ಹೊಸನಗರ ; ಪಟ್ಟಣದ ಚೌಡಮ್ಮ ರಸ್ತೆಯ ‘ಬಿಂಬ’ ಫೋಟೋ ಸ್ಟೂಡಿಯೋ ಮಾಲೀಕ, ಹೆಸರಾಂತ ಛಾಯಾಗ್ರಾಹಕ ಕೆ.ಬಿ.ಯೋಗೀಶ್ ಅವರ ತಾಯಿ ಹಾಗು ದಿ. ವಿದ್ವಾನ್ ಭದ್ರಾಚಾರ್ ಅವರ ಧರ್ಮಪತ್ನಿ ಸುಮಿತ್ರಾ ಆಚಾರ್ಯ (92) ಇತ್ತೀಚೆಗೆ ಮಂಗಳೂರಿನ ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಅಸುನೀಗಿದರು.
ಮೃತರಿಗೆ ತಲಾ ಇಬ್ಬರು ಪುತ್ರರು ಹಾಗು ಪುತ್ರಿಯರು ಇದ್ದಾರೆ. ಮಂಗಳೂರಿನಲ್ಲಿ ಮೃತರ ಅಂತ್ಯಸಂಸ್ಕಾರ ನಡೆದಿದ್ದು ಇದೇ ಸೆಪ್ಟೆಂಬರ್ 25ರ ಗುರುವಾರ ಮಧ್ಯಾಹ್ನ 12-30ಕ್ಕೆ ಇಲ್ಲಿನ ಶರಾವು ದೇವಸ್ಥಾನದ ಬಳಿ ಇರುವ ಶ್ರೀ ರಾಧಾಕೃಷ್ಣ ಹಾಲ್ (ಬಾಳಂಭಟ್) ಹಾಲ್ ನಲ್ಲಿ ವಿಶ್ವಕರ್ಮ ಸಮಾರಾಧನೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.