ಹೊಸನಗರ ; 12ನೇ ಶತಮಾನದಲ್ಲಿ ಬಸವಣ್ಣನೆಂದರೆ ಒಂದು ಸಂವಿಧಾನ, ಒಂದು ತತ್ವಜ್ಞಾನ, ಒಂದು ಪ್ರಯೋಗ ಶಾಲೆ ನಡೆ-ನುಡಿ ಎರಡು ಒಂದೇ ಆಗಿದ್ದ ಬಸವಣ್ಣನವರು ಇಡೀ ಪ್ರಪಂಚಕ್ಕೆ ಒಂದು ಚೇತನವಿದ್ದಂತೆ ಎಂದು ಹೊಸನಗರ ತಾಲ್ಲೂಕು ವೀರಶೈವ ಮಹಾ ಸಂಘದ ಅಧ್ಯಕ್ಷ ಮಸರೂರು ಉಮೇಶ್ ಹೇಳಿದರು.
ಇಲ್ಲಿನ ತಾಲ್ಲೂಕು ಕಛೇರಿಯ ಆವರಣದಲ್ಲಿ ಬಸವಣ್ಣನವರ ಜಯಂತಿ ಆಚರಿಸಲಾಗಿದ್ದು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಶರಣರು ವಿಚಾರಗಳು 11-12ನೇ ಶತಮಾನಕ್ಕೆ ಮಾತ್ರ ಸೀಮಿತವಲ್ಲ ಅವು ಅನಾದಿ ಅನಂತ ಜನರ ಭಾಷೆಯಲ್ಲಿ ತಮ್ಮ ಪ್ರಕರ ವಿಚಾರಗಳನ್ನು ಅಭಿವ್ಯಕ್ತಿಗೊಳಿಸಿದ ಬಸವಣ್ಣನವರು ಸಮಾಜದಲ್ಲಿದ್ದ ಕುರುಡು ನಂಬಿಕೆಗಳ ವಿರುದ್ಧ ವೈಚಾರಿಕ ಕಹಳೆ ಉದಿದವರು.
ಶರಣರು ತತ್ವಜ್ಞಾನಿಗಳು ದರ್ಶನಿಕರು ಸೇರಿದಂತೆ ಎಲ್ಲ ಬಗೆಯ ಸಾಧಕರು ಒಂದೆಡೆ ಸೇರಿ ಚಿಂತನ ಮಂಥನ ನಡೆಸುತ್ತಿದ್ದ ಅನುಭವ ಮಂಟಪದ ದೃಶ್ಯಗಳನ್ನು ವರ್ಣಿಸಲು ಅಸಾಧ್ಯ, ಕಾಯಕ ಸಂದೇಶ ಸಾರಿದ ಶರಣರು ಬಸವಧಿ ಶರಣರು ವಿಶ್ವಕ್ಕೆ ಕಾಯಕ ಸಂದೇಶ ನೀಡುವ ಮೂಲಕ ಜೀವಪರ ಕಾಳಗಿಯನ್ನು ತೋರಿಸಿದ್ದಾರೆ ಜಗತ್ತಿನಲ್ಲಿ ಉದಯಿಸಿದ ಯಾರು ಕಾಯಕ ಸಂದೇಶ ನೀಡಿಲ್ಲ ಜನರಲ್ಲಿ ದುಡಿಮೆ ಬಗ್ಗೆ ಪೂಜ್ಯನೀಯ ಭಾವನೆ ಮೂಡುವಂತೆ ಮಾಡಿದ ಶರಣ ಬಸವಣ್ಣ ಯಾರಲ್ಲೂ ಭೇದ ಭಾವ ಮಾಡದೇ ಶೋಷಿತರು ಸಮಾಜದಿಂದ ತುಳಿತಕ್ಕೆ ಒಳಗಾದವರನ್ನು ಶ್ರಮ ಸಮುದಾಯದೊಂದಿಗೆ ಗುರುತಿಸಿ ನಡೆ ನುಡಿ ಬಗ್ಗೆ ಕಲಿಸಿದ ಬಸವಣ್ಣನವರ ತತ್ವ ಸಿದ್ದಾಂತಗಳು ಇಂದಿಗೂ ಎಲ್ಲರೂ ಮೈಗೂಡಿಸಿಕೊಂಡು ಬರುತ್ತಿದ್ದು ಇಂದಿನ ಯುವಕರು ಬಸವಣ್ಣನವರ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಸಮಾಜದ ಏಳಿಗೆಗೆ ದುಡಿಯಬೇಕೆಂದರು.
ಜಿಲ್ಲಾ ವೀರಶೈವ ಮಹಾ ಸಂಘದ ಉಪಾಧ್ಯಕ್ಷ ಚಿಕ್ಕಮಣತಿ ಹಾಲಪ್ಪ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪದ ಮೂಲಕ ಜನರಿಗೆ ತಿಳಿಸಿದ ದ್ವೇಷ ಮರೆಯಬೇಕು ಎಲ್ಲ ಜಾತಿ ಪಂಗಡದವರನ್ನು ಸಮಾನನಾಗಿ ನೋಡಬೇಕು ಎಂಬ ತತ್ವದ ಆಧಾರದಲ್ಲಿ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ರಚಿಸಿದರು ಎಂದರು.
ಈ ಬಸವಣ್ಣ ಜಯಂತಿಯಲ್ಲಿ ತಾಲ್ಲೂಕು ಕಛೇರಿಯ ಉಪತಹಸೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರೀಟ್ಟೋರವರು ಅಧ್ಯಕ್ಷತೆ ವಹಿಸಿ ಬಸವಣ್ಣನವರ ಬಗ್ಗೆ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಕಳೂರು ಸೊಸೈಟಿಯ ಅಧ್ಯಕ್ಷ ದುಮ್ಮ ವಿನಯ್‌ಕುಮಾರ್, ರಾಜ್ಯ ವೀರಶೈವ ಲಿಂಗಾಯಿತ ಮಹಾ ಸಭಾದ ವಾಣಿಜ್ಯ ಕೈಗಾರಿಕ ನಿರ್ದೇಶಕ ಹೆಚ್.ಆರ್ ತೀರ್ಥೆಶ್, ಕಾಡುವಳ್ಳಿ ವಿನಯ್‌ಕುಮಾರ್, ಬೋಜಪ್ಪ ಗೌಡ, ಶಿರಾಸ್ಥೆದಾರ್ ಕಟ್ಟೆ ಮಂಜುನಾಥ್, ಪ್ರಥಮ ದರ್ಜೆ ಗುಮಾಸ್ಥರಾದ ಚಿರಾಗ್, ರಾಘವೇಂದ್ರ, ನಾಗಪ್ಪ, ಸತೀಶ, ನೀಲಾ ಶಂಕರ್, ವಸಂತ ಮಹೇಶ್, ತಾ. ಪ್ರಧಾನ ಕಾರ್ಯದರ್ಶಿ ವೇದಾಂತಪ್ಪ ಗೌಡ, ಡಿ.ವಿ.ಆರ್. ಮಲ್ಲಿಕಾರ್ಜುನ, ಹಾಲಗುಡ್ಡೆ ರವಿ, ಬಸವರಾಜ್, ಶಿವಾನಂದ ಮುಂಬಾರು, ಇನ್ನೂ ಮುಂತಾದ ವೀರಶೈವ ಮುಖಂಡರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





