ಹೊಸನಗರ

NHM ಯೋಜನೆಯಡಿ ಸಹಾಯಧನ ಪಡೆಯಲು ರೈತರಿಂದ ಅರ್ಜಿ ಆಹ್ವಾನ

NHM ಯೋಜನೆಯಡಿ ಸಹಾಯಧನ ಪಡೆಯಲು ರೈತರಿಂದ ಅರ್ಜಿ ಆಹ್ವಾನ – InShot 20260720 190219507

ಹೊಸನಗರ ; 2026- 27ನೇ ಸಾಲಿನ ರಾಷ್ಟ್ರೀಯ ತೋಟಗಾರಿಕಾ ಮಿಷನ್ (NHM) ಯೋಜನೆಯಡಿಯಲ್ಲಿ ಅಡಿಕೆ ಎಲೆಚುಕ್ಕೆ ರೋಗದ ನಿಯಂತ್ರಣಕ್ಕೆ ಹೊಸನಗರ ತಾಲೂಕಿನ ರೈತ ಬಾಂಧವರು ಮೈಲುತುತ್ತ, ಪ್ರೋಪಿಕೋನಾಜೋಲ್, ಪ್ರೋಪಿನೆಬ್, ಟೇಬುಕೋನಾಜೋಲ್ ಖರೀದಿಸಿ ಉಪಯೋಗಿಸಿಕೊಂಡಿದ್ದಲ್ಲಿ ಪ್ರಸಕ್ತ ವರ್ಷದಲ್ಲಿ ಖರೀದಿಸಿದ GST ಬಿಲ್, ಜಮೀನಿನ ಅಡಿಕೆ ಬೆಳೆ ಹೋಂದಿರುವ RTC, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ನೊಂದಿಗೆ ಕಚೇರಿಯಲ್ಲಿ ಲಭ್ಯವಿರುವ ಅರ್ಜಿಯನ್ನು ಭರ್ತಿ ಮಾಡಿ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಲು ಹೊಸನಗರ ಹಿ.ತೋ.ಇ. ನಿರ್ದೇಶಕ ಟಿ.ಸಿ. ಪುಟ್ಟಾನಾಯ್ಕ ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಪ್ರತಿ ಫಲಾನುಭವಿಗೆ ಗರಿಷ್ಠ 2 ಹೆಕ್ಟರ್ ವಿಸ್ತೀರ್ಣಕ್ಕೆ ಗರಿಷ್ಠ ₹ 3000 ಸಹಾಯಧನ ನೀಡಲಾಗುವುದು. ರೈತ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಿದ್ದು, ಮುಂದುವರೆದು SC/ST ರೈತರು ಈ ಮೇಲೆ ತಿಳಿಸಿದ ದಾಖಲೆಯೊಂದಿಗೆ ಜಾತಿ ಪ್ರಮಾಣ ಪತ್ರ ನೀಡಲು ಕೋರಲಾಗಿದೆ.

ಇದಲ್ಲದೆ ಕೀಟರೋಗ ನಿಯಂತ್ರಣ ಯೋಜನೆ (NHM) ಅಡಿಯಲ್ಲಿ ಮೈಲುತುತ್ತ ಖರೀದಿಸಿದ ರೈತರು. ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದಲ್ಲಿ ಪ್ರತಿ ರೈತರಿಗೆ 2 ಹೆಕ್ಟ‌ರ್ ಗರಿಷ್ಠ ₹ 3000 ಸಹಾಯಧನ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ರೈತ ಸಂಪರ್ಕ ಅಧಿಕಾರಿಗಳಿಗೆ ಸಂಪರ್ಕಿಸಲು ತಿಳಿಸಲಾಗಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ರೈತ ಸಂಪರ್ಕ ಕೇಂದ್ರ :

ಕಸಬಾ ಮತ್ತು ಕೆರೆಹಳ್ಳಿ : ಚಂದ್ರಶೇಖರ ಸ.ತೋ.ಅ ಮೊ:- 9481501571

ನಗರ ಮತ್ತು ಹುಂಚ : ರಮೇಶ್ ಹೂಗರ್ ಸ.ತೋ.ಅ ಮೊ :- 9916840682

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]