ನಮ್ಮ ಕಾರ್ಯಕರ್ತರ ಪರಿಶ್ರಮದಿಂದ ಮತ್ತೆ ಸಂಸದನಾಗಿದ್ದೇನೆ ; ಬಿ.ವೈ. ರಾಘವೇಂದ್ರ

Written by malnadtimes.com

Updated on:

HOSANAGARA | ಬಿ.ವೈ. ರಾಘವೇಂದ್ರ ನನಗೆ ಶಕ್ತಿಯೇ ನಮ್ಮ ಬಿಜೆಪಿ (BJP) ಪಕ್ಷದ ಕಾರ್ಯಕರ್ತರು, ಅವರ ಹಗಲಿರುಳು ಪರಿಶ್ರಮದಿಂದ ಈ ಬಾರಿ ಸುಮಾರು 2.47 ಲಕ್ಷ ಮತಗಳ ಅಂತರದಿಂದ ಜಯಶಾಲಿಯಾಗಲು ಸಾಧ್ಯವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ (B.Y.Raghavendra) ಹೇಳಿದರು.

WhatsApp Group Join Now
Telegram Group Join Now
Instagram Group Join Now

ಪಟ್ಟಣದ ಆರ್ಯಈಡಿಗರ ಸಭಾಭವನದಲ್ಲಿ ಮತದಾರರಿಗೆ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಂದು ವರ್ಷದ ಅವಧಿಯಲ್ಲಿ ನಮ್ಮ ಸಾಗರ-ಹೊಸನಗರದಲ್ಲಿ ಅಭಿವೃದ್ಧಿ ಹರಿಕಾರರಾಗಿ ಕೆಲಸ ಮಾಡಿದ ಹರತಾಳು ಹಾಲಪ್ಪನವರನ್ನು ಸೋಲಿಸಿದ ಮೇಲೆ ನಮಗೆ ಬೇಸರವಾಗಿತ್ತು. ಸತತ 5 ವರ್ಷ ಜನರ ಸೇವೆ ಮಾಡುವುದರ ಜೊತೆಗೆ ಅಭಿವೃದ್ಧಿ ಮಾಡಿದ ವ್ಯಕ್ತಿಯನ್ನು ಸೋಲಿಸಿದರಲ್ಲ ಎಂದುಕೊಂಡೆ. ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಮೂಲಕ ಹಾಲಪ್ಪನವರು ಸೋಲಬೇಕಾಯಿತು. ಲೋಕಸಭೆ ಚುನಾವಣೆ ನಡೆಸುವುದು ಕಷ್ಟ ಎಂದುಕೊಂಡೆ ಆದರೇ ನಮ್ಮ ಬಿಜೆಪಿ ಕಾರ್ಯಕರ್ತರ ಶ್ರಮದಿಂದ ಜಯಶಾಲಿಯಾಗಿ ಬರುವುದರ ಜೊತೆಗೆ ಸಾಗರ ಕ್ಷೇತ್ರದಲ್ಲಿ 10 ಸಾವಿರ, ಹೊಸನಗರ ಕ್ಷೇತ್ರದಲ್ಲಿ 17 ಸಾವಿರ ಮತಗಳನ್ನು ಹೆಚ್ಚು ಪಡೆಯುವ ಮೂಲಕ ಇನ್ನೂ ಈ ಕ್ಷೇತ್ರದಲ್ಲಿ ಬಿಜೆಪಿ ಗಟ್ಟಿಯಾಗಿದೆ. ಕಾಂಗ್ರೆಸ್‌ನ 1 ಲಕ್ಷದ ಗ್ಯಾರಂಟಿಗೆ ಯಾರು ಬೆಲೆ ಕೊಡುವವರು ಇಲ್ಲ ಎಂದೆನಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಎಲ್ಲ ಕ್ಷೇತ್ರಗಳಲ್ಲಿಯೂ 51% ಮತ ಏರಿಕೆಯಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 147ಕ್ಕಿಂತ ಹೆಚ್ಚು ಸ್ಥಾನವನ್ನು ಪಡೆಯುತ್ತೇವೆ ಎಂದರು.

ಕಾಂಗ್ರೆಸ್ ಪಕ್ಷ ನೆಲ ಕಚ್ಚುತ್ತಿದೆ :

ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ. ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿಲ್ಲ ನಾನು ಮತ್ತು ಮಾಜಿ ಶಾಸಕ ಹರತಾಳು ಹಾಲಪ್ಪನವರು ತಂದಿರುವಂತಹ ಕೆಲಸ ನನ್ನದೆಂದು ಊರು ಕೇರಿ ತುಂಬಾ ಹೇಳಿಕೊಳ್ಳುತ್ತಾ ಓಡಾಡುತ್ತಿದ್ದಾರೆ ಇವರು ಸರ್ಕಾರದಿಂದ ಎಷ್ಟು ಹಣ ಬಿಡುಗಡೆ ಮಾಡಿಸಿದ್ದಾರೆ ? ಯಾವ ಕಾಮಗಾರಿ ಇವರ ಬಲದಿಂದ ತಂದಿದ್ದಾರೆ ? ಎಂದು ಜನರ ಎದುರಿಗೆ ಬಾಯಿ ಬಿಡಲಿ. ಅದು ಅಲ್ಲದೇ ಸಾಮಾನ್ಯ ಜನರು ಬದುಕುವುದೇ ಕಷ್ಟಕರವಾಗಿದ್ದು ಎಲ್ಲ ಬೆಲೆಗಳನ್ನು ಗಗನಕ್ಕೇರಿಸಿದ್ದು ಇದು ಕಾಂಗ್ರೆಸ್ ಪಕ್ಷದ ಸಾಧನೆಯ ಜೊತೆಗೆ ಸೈಟ್ ಮತ್ತು ವಾಲ್ಮೀಕಿ ಹಗರಣದಿಂದ ಹೊರಬಾರಲಿ. ಯಾರು ಭ್ರಷ್ಠರು ಯಾರು ನಿಷ್ಠಾವಂತರು ಎಂದು ಗೊತ್ತಾಗುತ್ತದೆ ಎಂದು ಎಲ್ಲ ಬಿಜೆಪಿ ಕಾರ್ಯಕರ್ತರಿಗೆ ಸಂಸದರು ಅಭಿನಂದಿಸಿದರು.

ಮಾಜಿ ಶಾಸಕ ಹರತಾಳು ಹಾಲಪ್ಪ ಮಾತನಾಡಿ, ನಾನು ರಾಘಣ್ಣ ಒಟ್ಟಾಗಿ ಎಲ್ಲ ಸಂಘ-ಸಂಸ್ಥೆಗಳಿಗೆ ಸಾಕಷ್ಟು ಹಣ ನೀಡಿರುವುದರಿಂದ ಇಂತಹ ಸಭಾಭವನಗಳು ನಿರ್ಮಿಸಲು ಸಹಕಾರಿಯಾಗಿದೆ. ಈ ಆರ್ಯ ಈಡಿಗರ ಸಬಾಭವನಕ್ಕೆ ರಾಘಣ್ಣ ನನ್ನ ಕೊಡುಗೆ ಬಹಳವಿದೆ. ಇದರ ಜೊತೆಗೆ ಮಾಜಿ ಶಾಸಕ ಬಿ.ಸ್ವಾಮಿರಾವ್ ಹಾಗೂ ಮಂಡಾನಿ ಮನೆತನದವರು ಜಾಗ ನೀಡಿರುವುದರಿಂದ ಇಂತಹ ಸಭಾಭವನ ನಿರ್ಮಿಸಲು ಸಹಕಾರಿಯಾಗಿದೆ. ಆದರೆ ಕೆಲಸ ಮಾಡಿದ ಜಾಗ ಕೊಟ್ಟವರನ್ನು ಮರೆತಂತೆ ಕಾಣುತ್ತಿದೆ. ಇದೇ ರೀತಿ ಎಲ್ಲ ಸಂಘಗಳಿಗೂ ಸಮುದಾಯದವರಿಗೂ ಸಭಾಭವನ ನಿರ್ಮಿಸಲು ಹಣ ನೀಡಲಾಗಿದೆ ಎಂದರು.

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ, ಮಂಡಲದ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ, ಜಿಲ್ಲಾಧ್ಯಕ್ಷ ಮೇಘರಾಜ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ವರ್ತೇಶ್ ಇನ್ನೂ ಮುಂತಾದವರು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಕೆ.ವಿ. ಕೃಷ್ಣಮೂರ್ತಿ, ಎನ್.ಆರ್.ದೇವಾನಂದ್, ಶ್ರೀಪತಿರಾವ್, ಮಂಡಾನಿ ಮೋಹನ್, ಸತ್ಯನಾರಾಯಣ, ಕಾಲಸಸಿ ಸತೀಶ್, ಮಂಜುನಾಥ್ ಸಂಜೀವ ನಾಗರ್ಜುನಸ್ವಾಮಿ, ಉಮೇಶ್ ಕಂಚುಗಾರ್, ಕಲ್ಯಾಣಪ್ಪಗೌಡ, ಆಲವಳ್ಳಿ ವೀರೇಶ್, ಸುರೇಶ್ ಸ್ವಾಮಿರಾವ್, ಚಾಬುಸಾಬ್, ಗಾಯಿತ್ರಿ ನಾಗರಾಜ್, ಕೃಷ್ಣವೇಣಿ, ಎಂ.ವಿ ಜಯರಾಮ್, ಕಾಯಿ ನಾಗೇಶ, ಹಾಲಗದ್ದೆ ಉಮೇಶ, ಗಣಪತಿ ಬಿಳಗೋಡು ಎ.ವಿ. ಮಲ್ಲಿಕಾರ್ಜುನ, ಶಿವಕುಮಾರ್, ಮನೋಹರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

SHIVAMOGGA | ಬೆಳ್ಳಂಬೆಳಗ್ಗೆ ರೌಡಿಶೀಟರ್ ಕಾಲಿಗೆ ಗುಂಡೇಟು !

ಜು.12ರವರೆಗೆ ಮುಂದುವರೆಯಲಿದೆ ಭಾರಿ ಮಳೆ, ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ

Leave a Comment