ಹೊಸನಗರ ; ತಾಲೂಕಿನ ಶಕ್ತಿದೇವತೆ ಎಂದೇ ಭಕ್ತಾದಿಗಳಿಂದ ಆರಾಧಿಸಲ್ಪಡುವ ಕೋಡೂರು ಸಮೀಪದ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಿಯ ನೂತನ ಶಿಲಾಮಯ ದೇವಸ್ಥಾನವು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ದೇವಸ್ಥಾನ ಅಭಿವೃದ್ಧಿ ಸಮಿತಿಯ ಹಿಂದಿನ ಅವಧಿಯ ಕಾರ‍್ಯಾಧ್ಯಕ್ಷ ಕಲಗೋಡು ರತ್ನಾಕರ ಅವರು ತಮ್ಮ ಅವಧಿಯಲ್ಲಿ ಭಕ್ತಾದಿಗಳಿಂದ ಸಂಗ್ರಹವಾಗಿದ್ದ ದೇಣಿಗೆ ಹಣ ಹಾಗೂ ಲೆಕ್ಕಪತ್ರಗಳನ್ನು ಮಾಜಿ ಶಾಸಕ ಡಾ.ಜಿ.ಡಿ.ನಾರಾಯಣಪ್ಪ ಸಮ್ಮುಖದಲ್ಲಿ ಮಂಗಳವಾರ ನೂತನ ಆಡಳಿತ ಸಮಿತಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಪ್ರಮುಖರಾದ ಬಂಡಿ ರಾಮಚಂದ್ರ, ಬಿ.ಜಿ.ಚಂದ್ರಮೌಳಿ, ತಾರಕೇಶ್ವರ, ಎಚ್.ಬಿ.ಚಿದಂಬರ, ಎರಗಿ ಉಮೇಶ, ರಾಮಚಂದ್ರಪ್ಪ, ಕೃಪಾನಂದರಾವ್, ಸಂತೋಷ್, ವೇದಾಂತಪ್ಪಗೌಡ ಹಾಗೂ ವ್ಯವಸ್ಥಾಪನಾ ಸಮಿತಿಯ ಪುಟ್ಟಪ್ಪ, ಸುಧೀರ ಭಟ್, ಹರೀಶ್, ವಿಜೇಂದ್ರರಾವ್, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.