ಶಿವಮೊಗ್ಗ: ಬಸ್ ನಿಲ್ದಾಣದ ಸಮೀಪ ನಿಲ್ಲಿಸಿದ್ದ ರೈತರೊಬ್ಬರ ಬೈಕ್ ಕಳುವಾಗಿರುವ ಘಟನೆ ಆಯನೂರು ಸಮೀಪದ ಸೂಡೂರು ಗ್ರಾಮದ 5ನೇ ಮೈಲಿಗಲ್ಲಿನ ಬಳಿ ನಡೆದಿದೆ.
ಹೊಸನಗರ ತಾಲ್ಲೂಕಿನ ಕೆರೆಹಳ್ಳಿ ಹೋಬಳಿಯ ಅಡ್ಡೇರಿ ಗ್ರಾಮದ ನಿವಾಸಿ ದಿನೇಶ್ ಬೈಕ್ ಕಳೆದುಕೊಂಡ ರೈತ.
ದಿನೇಶ್ ಅವರು ತಮ್ಮ ಹೀರೊ ಎಚ್ಎಫ್ (Hero HF) ಬೈಕ್ ಅನ್ನು ಸೂಡೂರು ಗ್ರಾಮದ 5ನೇ ಮೈಲಿಗಲ್ಲು ಬಸ್ ನಿಲ್ದಾಣದ ಬಳಿ ಪಾರ್ಕ್ ಮಾಡಿ, ಬಸ್ ಮೂಲಕ ಶಿವಮೊಗ್ಗಕ್ಕೆ ತೆರಳಿದ್ದರು. ಕೆಲಸ ಮುಗಿಸಿ ಸಂಜೆ ಮರಳಿ ಬಂದು ನೋಡಿದಾಗ ನಿಲ್ಲಿಸಿದ್ದ ಜಾಗದಲ್ಲಿ ಬೈಕ್ ಇರಲಿಲ್ಲ. ಸುತ್ತಮುತ್ತ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ, ಅವರು ಕುಂಸಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
Malnad Times App ಡೌನ್ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

