ಭದ್ರಾ ಜಲಾಶಯದಿಂದ ನದಿಗೆ ಹೆಚ್ಚುವರಿ ನೀರು ಬಿಡುಗಡೆ: ಜನರಿಗೆ ಮುಂಜಾಗ್ರತಾ ಸೂಚನೆ

Written by Koushik G K

Updated on:

Bhadra dam: ಭದ್ರಾ ಜಲಾಶಯದಲ್ಲಿ ಮುಂಗಾರು ಮಳೆಯಿಂದಾಗಿ ಒಳಹರಿವಿನ ಪ್ರಮಾಣ 20,000 ರಿಂದ 25,000 ಕ್ಯೂಸೆಕ್ ಗೆ ಏರಿಕೆ ಕಂಡಿದ್ದು, ಯಾವಾಗ ಬೇಕಾದರೂ ಜಲಾಶಯ ಭರ್ತಿಯಾಗುವ ಸಾಧ್ಯತೆ ಇರುವುದರಿಂದ, ಸುರಕ್ಷಿತ Spill Way Gate ಮುಖಾಂತರ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ.

WhatsApp Group Join Now
Telegram Group Join Now
Instagram Group Join Now

ಅಣೆಕಟ್ಟು ಸುರಕ್ಷತೆಗೆ ಪ್ರಥಮ ಆದ್ಯತೆ:

ಭದ್ರಾ ಜಲಾಶಯದ ನಿರ್ವಹಣೆಯು Rule Curve ನಿಯಮದ ಪ್ರಕಾರ ನಡೆಯುತ್ತಿದ್ದು, ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚು ನೀರು ಸಂಗ್ರಹವಾಗಿದರೆ, ಅತಿರೇಕದ ನೀರನ್ನು ನದಿಗೆ ಬಿಡುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ, ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರವಾಗಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

⚠️ ಸಾರ್ವಜನಿಕರಿಗೆ ಸೂಚನೆಗಳು:

  • ನದಿಪಾತ್ರದ ಹತ್ತಿರ ತಿರುಗಾಡಬೇಡಿ
  • ಜಾನುವಾರುಗಳನ್ನು ನದಿಯಿಂದ ದೂರವಿಡಿ
  • ತಗ್ಗು ಪ್ರದೇಶದ ನಿವಾಸಿಗಳು ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರಗೊಳ್ಳಲಿ
  • ಸರ್ಕಾರಿ ಪ್ರಕಟಣೆಗಳನ್ನು ಅನುಸರಿಸಿ

Read More :ಮಲೆನಾಡಿನಲ್ಲಿ ನಿಲ್ಲದ ವರುಣನ ಆರ್ಭಟ ; ಹೊಸನಗರದ ಮಾಸ್ತಿಕಟ್ಟೆಯಲ್ಲಿ ಅತ್ಯಧಿಕ 13 ಸೆಂ.ಮೀ. ಮಳೆ ದಾಖಲು

Leave a Comment