ಹೊಸನಗರ

ರಿಪ್ಪನ್‌ಪೇಟೆ ಸಿದ್ಧಿವಿನಾಯಕನ ಸನ್ನಿಧಿಯಲ್ಲಿ ಬಿ.ಎಸ್. ಯಡಿಯೂರಪ್ಪ: ಅಭಿಮಾನಿಗಳ 108 ತೆಂಗಿನಕಾಯಿ ಹರಕೆ ಸಮರ್ಪಣೆ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ತಮ್ಮ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹೊತ್ತಿದ್ದ 108 ತೆಂಗಿನಕಾಯಿ ಹರಕೆಯನ್ನು ಸಮರ್ಪಿಸಿ ದೇವರ ದರ್ಶನಾಶೀರ್ವಾದ ಪಡೆದರು.

ರಿಪ್ಪನ್‌ಪೇಟೆ ಸಿದ್ದಿವಿನಾಯಕ ಸನ್ನಿಧಿಯಲ್ಲಿ B S Yediyurappa

ರಿಪ್ಪನ್‌ಪೇಟೆ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ಸ್ವಾಮಿ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ತಮ್ಮ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹೊತ್ತಿದ್ದ 108 ತೆಂಗಿನಕಾಯಿ ಹರಕೆಯನ್ನು ಸಮರ್ಪಿಸಿ ದೇವರ ದರ್ಶನಾಶೀರ್ವಾದ ಪಡೆದರು.

WhatsApp Group Join Now
Telegram Group Join Now
Instagram Group Join Now

ದೇಶವ್ಯಾಪ್ತಿ ಕರೋನಾ ಮಹಾಮಾರಿ ಉಲ್ಬಣಗೊಂಡಿದ್ದ ಸಂದರ್ಭದಲ್ಲಿ, ರೈತರು ಹಾಗೂ ನಾಗರಿಕರು ರೋಗದಿಂದ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಲಾಗಿತ್ತು. ಜೊತೆಗೆ, ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರಿಗೆ ಉತ್ತಮ ಆರೋಗ್ಯ ಹಾಗೂ ರಾಜ್ಯದ ಆಡಳಿತವನ್ನು ಸುಸೂತ್ರವಾಗಿ ನಡೆಸಲು ಭಗವಂತ ಶಕ್ತಿ ಕರುಣಿಸಲೆಂದು ಮುಖಂಡರಾದ ಗಿರೀಶ್ ಜಂಬಳ್ಳಿ, ಕೆ.ಬಿ. ಹೂವಪ್ಪ, ಕಗ್ಗಲಿ ಲಿಂಗಪ್ಪ ಹಾಗೂ ಜಿ.ಡಿ. ಮಲ್ಲಿಕಾರ್ಜುನ ಸೇರಿದಂತೆ ಅಭಿಮಾನಿಗಳು ಸಿದ್ಧಿವಿನಾಯಕ ಸ್ವಾಮಿಗೆ 108 ತೆಂಗಿನಕಾಯಿ ಹರಕೆ ಮಾಡಿಕೊಂಡಿದ್ದರು.

ಭಾನುವಾರ ಯಡಿಯೂರಪ್ಪ ಅವರ ಸಮ್ಮುಖದಲ್ಲಿಯೇ ಈ ಹರಕೆಯನ್ನು ದೇವರಿಗೆ ಭಕ್ತಿಯಿಂದ ಅರ್ಪಿಸಲಾಯಿತು. ಈ ವೇಳೆ ದೇವಸ್ಥಾನದ ಅರ್ಚಕರು ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಸಿದ್ಧಿವಿನಾಯಕ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ವತಿಯಿಂದ ಬಿ.ಎಸ್. ಯಡಿಯೂರಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಎನ್. ಸತೀಶ್, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಿ.ಈ. ಮಧುಸೂದನ್, ಹಿಂದೂ ಮಹಾಸಭಾ ಸಮಿತಿಯ ಅಧ್ಯಕ್ಷ ಸುಧೀಂದ್ರ ಪೂಜಾರಿ ಹಾಗೂ ಪ್ರಮುಖರಾದ ಆರ್.ಟಿ. ಗೋಪಾಲ, ಎಂ.ಬಿ. ಮಂಜುನಾಥ, ಸುರೇಶ್ ಸಿಂಗ್, ಆರ್. ರಾಘವೇಂದ್ರ, ಮೆಣಸೆ ಆನಂದ್, ಎ.ಟಿ. ನಾಗರತ್ನ, ಪದ್ಮಾ ಸುರೇಶ್, ನಾಗರತ್ನ ದೇವರಾಜ್, ರೇಖಾ ರವಿ, ಗೀತಾ ಕರಿಬಸಪ್ಪ, ಲೀಲಾ ಉಮಾಶಂಕರ್, ವಾಣಿ ಶಿವಪ್ರಕಾಶ, ರಾಮಚಂದ್ರ ಬಳೆಗಾರ, ಬಿ. ಯುವರಾಜ್, ಎ.ವಿ. ಮಲ್ಲಿಕಾರ್ಜುನ ಸೇರಿದಂತೆ ನೂರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!