ಹೊಸನಗರ : ಪಟ್ಟಣದ ಐತಿಹಾಸಿಕ ಪುರಾತನ ಕಳೂರು ಜುಮ್ಮಾ ಮಸೀದಿ (ಜಾಮಿಯಾ ಮಸೀದಿ)ಯ ನಿಕಟಪೂರ್ವ ಅಧ್ಯಕ್ಷರು ಹಾಗೂ SPT ಟ್ರಾನ್ಸ್‌ಪೋರ್ಟ್ ಸಂಸ್ಥೆಯ ಮಾಲಿಕರಾದ ಹೊಸನಗರ ಎಸ್.ಎನ್. ರಸ್ತೆ ನಿವಾಸಿ SPT ಭಾಷಾ ಸಾಬ್ (69) ಅವರು ಭಾನುವಾರ ಮುಂಜಾನೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು.
ಮೃತರು ಸುಮಾರು ನಾಲ್ಕು ವರ್ಷಗಳ ಕಾಲ ಮಸೀದಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಜನವರಿ 2026ರಲ್ಲಿ ಅಧಿಕಾರ ಹಸ್ತಾಂತರಿಸಿದ್ದರು. ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸರಳತೆ, ಸೇವಾಭಾವನೆ ಮತ್ತು ಎಲ್ಲರನ್ನು ಒಟ್ಟುಗೂಡಿಸುವ ಗುಣಗಳಿಂದ ಅವರು ಗುರುತಿಸಿಕೊಂಡಿದ್ದರು.
ಮೃತರ ಅಗಲಿಕೆಗೆ ಜಮಾತಿನ ಬಾಂಧವರು ಹಾಗೂ ಪಟ್ಟಣದ ನಾಗರಿಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಂತಿಮ ಸಂಸ್ಕಾರಗಳ ವಿವರವನ್ನು ಕುಟುಂಬ ವರ್ಗ ನಂತರ ತಿಳಿಸುವುದಾಗಿ ತಿಳಿಸಿದೆ.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

