ಹೊಸನಗರ ; ಪ್ರಸಕ್ತ ಸಾಲಿನ ಉತ್ಪನ್ನಗಳ ಸಂಸ್ಕರಣೆ ಕಾರ್ಯಕ್ರಮದಡಿ ರೈತರಿಗೆ ಸಂಸ್ಕರಣಾ ಯಂತ್ರೋಪಕರಣಗಳ ವಿತರಣೆಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಹೊಸನಗರ ಸಹಾಯಕ ಕೃಷಿ ನಿರ್ದೆಶಕ ಸಚಿನ್ ಹೆಗಡೆ ತಿಳಿಸಿದರು.
ಕಬ್ಬಿನ ರಸ ತೆಗೆಯುವ ಯಂತ್ರ, ರೊಟ್ಟಿ ಮತ್ತು ಹಪ್ಪಳ ಮಾಡುವ ಯಂತ್ರ, ಶ್ಯಾವಿಗೆಯಂತ್ರ, ರೈಸ್ ಮಿಲ್ ಎಣ್ಣೆ ತೆಗೆಯುವ ಯಂತ್ರ, ಖಾರ/ಮಸಾಲೆ ಕುಟ್ಟುವ ಯಂತ್ರ, ರವಾಯಂತ್ರ, ಮೋಟಾರ್ ಚಾಲಿತ ಸಣ್ಣ ಎಣ್ಣೆಗಾಣಗಳನ್ನು ವಿತರಿಸಲಾಗುತ್ತದೆ.
ಸಾಮಾನ್ಯ ವರ್ಗದ ರೈತರಿಗೆ ಶೇ.50 ರಿಯಾಯಿತಿಯಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗದ ರೈತರಿಗೆ ಶೇ.90 ರಿಯಾಯಿತಿಯಲ್ಲಿ ಯಂತ್ರಗಳನ್ನು ನೀಡಲಾಗುತ್ತದೆ.
ಆಸಕ್ತ ರೈತರು ಪಹಣಿ (ಆರ್.ಟಿ.ಸಿ) ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಪುಸ್ತಕದ ಝೇರಾಕ್ಸ್ ಪ್ರತಿಗಳನ್ನು, ಎರಡು ಭಾವಚಿತ್ರ ಹಾಗೂ 100 ರೂಪಾಯಿಯ ಛಾಪ ಕಾಗದದೊಂದಿಗೆ ತಮ್ಮ ಹೋಬಳಿಯಲ್ಲಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಯನ್ನು ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.