RIPPONPETE ; ಇತ್ತೀಚೆಗೆ ಸೂಡೂರು ಗೇಟ್ ಬಳಿ ನಡೆದ ಅಪಘಾತದಲ್ಲಿ ಗಾಯಾಳು ಭಂಡಾರಿ ಸಮಾಜದ ಮಾನ್ವಿತ್ ಅವರಿಗೆ ಸಮಯಕ್ಕೆ ಸರಿಯಾಗಿ ತುರ್ತು ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದ ಸಾಜಿ ಮತ್ತು ಸಂಗೀತ ದಂಪತಿಗಳಿಗೆ ಭಂಡಾರಿ ಸಮಾಜದ ವತಿಯಿಂದ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ರಿಪ್ಪನ್‌ಪೇಟೆ ಘಟಕದ ಭಂಡಾರಿ ಸಮಾಜದ ಅಧ್ಯಕ್ಷ ಸಿದ್ದೇಶ್‌ಭಂಡಾರಿ ಮತ್ತು ಕಾರ್ಯದರ್ಶಿ ಸುನೀಲ್‌ಭಂಡಾರಿ, ಸೇರಿದಂತೆ ಭಂಡಾರಿ ಸಮಾಜದ ಪದಾಧಿಕಾರಿಗಳು ಹಾಜರಿದ್ದರು.
ಹಿರಿಯ ಸಾಹಿತಿ ಡಾ. ನಾ ಡಿಸೋಜರಿಗೆ ಸಾಹಿತ್ಯಾಭಿಮಾನಿಗಳಿಂದ ಭಾವಪೂರ್ಣ ಶ್ರದ್ಧಾಂಜಲಿ
RIPPONPETE ; ನಾಡಿನ ಹೆಸರಾಂತ ಸಾಹಿತಿ ಡಾ. ನಾ ಡಿಸೋಜರವರ ನಿಧನದಿಂದಾಗಿ ಸಾಹಿತ್ಯ ಕ್ಷೇತ್ರ ದೊಡ್ಡನಷ್ಟ ಎಂದು ಹಿರಿಯ ಸಾಹಿತಿ ಆ.ಹಾ.ಪಾಟೀಲ್ ಹೇಳಿದರು.
ರಿಪ್ಪನ್‌ಪೇಟೆಯ ವಿನಾಯಕ ವೃತ್ತದ ಮಾರ್ಗದಲ್ಲಿ ಮೃತ ಸಾಹಿತಿ ನಾ.ಡಿಸೋಜರವರ ಪಾರ್ಥಿವ ಶರೀರ ಸಾಗರಕ್ಕೆ ತೆರಳುವ ಮುನ್ನ ಕ್ಷಣ ಕಾಲ ನಿಲ್ಲಿಸಿ ಮೃತರಿಗೆ ಪುಪ್ಪಾನಮನ ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ರವೀಂದ್ರ ಕೆರೆಹಳ್ಳಿ, ಕಸ್ತೂರಿ ಕನ್ನಡ ಸಂಘ ಮತ್ತು ಇನ್ನಿತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದು ಅಗಲಿದ ಸಾಹಿತಿಗೆ ಅಂತಿಮ ನಮನ ಸಲ್ಲಿಸಿದರು.
ಎಂ.ಬಿ.ಮಂಜುನಾಥ, ಎಂ.ಸುರೇಶಸಿಂಗ್, ನರಸಿಂಹ, ಸೋಮಶೇಖರ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಗ್ರಾಮ ಪಂಚಾಯ್ತಿ ಸದಸ್ಯರಾದ ಡಿ.ಈ.ಮಧುಸೂದನ್, ಆಸಿಫ್, ಗಣಪತಿ, ಜಿ.ಡಿ.ಮಲ್ಲಿಕಾರ್ಜುನ, ಪಿಯೂಸ್ ರೋಡ್ರಿಗಸ್, ಸಾಯಿನಾಥ ಭಂಡಾರಿ, ಶ್ರೀಧರ, ಪಿಎಸ್‌ಐ ಪ್ರವೀಣ್, ರಾಮಚಂದ್ರ ಬಳೆಗಾರ, ಇನ್ನಿತರರು ಹಾಜರಿದ್ದು ಶ್ರದ್ದಾಂಜಲಿ ಸಲ್ಲಿಸಿದರು.