ರಿಪ್ಪನ್‌ಪೇಟೆ ; ಗ್ರಾಹಕರಿಗಿಲ್ಲದ BSNL ಸೌಲಭ್ಯ, ನಿರ್ವಹಣೆ ಇಲ್ಲದೆ ದೂಳು ಹಿಡಿಯುತ್ತಿರುವ ಲಕ್ಷಾಂತರ ರೂ. ಮೌಲ್ಯದ ಯಂತ್ರಗಳು-ಸಮಸ್ಯೆಗೆ ಪರಿಹಾರ ಎಂದು ?

Written by malnadtimes.com

Published on:

ರಿಪ್ಪನ್‌ಪೇಟೆ ; ಕರೆಂಟ್ ಹೋದರೆ ಸಾಕು ಇಲ್ಲಿ ದೂರವಾಣಿ ಇಲಾಖೆಯಲ್ಲಿ ಮೊಬೈಲ್ ಫೋನ್‌ಗಳು ಸೇವೆಯಿಂದ ಸ್ಥಗಿತಗೊಳ್ಳುವ ಮೂಲಕ ವ್ಯಾಪ್ತಿ ಪ್ರದೇಶದ ಹೊರಗೆ, ಸ್ವೀಚ್ ಆಫ್ ಎಂಬ ಅಶರೀರ ವಾಣಿಯೊಂದು ಕೇಳಿ ಬರುತ್ತವೆ.

WhatsApp Group Join Now
Telegram Group Join Now
Instagram Group Join Now

ಕೇಂದ್ರ ಸರ್ಕಾರ ಬಿಎಸ್ಎನ್ಎಲ್ ಗೆ ಹೆಚ್ಚಿನ ಅನುದಾನವನ್ನು ನೀಡುವ ಮೂಲಕ ಹೆಚ್ಚು ಉತ್ತೇಜನ ನೀಡಲಾಗುತ್ತಿದ್ದರೂ ಕೂಡಾ ರಿಪ್ಪನ್‌ಪೇಟೆಯಲ್ಲಿನ ದೂರವಾಣಿ ಇಲಾಖೆಯ ಸುಸಜ್ಜಿತ ಕಟ್ಟಡದಲ್ಲಿ ಹೊಸಹೊಸ ಆವಿಷ್ಕಾರದ ಯಂತ್ರಗಳನ್ನು ಅಳವಡಿಸಲಾದರೂ ಕೂಡಾ ಗ್ರಾಹಕರಿಗೆ ಮಾತ್ರ ಯಾವುದೇ ಸೌಲಭ್ಯಗಳಿಲ್ಲದೆ ವಂಚಿತರನ್ನಾಗಿ ಮಾಡಿದೆ.

ಖಾಸಗಿ ಕಂಪನಿಯ ಏರ್‌ಟೆಲ್, ಜಿಯೋ ಮತ್ತು ವಿಐ ಇನ್ನಿತರ ಕಂಪನಿಯ ಗ್ರಾಹಕರು ಬಿಎಸ್‌ಎನ್‌ಎಲ್ ಸೀಮ್‌ನಿಂದ ಪೋರ್ಟ್ ಮಾಡಿಸಿಕೊಂಡು ಖಾಸಗಿ ಕಂಪನಿಯ ಕಡೆ ಹೆಚ್ಚು ಅವಲಂಬಿತರಾಗುವಂತಾಗಿದ್ದು ಸರಿಯಾದ ನಿರ್ವಹಣೆ ಇಲ್ಲದೇ ಪಾಳು ಬೀಳುವಂತಾಗಿದೆ ಎಂದು ಸಾರ್ವಜನಿಕರು ಗ್ರಾಹಕರು ಆರೋಪಿಸುವಂತಾಗಿದೆ.

ಇತ್ತೀಚೆಗೆ ಇಲ್ಲಿನ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ ಕುರಿತು ದೂರವಾಣಿ ಇಲಾಖೆಯೆ ಹಿರಿಯ ಆಧಿಕಾರಿಗಳಿಗೆ ಸಂಪರ್ಕಿಸಿದರೆ ಉಡಾಫೆ ಉತ್ತರ ನೀಡಿ ಸಮೀಪದ ಹೊಸನಗರ ದೂರವಾಣಿ ಇಲಾಖೆಯ ಕಛೇರಿಯವರನ್ನು ಕೇಳಿ ಎಂದು ಹೇಳುತ್ತಾರೆ. ಆದರೆ ಅವರಿಗೂ ಫೋನ್ ಮೂಲಕ ಸಂಪರ್ಕಿಸಿದರೆ ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವುದರೊಂದಿಗೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಈ ಬಗ್ಗೆ ಸಾರ್ವಜನಿಕರು ಸಂಸದರ ಗಮನಕ್ಕೆ ತರಲಾಗಿ ಜಿಲ್ಲಾ ಮಟ್ಟದ ದೂರವಾಣಿ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸುವುದರೊಂದಿಗೆ ಸಮಸ್ಯಗೆ ಪರಿಹಾರ ನೀಡುವುದಾಗಿ ಭರವಸೆ ನೀಡಲಾದರೂ ಇಲ್ಲಿನ ಸಮಸ್ಯೆಯೇ ಬೇರೆಯಾಗಿದ್ದು ನಿರ್ವಹಣೆಯಿಲ್ಲದೆ ಇರುವ ಬೆಲೆ ಬಾಳುವಂತಹ ಯಂತ್ರೋಪಕರಣಗಳು ದೂಳು ತಿನ್ನವಂತೆ ಮಾಡುವುದರೊಂದಿಗೆ ಗ್ರಾಹಕರಗೂ ಸೇವಾ ಸೌಲಭ್ಯ ದೊರಕದಂತೆ ಮಾಡಿದ್ದಾರೆಂದು ಅಧಿಕಾರಿಗಳ ವಿರುದ್ದ ಸಿಡಿದಿದ್ದಾರೆ.

‘ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಂಸ್ಥೆ ದುಃಸ್ಥಿತಿಗೆ ಇಳಿದಿದ್ದರೆ, ಖಾಸಗಿ ಕಂಪನಿಗಳು ಪೈಪೋಟಿಗೆ ಇಳಿದು ಸೇವೆಯ ಉತ್ಕೃಷ್ಟತೆಯನ್ನು ಹೆಚ್ಚಿಸಿಕೊಂಡು ದುಪ್ಪಟ್ಟು ದರ ವಿಧಿಸಿ, ಸಾರ್ವಜನಿಕರ ಸುಲಿಗಿಗೆ ಮುಂದಾಗಿವೆ’.
– ರಾಜಾರಾಮ್ ಬಾಳಿಗಾ, ಉದ್ಯಮಿ

’15 ದಿನಗಳಲ್ಲಿ ಜನಪ್ರತಿನಿಧಿಗಳು ಬಿಎಸ್‌ಎನ್‌ಎಲ್‌ ಸಮಸ್ಯೆಯ ಕುರಿತು ಅವಲೋಕನ ನಡೆಸಿ, ಗ್ರಾಹಕರ ಹಿತ ಕಾಯುವ ನಿಟ್ಟಿನಲ್ಲಿ ಗಮನ ಹರಿಸಬೇಕು’
– ಶ್ರೀನಿವಾಸ್ ಆಚಾರ್, ಸಾಮಾಜಿಕ ಕಾರ್ಯಕರ್ತ ಹಾಗೂ ಯುವ ಮುಖಂಡ

ಗ್ರಾಮೀಣ ಭಾಗದಲ್ಲಿ ದಿನದ 24 ಗಂಟೆಗಳ ಪೈಕಿ ಕೇವಲ ಎರಡು ಗಂಟೆ ನೆಟ್ವರ್ಕ್ ಸಿಗುವುದೂ ಕಷ್ಟ ಸಾಧ್ಯವಾಗಿದೆ. ಮನೆಯಿಂದ ಕೆಲಸ ನಿರ್ವಹಿಸುತ್ತಿರುವ ನೌಕರರು ಹಾಗೂ ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಮಸ್ಯೆ ಪರಿಹರಿಸಲು ಮುಂದಾಗದಿದ್ದರೆ ರಿಪ್ಪನ್‌ಪೇಟೆ ಬಿಎಸ್‌ಎನ್‌ಎಲ್ ಕಚೇರಿಯಿಂದಯಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿವರೆಗೆ ವಿವಿಧ ಸಂಘ ಸಂಸ್ಥೆಗಳ ಹಾಗೂ ಸಾಮಾಜಿಕ ಸಂಘಟನೆಗಳ ಸಹಯೋಗದಲ್ಲಿ ಕಾಲ್ನಡಿಗೆ ಮೂಲಕ ಬಿಎಸ್‌ಎನ್‌ಎಲ್ ಅಣಕು ಶವಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಇನ್ನಾದರೂ ಸಂಬಂಧಪಟ್ಟ ದೂರವಾಣಿ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆಗೆ ಪರಿಹಾರಕೊಡಿಸುವರೇ ಕಾದು ನೋಡಬೇಕಾಗಿದೆ.

Leave a Comment