HOSANAGARA | ಈ ದೇಶದಲ್ಲಿ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಒಬ್ಬರು ಕಿವಿಯಾದರೆ ಇನ್ನೊಬ್ಬರು ಮೂಗಿದಂತೆ ಕೋವಿಡ್ ಕಾಲದಲ್ಲಿ ಇವರ ಸೇವೆ ಅಮೋಘವಾಗಿದ್ದು ಸಾಕಷ್ಟು ಜನರ ಜೀವ ಉಳಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ (Dr. Dhananjaya Sarji) ಹೇಳಿದರು.
SHIVAMOGGA | ಬೆಳ್ಳಂಬೆಳಗ್ಗೆ ರೌಡಿಶೀಟರ್ ಕಾಲಿಗೆ ಗುಂಡೇಟು !
ಪಟ್ಟಣದ ಮಕ್ಕಳ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಆವರಣದಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾಟ್ ಫೋನ್ ವಿತರಿಸಿ ಮಾತನಾಡಿದರು.

ನಾವು ನಿಮ್ಮೊಂದಿಗಿದ್ದೇವೆ :
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರ, ನಾವು ನಿಮ್ಮೊಂದಿಗಿದ್ದೇವೆ. ಇಂದಿನ ಯುಗದಲ್ಲಿ ಪೇಪರ್, ಪೆನ್ ಕಡಿಮೆಯಾಗುತ್ತಿದ್ದು ತಕ್ಷಣ ಮಾಹಿತಿ ನೀಡಲು ಸ್ಮಾಟ್ ಫೋನ್‌ಗಳನ್ನು ವಿತರಿಸಲಾಗುತ್ತಿದೆ ಇದರಿಂದ ನಿಮಗೆ ಅನುಕೂಲಕರವಾಗಿದ್ದು ನಿಮ್ಮ ಯಾವುದೇ ಬೇಡಿಕೆಗಳಿಗೂ ನಾವು ಮತ್ತು ನಮ್ಮ ಸರ್ಕಾರ ನಿಮ್ಮ ಜೊತೆಗಿರುತ್ತೇವೆ ಎಂದರು.

ಈ ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ತಹಶೀಲ್ದಾರ್ ರಶ್ಮಿ ಹಾಲೇಶ್, ಶಿಶು ಅಭಿವೃದ್ಧಿ ಸಹಾಯಕ ನಿರ್ದೆಶಕ ಸುರೇಶ್, ಕಛೇರಿ ಅಧಿಕಾರಿ ರಾಜು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Dengue | ಮಹಾಮಾರಿ ಡೆಂಗ್ಯೂಗೆ ರಿಪ್ಪನ್‌ಪೇಟೆ ಮಹಿಳೆ ಬಲಿ !

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.