇಯಸ್ಸಿಗಾಗಿ ನಮ್ಮ ಸಂಸ್ಥೆ ದುಡಿಯುತ್ತಿದೆ ಎಂದರು.

ಕಟ್ಟೆ ಸುರೇಶ್‌ರಿಗೆ ಸನ್ಮಾನ ;
ಸುಮಾರು ಮೂವತ್ತು ವರ್ಷಗಳ ಕಾಲ ಈ ಸಂಸ್ಥೆಯ ವ್ಯವಸ್ಥಾಪಕರಾಗಿ ಹೊಸನಗರದಲ್ಲಿ ಯಾವುದೇ ಜಾತಿ-ಧರ್ಮ ಬೇಧವಿಲ್ಲದೇ ಕಷ್ಟ ಸುಖಗಳಲ್ಲಿ ಭಾಗವಹಿಸಿ ಎಲ್ಲಾ ಜಾತಿ-ಧರ್ಮದವರಿಗೆ ಬೆನ್ನೆಲುಬಾಗಿ ಹಗಲು-ರಾತ್ರಿ ಎನ್ನದೇ ಸಮಾಜ ಸೇವೆ ಮಾಡುತ್ತಿರುವ ಕಟ್ಟೆ ಸುರೇಶ್‌ರನ್ನು ಈ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಸ್ಪೋಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಬ್ಯಾಂಕ್ ಬಿ.ಎಂ. ಶ್ರೀಧರ್, ಮಾಜಿ ಅಧ್ಯಕ್ಷರುಗಳಾದ ಉಮೇಶ್ ಕಂಚುಗಾರ್, ಕಲ್ಯಾಣಪ್ಪ ಗೌಡ, ಕಳೂರು ಸೊಸೈಟಿಯ ಅಧ್ಯಕ್ಷರಾದ ದುಮ್ಮ ವಿನಯಕುಮಾರ್, ನಿರ್ದೆಶಕರುಗಳಾದ ಎಂ.ವಿ ಸುರೇಶ್, ಖಜಾಂಚಿ ಎಂ.ಪಿ.ಸುರೇಶ್, ಬಿ.ಎಸ್ ಸುರೇಶ್, ಕೆ.ಬಿ ಸತೀಶ, ಸತ್ಯನಾರಾಯಣ, ಸಂಸ್ಥೆಯ ಮ್ಯಾನೇಜರ್ ಕಟ್ಟೆ ಸುರೇಶ್, ಕೃಷ್ಣಮೂರ್ತಿ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ವಾಲೇಮನೆ ನಾಗೇಶ್, ಮಹೇಂದ್ರ, ಸದಸ್ಯರಾದ ತಿಮ್ಮಪ್ಪ, ಬಾಬುರಾವ್, ಸ್ವಾಮಿ, ದತ್ತಾತ್ರೇಯ ಉಡುಪ, ಕೋಲ್ಡ್ ಮಂಜುನಾಥ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.