ಹೊಸನಗರ

ಆಲಗೇರಿಮಂಡ್ರಿ ಕೆರೆ ಬಸವಣ್ಣ ಶೇಡಿನಕೆರೆ ಪುನಶ್ಚೇತನ

ಹೊಸನಗರ : ತಾಲೂಕು ಹರಿದ್ರಾವತಿ ಗ್ರಾಮ ಪಂಚಾಯತಿಯ ಆಲಗೇರಿಮಂಡ್ರಿ ಬಳಿಯ ಕೆರೆ ಬಸವಣ್ಣ ಶೇಡಿನಕೆರೆಯ ಪುನಶ್ಚೇತನ ಕಾರ್ಯವನ್ನು ಬಟ್ಟೆಮಲ್ಲಪ್ಪದ ಸಾರಾ ಸಂಸ್ಥೆ ಹಾಗೂ ಬೆಂಗಳೂರಿನ ಎಸಿಐ ಸಂಸ್ಥೆಯವರು ಅತ್ಯಂತ ಅಚ್ಚುಕಟ್ಟಾಗಿ ನಿರ್ಮಿಸಿರುವುದನ್ನು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಸ್ವಾಮೀಜಿ, ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ, ಎಪಿಎಂಸಿ ಅಧ್ಯಕ್ಷ ವಾಟಗೋಡು ಸುರೇಶ್, ನ್ಯಾಯವಾದಿ ಕೆ ಎಸ್ ಪ್ರಶಾಂತ್, ದೇವೇಂದ್ರಪ್ಪ ಗೌಡ, ಶೈಲಜಾ ಯೇಸು ಪ್ರಕಾಶ್, ಎನ್ ಆರ್ ದೇವಾನಂದ್, ಪಿಡಿಒ ರಾಘವೇಂದ್ರ, ಸತೀಶ್ ಹಾಗೂ ನೂರಾರು ಗ್ರಾಮಸ್ಥರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕೆರೆಗೆ ಬಾಗಿನ ಅರ್ಪಿಸುವ ಮೂಲಕ ಕೆರೆಯ ನೀರು ಬಳಕೆಗೆ ಚಾಲನೆ ನೀಡಿದರು.

WhatsApp Group Join Now
Telegram Group Join Now
Instagram Group Join Now

ಮುಖ್ಯ ಅತಿಥಿಗಳು ಮಾತನಾಡಿ, ಈ ಕೆರೆಯ ಪುನಶ್ಚೇತನದಿಂದ ಜಾನುವಾರುಗಳಿಗೆ ಹಾಗೂ ನೂರಾರು ಎಕರೆ ಉಳುಮೆ ಭೂಮಿಗಳಿಗೆ ಅನುಕೂಲವಾಗಿದೆ. ಕೆರೆಕಟ್ಟೆಗಳ ಅಭಿವೃದ್ಧಿ ಪರಿಸರ ಸಂರಕ್ಷಣೆ ಕಾರ್ಯ ಮಹತ್ವದ್ದಾಗಿದ್ದು ಈ ನಿಟ್ಟಿನಲ್ಲಿ ಸಾರ ಸಂಸ್ಥೆ ಹಾಗೂ ಎಸಿಐ ಸಂಸ್ಥೆಗಳವರ ಕಾರ್ಯ ಅಪೂರ್ವವಾಗಿದೆ ಎಂದರು.

ಭೂಮತಿ ಪ್ರಾರ್ಥಿಸಿದರು. ರಕ್ಷಿತಾ ಸ್ವಾಗತಿಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]