ಹೊಸನಗರ ; ಇತ್ತೀಚಿನ ದಿನಗಳಲ್ಲಿ ತಮ್ಮ ಮೊಬೈಲ್ ವಾಟ್ಸ್ಆ್ಯಪ್‌ನಲ್ಲಿ ಪಿಎಂ ಕಿಸಾನ್ ಯೋಜನಾ, ಪಿಎಂ ಕಿಸಾನ್ ಇ-ಕೆವೈಸಿ ಅಪ್ಡೇಟ್ 1.0.1, ಪಿಎಂ ಕಿಸಾನ್ ನ್ಯೂ ಲಿಸ್ಟ್ 2024 ಎಂಬ ಎಪಿಕೆ ಹೆಸರಿನ ಫೈಲ್‌ಗಳನ್ನು ಅನಾಮಧೇಯ ವ್ಯಕ್ತಿಯಿಂದ ಅಥವಾ ತಮ್ಮ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿರುವವರಿಂದ ಮೆಸೇಜ್ ಕಳುಹಿಸಲಾಗುತ್ತಿದೆ.
ದಯವಿಟ್ಟು ಈ ಎಪಿಕೆ ಫೈಲ್‌ಗಳನ್ನು ತೆರೆಯಲು ಪ್ರಯತ್ನಿಸಬೇಡಿ. ಕೆಲವೊಂದು ರೈತರು ಪಿಎಂ ಕಿಸಾನ್ ಯೋಜನೆಗೆ ಸಂಬಂಧಪಟ್ಟಿದ್ದೆಂದು ತೆರೆದಾಗ ಫೋನ್ ಹ್ಯಾಕ್ ಆಗುವುದು/ಹ್ಯಾಂಗ್ ಆಗುವುದು ಅಥವಾ ಬ್ಯಾಂಕ್‌ನಿಂದ ಹಣವನ್ನು ಕಳೆದುಕೊಂಡಿರುವುದು ನಮ್ಮ ಕಚೇರಿಯ ಗಮನಕ್ಕೆ ಬಂದಿರುತ್ತದೆ.
ಆದ್ದರಿಂದ ಈ ರೀತಿ ಮೆಸೇಜ್ ಗಳನ್ನು ಕೂಡಲೇ ಡಿಲೀಟ್ ಮಾಡಲು ಹೊಸನಗರ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಚಿನ್ ಹೆಗಡೆ ಮನವಿ ಮಾಡಿದ್ದಾರೆ.