ವಿಲಕಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಆಟಿಸಂ, ಬೌದ್ದಿಕ ವಿಕಲತೆ ಮತ್ತು ಬಹುವಿಧ ಅಂಗವಿಕಲತೆ (ಶ್ರವಣ ಮತ್ತು ದೃಷ್ಟಿ ನ್ಯೂನ್ಯತೆ) ಕಾಯಿಲೆಯಿಂದ ಬಳಲುತ್ತಿರುವ ವಯಸ್ಸು 75 ಕ್ಕಿಂತ ಹೆಚ್ಚು ವಿಕಲತೆ ಪ್ರಮಾಣ ಹೊಂದಿರುವ ವ್ಯಕ್ತಿಗಳ ಆರೈಕೆದಾರರಿಗೆ ಮಾಹೆಯಾನ ರೂ.1000 ಪ್ರೋತ್ಸಾಹಧನದ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯ ನಮೂನೆ ಹಾಗೂ ದಾಖಲಾತಿ ಸಲ್ಲಿಸುವ ವಿವರಗಳು
ಆಸಕ್ತ ಅಭ್ಯರ್ಥಿಗಳು ತಮ್ಮ ಸಂಬಂಧಪಟ್ಟ ತಾಲೂಕಿನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು (ಗ್ರಾ.ಪಂ), ನಗರ ಪುನರ್ವಸತಿ ಕಾರ್ಯಕರ್ತರು ಅಥವಾ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಿಂದ ನಿಗದಿತ ನಮೂನೆಯ ಅರ್ಜಿಪತ್ರವನ್ನು ಪಡೆದು, ಸೂಕ್ತವಾಗಿ ಭರ್ತಿ ಮಾಡಬೇಕು.
ಅರ್ಜಿಯೊಂದಿಗೆ ಕೆಳಕಂಡ ದಾಖಲೆಗಳ ಪ್ರತಿಗಳನ್ನು ದ್ವಿಪ್ರತಿಯಲ್ಲಿ ಲಗತ್ತಿಸಿ ಜೂನ್ 30ರೊಳಗಾಗಿ ಸಲ್ಲಿಸಬೇಕು:
- ಯುಡಿಐಡಿ (UDID) ಕಾರ್ಡ್
- ಸಕ್ಷಮ ಪ್ರಾಧಿಕಾರಿಯಿಂದ ಪಡೆಯಲಾದ ಜಾತಿ ಪ್ರಮಾಣಪತ್ರ
- ವಾಸಸ್ಥಳ ಪ್ರಮಾಣಪತ್ರ
- ಆರೈಕೆದಾರರ ಬ್ಯಾಂಕ್ ಪಾಸ್ ಬುಕ್ ಪ್ರತಿಯು
- 2 ಜಂಟಿ ಭಾವಚಿತ್ರಗಳು
- ವಿಕಲಚೇತನ ಮತ್ತು ಆರೈಕೆದಾರರ ಆಧಾರ್ ಕಾರ್ಡ್ ಪ್ರತಿಗಳು
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಧಿಕಾರಿಗಳನ್ನು ಸಂಪರ್ಕಿಸಬಹುದು:
- ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿ: 08182-251676
- ಶಿವಮೊಗ್ಗ: ಡಿ.ಎಸ್. ಮಲ್ಲಿಕಾರ್ಜುನ – 9980150110
- ಭದ್ರಾವತಿ: ದಿನೇಶ – 7899137243
- ಶಿಕಾರಿಪುರ: ಎಂ. ಹುಚ್ಚರಾಯಪ್ಪ – 9741161346
- ಸಾಗರ: ಕೆ.ಎನ್. ಶ್ಯಾಮ್ ಸುಂದರ್ – 9535247757
- ಸೊರಬ: ಹೆಚ್.ಸಿ. ಭರತ್ ಕುಮಾರ್ – 9110493122
- ತೀರ್ಥಹಳ್ಳಿ: ಬಿ.ಆರ್. ದಿನಾಕರ – 9480767638
- ಹೊಸನಗರ: ರವಿಕುಮಾರ್ – 9731922693
Read More
ವಿದ್ಯಾಭ್ಯಾಸಕ್ಕೆ ಹಣವಿಲ್ಲವೇ? ಕೇಂದ್ರ ಸರ್ಕಾರದ ಈ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಬಂಪರ್ ಸಾಲ ಸೌಲಭ್ಯ !
Adhaar Card : 3 ದಿನಗಳಲ್ಲಿ ಈ ಕೆಲಸ ಮಾಡಿ ಇಲ್ಲವಾದಲ್ಲಿ ಪಾವತಿಸಬೇಕು ಇಷ್ಟು ಹಣ !
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.