SHIVAMOGGA | ಒಂದೆರಡು ಮಟನ್ (Mutton) ಪೀಸ್ ಹೆಚ್ಚಿಗೆ ಹಾಕುವಂತೆ ಹೇಳಿದಕ್ಕೆ ಕುಪಿತಗೊಂಡ ಅನ್ಯಕೋಮಿನ ಅಪ್ರಾಪ್ತ ಬಾಲಕ ಮಚ್ಚಿನಿಂದ ಗ್ರಾಹಕನ (Customer) ಬುರುಡೆ ಬಿಚ್ಚಿದ ಘಟನೆ ಶಿವಮೊಗ್ಗ (Shivamogga) ನಗರದಲ್ಲಿ ಇಂದು ನಡೆದಿದೆ.
ಗಾಡಿಕೊಪ್ಪದ ಮಲ್ಲೇಶ್ (40) ಮಚ್ಚಿನಿಂದ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಈತನ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯವಾಗಿದೆ.ಟಿಪ್ಪುನಗರದ ಬಳಿ ಮಟನ್ ಅಂಗಡಿಯಲ್ಲಿ ಮಟನ್ ತರಲು ಹೋಗಿದ್ದಾಗ ಈ ಘಟನೆ ನಡೆದಿದ್ದು, ಒಂದೆರಡು ಪೀಸ್ ಮಟನ್ ಹೆಚ್ಚಿಗೆ ಹಾಕುವಂತೆ ಹೇಳಿದಕ್ಕೆ ಅನ್ಯಕೋಮಿನ ಅಪ್ರಾಪ್ತ ಬಾಲಕ ಹಲ್ಲೆ ಮಾಡಿರುವುದಾಗಿ ತಿಳಿದುಬಂದಿದೆ.
ಹಲ್ಲೆಗೊಳಗಾದ ಮಲ್ಲೇಶ್ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನಾ ವಿವರ :ಕುಡಿದ ಮತ್ತಿನಲ್ಲಿ ಮಲ್ಲೇಶ್ ಮಟನ್ ಅಂಗಡಿಗೆ ಹೋಗಿದ್ದಾನೆ. ಅಂಗಡಿಯಲ್ಲಿದ್ದ 16 ವರ್ಷದ ಅಪ್ರಾಪ್ತ ಬಾಲಕನಿಗೆ ಮಟನ್ ಪಡೆದ ಮೇಲೆ ಇನ್ನೂ ಹೆಚ್ಚು ಹಾಕುವಂತೆ ಗಲಾಟೆ ಮಾಡಿದ್ದಾನೆ. ಆಗ ಬಾಲಕ ಮಟನ್ ಹೆಚ್ಚಿಗೆ ಹಾಕಲು ಸಾಧ್ಯವಿಲ್ಲ. ನಾನು ಮಟನ್ ಹಾಕುವುದಿಲ್ಲ ಎಂದು ಹೇಳಿದ್ದಾನೆ. ಆಗ ಕುಡಿದ ಮತ್ತಿನಲ್ಲಿ ಬಂದಿದ್ದ ಮಲ್ಲೇಶ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಇಬ್ಬರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಜಗಳ ತಲುಪಿದೆ. ಆಗ ಬಾಲಕ ಮಟನ್ ಕಡಿಯುವ ಮಚ್ಚಿನಿಂದ ಮಟನ್‌ಗಾಗಿ ಗಲಾಟೆ ಮಾಡುತ್ತಿದ್ದ ಮಲ್ಲೇಶನ ತಲೆಯ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ.
ಮಚ್ಚಿನಿಂದ ತಲೆಗೆ ಹೊಡೆಯುತ್ತಿದ್ದಂತೆಯೇ ಆತನ ತಲೆ ಭಾಗದಲ್ಲಿ ದೊಡ್ಡ ಗಾಯವಾಗಿದ್ದು, ರಕ್ತಸ್ರಾವವಾಗಲು ಆರಂಭಿಸಿದೆ. ಕೂಡಲೇ ಸ್ಥಳದಲ್ಲೇ ತಲೆ ತಿರುಗಿ ಬಿದ್ದಿದ್ದಾನೆ. ನಂತರ ಆತನನ್ನು ಸ್ಥಳೀಯರು ಆಂಬುಲೆನ್ಸ್ ಕರೆಸಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
Read More
ಮನೆ ಮೇಲೆ ಮರ ಬಿದ್ದ ಚಾವಣಿಗೆ ಹಾನಿ | ಘಟನಾ ಸ್ಥಳಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ, ವೈಯಕ್ತಿಕ ಧನ ಸಹಾಯ