SHIKARIPURA | ಕಾಂಗ್ರೆಸ್ ಪಕ್ಷದವನ್ನ ನಾಶ ಮಾಡುವುದಾಗಿ ಹೇಳಿಕೊಳ್ಳುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷದಲ್ಲೀಗ ಒಳಜಗಳ ಆರಂಭವಾಗಿದ್ದು, ಅವರವರ ಕಿತ್ತಾಟದಿಂದ ಎರಡೂ ಪಕ್ಷಗಳು ಅತೀ ಶೀಘ್ರದಲ್ಲೇ ನಾಶವಾಗುವುದರಲ್ಲಿ ಸಂದೇಹವಿಲ್ಲ ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ ಹಾಗೂ ಎಂಎಡಿಬಿ ಅಧ್ಯಕ್ಷ ಮಂಜುನಾಥ್ ಗೌಡ (R.M. Manjunatha Gowda) ಭವಿಷ್ಯ ನುಡಿದರು.
ಶೇ.91 ರಷ್ಟು ಭರ್ತಿಯಾದ ಲಿಂಗನಮಕ್ಕಿ ಜಲಾಶಯ, ಎಲ್ಲೆಲ್ಲಿ ಎಷ್ಟಾಗಿದೆ ಮಳೆ ?
ತಾಲ್ಲೂಕಿನ ಅಂಜನಾಪುರ ಹಾಗೂ ಅಂಬ್ಲಿಗೊಳ್ಳ ಜಲಾಶಯಕ್ಕೆ ಶುಕ್ರವಾರ ಬಾಗಿನ ಅರ್ಪಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬರಗಾಲ ಆರಂಭವಾಗುತ್ತದೆ ಎಂದು ಹೇಳುವವರಿಗೀಗ ಪ್ರಕೃತಿಯು ತಕ್ಕ ಉತ್ತರ ನೀಡುತ್ತಿದೆ. ರಾಜ್ಯದ ಎಲ್ಲಾ ಕೆರೆ-ಕಟ್ಟೆಗಳಲ್ಲಿ ಹೆಚ್ಚಿನ ನೀರು ತುಂಬಿ ರೈತರ ಮುಖದಲ್ಲಿ ಮಂದಹಾಸ ಉಂಟಾಗಿದ್ದು, ರಾಜ್ಯದಲ್ಲಿ ಹೆಚ್ಚಿನ ಮಳೆಯಿಂದಾಗಿ ಬಿಜೆಪಿಯು ಮಾಡಿದ ಪಾಪಗಳನ್ನೆಲ್ಲ ತೊಳೆಯುವದಕ್ಕೆ ಮಳೆಯಾಗುತ್ತಿದೆ ಎಂದು ವ್ಯಂಗ್ಯವಾಡಿದ ಅವರು, ಲೋಕಸಭಾ ಚುನಾವಣೆ ಪೂರ್ವದಲ್ಲಿ ರಾಜ್ಯದಲ್ಲಿ ಹೊಂದಾಣಿಕೆ ಮಾಡಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಜೆಡಿಎಸ್ ಮುಖ್ಯಮಂತ್ರಿ ಸಿದ್ಧರಾಮಯ್ಯರವರ ವಿರುದ್ದ ಪಾದಯಾತ್ರೆ ನಡೆಸುವುದಕ್ಕೆ ಎರಡೂ ಪಕ್ಷಗಳ ಮುಖಂಡರು ಕಿತ್ತಾಟದಲ್ಲಿ ನಿರತರಾಗಿದ್ದಾರೆ. ಹೆಚ್ ಡಿ ಕುಮಾರಸ್ವಾಮಿಯವರು ಈ ಹಿಂದೆ ಚುನಾವಣಾ ಸಂದರ್ಭದಲ್ಲಿ ಡಿಕೆಶಿಯವರು ಕಿಡಿ ಹರಿಕಾರರು ಎಂದು ಸುಳ್ಳು ಆರೋಪ ಮಾಡುತ್ತಿದ್ದರು ಆದರೀಗ ಬಿಜೆಪಿಯ ಪ್ರೀತಮ್ ಗೌಡ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಇವರು ಕಾಂಗ್ರೆಸ್ ಪಕ್ಷದವನ್ನ ನಾಶ ಮಾಡುವುದಾಗಿ ಹೇಳಿಕೊಳ್ಳುವ ಪಕ್ಷದಲ್ಲೀಗ ಒಳಜಗಳ ಆರಂಭವಾಗಿದ್ದು, ಅವರವರ ಕಿತ್ತಾಟದಿಂದ ಎರಡೂ ಪಕ್ಷಗಳು ಅತೀ ಶೀಘ್ರದಲ್ಲೇ ನಾಶವಾಗುವುದರಲ್ಲಿ ಸಂದೇಹವಿಲ್ಲ ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯರವರು, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರು ಬಡವರ ದೀನದಲಿತರ ಪರವಾಗಿದ್ದು, ರಾಜ್ಯಕ್ಕೆ ಹಲವಾರು ಯೋಜನೆ ಕೊಡುವುದರ ಮೂಲಕ ನುಡಿದಂತೆ ನಡೆಯುವ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಡಿಕೆಶಿಯವರು ನೀರಾವರಿ ಖಾತೆಯನ್ನು ನಿಭಾಯಿಸುತ್ತಿದ್ದು, ತಾಲ್ಲೂಕಿನಲ್ಲಿ ನೀರಿನ ಸಮಸ್ಯಗಳಿಗೆ ಸ್ಪಂದಿಸುವ ಮನೋಭಾವ ಹೊಂದಿದ್ದಾರೆ. ರಾಜ್ಯ ಸರ್ಕಾರವನ್ನು ಉರುಳಿಸುವ ಪ್ರಯತ್ನ ತಾಲ್ಲೂಕಿನ ಶಾಸಕರು ಕನಸು ಕಾಣುತ್ತಿದ್ದು, ರಾಜ್ಯದ ಕಾಂಗ್ರೆಸ್ ಪಕ್ಷದವರೆಲ್ಲರೂ ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಪರವಾಗಿರುವಾಗ ಸಾಧ್ಯವಿಲ್ಲದ ಮಾತು ಅವರ ಕನಸು ಕನಸಾಗಿಯೇ ಉಳಿಯುವುದು. ಈ ಹಿಂದೆ ಜೆಡಿಎಸ್ ಬಿಜೆಪಿ ಸಮ್ಮಿಶ್ರ ಸರ್ಕಾರವು ಹೆಚ್ಚು ದಿನ ಉಳಿಯಲಿಲ್ಲ ಈಗಲೂ ಸಹ ಇದು ಮುಂದುವರಿಯುತ್ತದೆ ಎಂಬ ನಂಬಿಕೆ ಸಾರ್ವಜನಿಕರಲ್ಲಿ ಉಮಯಳಿದಿಲ್ಲ. ಕೇಂದ್ರ ಸರ್ಕಾರದ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿಯವರು ಬಡವರ ದೀನದಲಿತರ ಪರವಾಗಿ ಧ್ವನಿ ಎತ್ತುತ್ತಿದ್ದು ಮುಂದಿನ ದಿನಗಳಲ್ಲಿ ದೇಶದಲ್ಲಿ ಕಾಂಗ್ರೆಸ್ ಪಕ್ಷ ಇನ್ನಷ್ಟು ಸುಭದ್ರವಾಗಲಿದೆ ಎಂದು ಹೇಳಿದರು.
ಭದ್ರ ಕಾಡಾ ಅಧ್ಯಕ್ಷ ಅಂಶುಮತ್ ಮಾತನಾಡಿ, ಕಳೆದ ವರ್ಷ ಪ್ರಕೃತಿಯ ಮುನಿಸಿನಿಂದಾಗಿ ರೈತರಾದಿಯಾಗಿ ಎಲ್ಲರೂ ಸಂಕಷ್ಟದಲ್ಲಿದ್ದೆವು ಆದರೀಗ, ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದುದಲ್ಲದೇ, ಸಿದ್ಧರಾಮಯ್ಯರವರ ಆಡಳಿತವನ್ನು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರಿಗೆ ಸಹಿಸಲಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಪ್ರಪಂಚದಲ್ಲಿ ನೀರಿಗಾಗಿ ಆಹಾಕಾರ ಪಡುವ ಪರಿಸ್ಥಿತಿಗಳಿದ್ದು ಆದ್ದರಿಂದ ಈಗಿಂದಲೇ ರೈತರು ಸಾರ್ವಜನಿಕರು ನೀರನ್ನು ಮಿತವಾಗಿ ಬಳಸುವುದರ ಮೂಲಕ ಬೇಸಿಗೆ ಜಲಾಶಯದಲ್ಲಿ ಕಾಯ್ದಿರಿಸಿಕೊಳ್ಳುವಂತೆ ಕರೆ ನೀಡಿದರು.
ಆನೆ ದಾಳಿ, ಮೃತ ವ್ಯಕ್ತಿ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ
ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಭಾನು ಮಾತನಾಡಿ, ರಾಜ್ಯ ಸರ್ಕಾರದ ಮಹತ್ವ ಯೋಜನೆಯಾದ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ ನಿತ್ತು ಹೋಯ್ತು ಎಂದು ಹೇಳುತ್ತಿದ್ದಾರೆ ಇದು ಶುದ್ಧ ಸುಳ್ಳು ತಾಂತ್ರಿಕ ಕಾರಣದಿಂದ ತಡವಾಗಿದ್ದು, ಇನ್ನೊಂದು ವಾರದಲ್ಲಿ ಎಲ್ಲಾ ಮಹಿಳೆಯರ ಖಾತೆಗೆ ಹಣ ಜಮವಾಗಲಿದೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಬೋವಿ ನಿಗಮದ ಅಧ್ಯಕ್ಷ ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರಿವಾಳದ ಶಿವರಾಮ್, ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್, ಮಾಜಿ ಕಾಡಾ ಅದ್ಯಕ್ಷ ನಗರದ ಮಹಾದೇವಪ್ಪ ಪುರಸಭಾ ಸದಸ್ಯರಾದ ಉಳ್ಳಿ ದರ್ಶನ್, ಜಯಶ್ರಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಭಂಡಾರಿ ಮಾಲತೇಶ್, ಮಹಿಳಾಧ್ಯಕ್ಷೆ ಪುಷ್ಪಾ ಶಿವಕುಮಾರ್, ಮುಖಂಡರಾದ ಉಮೇಶ್ ಮಾರವಳ್ಳಿ, ರವೀಂದ್ರ, ದಯಾನಂದ್, ಈರೇಶ್ ಗಜೇಂದ್ರ, ಬನ್ನೂರು ಮಂಜಪ್ಪ ಸೇರಿದಂತೆ ಪಕ್ಷದ ಮುಖಂಡರು, ನಾಯಕರು, ಅಂಜನಾಪುರ ಹಾಗೂ ಅಂಬ್ಲಿಗೊಳ್ಳ ಗ್ರಾಮಸ್ಥರು, ಸಾರ್ವಜನಿಕರು, ನೀರಾವರಿ ಇಲಾಖೆಯ ಆಡಳಿತ ಅಧಿಕಾರಿಗಳು ಹಾಜರಿದ್ದರು.
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
1938 ರಲ್ಲಿ ಅಂಜನಾಪುರ ಜಲಾಶಯದ ನಿರ್ಮಾಣವಾಗಿದ್ದು, ಇಲ್ಲಿವರೆಗೂ ಹೂಳೆತ್ತುವ ಕೆಲಸ ನಡೆದಿಲ್ಲ. ಈ ಜಲಾಶಯದಿಂದ ಬಹುಗ್ರಾಮ ಯೋಜನೆಯಡಿ 198 ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯಾಗುತ್ತಿದ್ದು, ಈ ಯೋಜನೆಗೆ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಂಥಾ ಸಮಯದಲ್ಲಿ ಹೆಚ್ಡಿಕೆಯವರು ಹೊಸಳ್ಳಿ ಏತನೀರಾವರಿ ಎಂದು 47 ಕ್ಯೂಸೆಕ್ ನೀರನ್ನು ಬಿಡುಗಡೆಗೆ ಚಾಲನೆ ನೀಡಲಾಗಿದ್ದು, ಅಲ್ಲಿಂದ ಬರುವ ನೀರು ಆಭಾಗದ ಎಲ್ಲಾ ಕೆರೆಕಟ್ಟೆಗಳು ತುಂಬಿ ಅಂಜನಾಪುರಕ್ಕೆ ಕೇವಲ 20 ಕ್ಯೂಸೆಕ್ ನೀರು ಬರುತ್ತಿತ್ತು. ಈದಾಖಲೆ ತೋರಿಸಿ ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿಯವರಿಂದ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಬರುವಂಥ ದಿನಗಳಲ್ಲಿ ತಾಲ್ಲೂಕಿನಲ್ಲಿ ಶಾಶ್ವತ ನೀರಾವರಿಗಾಗಿ ಅಂಜನಾಪುರ ಜಲಾಶಯಕ್ಕೆ ಗಾಜನೂರು ಡ್ಯಾಂ ಅಥವಾ ಶರಾವತಿ ನದಿಯಿಂದ ಏತನೀರಾವರಿ ಮೂಲಕ ನೀರು ತರುವುದಕ್ಕೆ ಎಸ್ಟಿಮೇಟ್ ಮತ್ತು ಪ್ಲಾನ್ ಮಾಡಿಕೊಟ್ಟರೆ ಸರ್ಕಾರದಿಂದ 200 ಕೋಟಿ ಹಣ ಮಂಜೂರು ಮಾಡಿಸಿಕೊಡುವ ವಿಶ್ವಾಸವನ್ನು ಸಾಕ್ಷರತಾ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪರವರು ನೀಡಿದ್ದಾರೆ.
– ನಾಗರಾಜ್ ಗೌಡ, ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ