ಜೇನುಕಲ್ಲಮ್ಮ ದೇವಾಲಯದ ನೂತನ ಮಹಾದ್ವಾರ ಶಂಕುಸ್ಥಾಪನೆಗೆ ಶಾಸಕ ಬೇಳೂರಿಗೆ ಆಹ್ವಾನ

Written by Mahesha Hindlemane

Published on:

HOSANAGARA ; ಇತಿಹಾಸ ಪ್ರಸಿದ್ಧ ತಾಲೂಕಿನ ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ಶಿಲಾಮಯ ‌ದೇವಾಲಯ ಆವರಣದಲ್ಲಿ ನಿರ್ಮಿಸಲು ದೇವಾಲಯದ ವ್ಯವಸ್ಥಾಪನಾ ಸಮಿತಿ ಉದ್ದೇಶಿಸಿರುವ ನೂತನ ಮಹಾದ್ವಾರದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ‌ಆಗಮಿಸಿ ಶಂಕುಸ್ಥಾಪನೆ ನೆರವೇರಿಸಬೇಕೆಂದು ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ಸಾಗರದ ಅವರ ಸ್ವಗೃಹದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಬಿ. ಸ್ವಾಮಿರಾವ್ ಮುಕ್ತ ಭೇಟಿ ಮಾಡಿ ವಿಶೇಷ ಆಹ್ವಾನ ನೀಡಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ನವರಾತ್ರಿಯ ಅಕ್ಟೋಬರ್‌ 12ರ ಶನಿವಾರ ಬೆಳಗ್ಗೆ 11 ಗಂಟೆಗೆ ಸಮಿತಿ ಅಧ್ಯಕ್ಷ ಸ್ವಾಮಿರಾವ್ ಅಧ್ಯಕ್ಷತೆಯಲ್ಲಿ ಶಂಕುಸ್ಥಾಪನೆ ಕಾರ್ಯ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ದೇವಿಯ ಭಕ್ತಾದಿಗಳು ಅಂದು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅವರು ಕೋರಿದ್ದಾರೆ. ಈ ಸಂದರ್ಭದಲ್ಲಿ ಪ್ರಮುಖರಾದ ಉಸ್ಮಾನ್ ಸಾಬ್, ಪತ್ರಕರ್ತ ಶ್ರೀಕಂಠ ಇದ್ದರು.

Leave a Comment