ಶಿವಮೊಗ್ಗ ಸುದ್ದಿ

Get the latest news from Shivamogga and stay informed about the city’s developments. Our website offers comprehensive coverage on various topics. Visit us today!

ಶಿವಮೊಗ್ಗ: ಸೌಜನ್ಯ ಸೇರಿದಂತೆ ಮತ್ತಿತರೇ ಪ್ರಕರಣಗಳನ್ನು ಮುಂದಿಟ್ಟುಕೊಂಡು ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸಲು ಹೋಗಬೇಡಿ. ಜನರಲ್ಲಿ ಗೊಂದಲ ಮೂಡಿಸುವಂತ ಕೆಲಸವನ್ನು ಮಾಡಬೇಡಿ ಎಂಬುದಾಗಿ ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕರ್ನಾಟಕದಲ್ಲಿ ಧರ್ಮಸ್ಥಳ ಒಂದು ರೀತಿಯಾಗಿ ಕಾಶಿ ಇದ್ದಂತೆ ಆಗಿದೆ. ಆದರೇ ಇಂದು ಆ ಬಗ್ಗೆ ಪರ ವಿರೋಧದ ಚರ್ಚೆಗಳಾಗುತ್ತಿವೆ. ನನ್ನ ಪ್ರಕಾರ ಧಾರ್ಮಿಕ ಕ್ಷೇತ್ರದ ವಿಚಾರದಲ್ಲಿ ನಾವು ಯಾರೂ ಹಸ್ತಕ್ಷೇಪ ಮಾಡಬಾರದು. ಅದು ತಪ್ಪಾಗುತ್ತದೆ ಎಂದರು. ಧರ್ಮಸ್ಥಳದ ಬಗ್ಗೆ ಬಹಳಷ್ಟು ಭಕ್ತರು ನಂಬಿಕೆ ಇಟ್ಟುಕೊಂಡಿದ್ದಾರೆ. ಇದನ್ನು ನಾವು ಕೂಡ ನೋಡಿದ್ದೇವೆ. ನಾವು ಆ ಕ್ಷೇತ್ರದ ಮೇಲೆ ಮೊದಲಿನಿಂದಲೂ ನಂಬಿಕೆ ಇಟ್ಟುಕೊಂಡು ಬಂದಿದ್ದೇವೆ. ವೀರೇಂದ್ರ ಹೆಗ್ಗಡೆಯವರ ಬಗ್ಗೆಯೂ ಅಪಾರವಾದಂತ ಗೌರವವಿದೆ ಎಂದರು. ಸರ್ಕಾರ ಸಹ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುವ ಕೆಲಸವನ್ನು ಮಾಡಬಾರದು. ಅದನ್ನು ನಮ್ಮ ಸರ್ಕಾರ ಎಂದಿಗೂ ಮಾಡುವುದಿಲ್ಲ. ಏಕೆಂದರೇ ಈ ಹಿಂದೆ ಸಿಗಂದೂರು ಕ್ಷೇತ್ರವನ್ನು ಮುಜರಾಯಿ ಇಲಾಖೆಗೆ ಸೇರಿಸೋದಕ್ಕೆ ಹಿಂದಿನ ಸರ್ಕಾರ ಮಾಡಿತ್ತು. ಬಿಜೆಪಿಯ ಸಂಸದರು, ಶಾಸಕರು ಸೇರಿಕೊಂಡು ಮಾಡಿದ್ದರು. ಆದರೇ ನಾವು ಯಾವುದೇ ಧಾರ್ಮಿಕ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಲ್ಲ. ಮಾಡಬಾರದು ಕೂಡ ಎಂಬುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಶಿವಮೊಗ್ಗ ಸುದ್ದಿ

ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಖಚಿತ – ಶಾಸಕ ಗೋಪಾಲಕೃಷ್ಣ ಬೇಳೂರು

ಶಿವಮೊಗ್ಗ ; ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಡೆದ ಲೋಕಸಭಾ ಚುನಾವಣೆಯಲ್ಲಿ ಕಳ್ಳ ಮತದಾನದ ಮೂಲಕ ಗೆದ್ದಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಗಂಭೀರ ಆರೋಪ ಮಾಡಿದ್ದು, ಚುನಾವಣೆ ಪ್ರಕ್ರಿಯೆಯ ಮೇಲೆ…

Featured

ಜೋಗ್ ಫಾಲ್ಸ್‌ನ ಅಪಾಯದ ಪ್ರದೇಶದಲ್ಲಿ ವಿಡಿಯೋ ಮಾಡಿದ ಯೂಟ್ಯೂಬರ್‌ ವಿರುದ್ಧ ಎಫ್‌ಐಆರ್

ಜೋಗ್ ಫಾಲ್ಸ್‌: ಪ್ರಕೃತಿ ಸೌಂದರ್ಯದ ಅದ್ಭುತ ತಾಣವಾಗಿ ಪ್ರಖ್ಯಾತಿಯಲ್ಲಿರುವ ಜೋಗ್ ಫಾಲ್ಸ್ ಇದೀಗ ಮತ್ತೊಮ್ಮೆ ಸುದ್ದಿಯಾಗಿದೆ. ಬೆಂಗಳೂರಿನ ಯೂಟ್ಯೂಬರ್ ಹಾಗೂ ಸ್ಥಳೀಯ ಗೈಡ್‌ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ…

ಶಿವಮೊಗ್ಗ ಸುದ್ದಿ

ತಾಳಗುಪ್ಪ – ಯಶವಂತಪುರ ಎಕ್ಸ್‌ಪ್ರೆಸ್ ರೈಲು ಸಮಯದಲ್ಲಿ ಬದಲಾವಣೆ – ನೂತನ ವೇಳಾಪಟ್ಟಿ ಪ್ರಕಟ

ಶಿವಮೊಗ್ಗ: ನೈರುತ್ಯ ರೈಲ್ವೇ ಪ್ರಾಧಿಕಾರವು ರೈಲು ಸಂಖ್ಯೆ 06588: ತಾಳಗುಪ್ಪ (TLGP) – ಯಶವಂತಪುರ (YPR) ಎಕ್ಸ್‌ಪ್ರೆಸ್‌ ವಿಶೇಷ ರೈಲಿನ ಸಮಯವನ್ನು ನವೀಕರಿಸಿದ್ದು, ಪ್ರಯಾಣಿಕರು ಈ ಬದಲಾವಣೆಗೆ ಗಮನಹರಿಸಲು ಮನವಿ ಮಾಡಲಾಗಿದೆ. 🕒…

ಅಪರಾಧ ಸುದ್ದಿ

ಮನೆಗಳ್ಳನ ಹೆಡೆಮುರಿ ಕಟ್ಟಿದ ರಿಪ್ಪನ್‌ಪೇಟೆ ಪೊಲೀಸರು ; ನಗ-ನಾಣ್ಯ ವಶಕ್ಕೆ

ರಿಪ್ಪನ್‌ಪೇಟೆ ; ಕೋಟೆತಾರಿಗ ಗ್ರಾಮದಲ್ಲಿ ಮನೆ ಬೀಗ ಮುರಿದು ಕಳವು    ಮಾಡಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ರಿಪ್ಪನ್‌ಪೇಟೆ ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ‌. ಕೋಟೆತಾರಿಗ ಗ್ರಾಮದ ದಾನಮ್ಮ  ಎಂಬುವರ ಮನೆಯಲ್ಲಿ ಶುಕ್ರವಾರ ರಾತ್ರಿ ಬೀಗ…

ಹೊಸನಗರ

ತಿಂಗಳ ಹಿಂದಷ್ಟೇ ಗಂಡು ಮಗುವಿಗೆ ತಂದೆಯಾಗಿದ್ದ ವ್ಯಕ್ತಿ ಹೃದಯಾಘಾತಕ್ಕೆ ಬಲಿ !

ಹೊಸನಗರ ; ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಸಮೀಪದ ಹಿರೀಮನೆ ಎಂಬಲ್ಲಿ 34 ವರ್ಷದ ವ್ಯಕ್ತಿ ಹೃದಯಾಘಾತಕ್ಕೆ ಬಲಿಯಾದ ಘಟನೆ ನಡೆದಿದೆ. ಹಿರೀಮನೆ ನಿವಾಸಿ…

Ripponpete

ರಿಪ್ಪನ್‌ಪೇಟೆ ; ಪ್ರೌಢ ಶಾಲೆಯಲ್ಲಿ ಮೂರು ವರ್ಷದಿಂದಿಲ್ಲಾ ದೈಹಿಕ ಶಿಕ್ಷಕರು !

ರಿಪ್ಪನ್‌ಪೇಟೆ ; ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ದೈಹಿಕ ಶಿಕ್ಷಕರು ವರ್ಗಾವಣೆಗೊಂಡು ಮೂರು ವರ್ಷ ಕಳೆದರೂ, ಇನ್ನೂ ಶಿಕ್ಷಕರನ್ನು ನೇಮಕ ಮಾಡದ ಕಾರಣ ವಿದ್ಯಾರ್ಥಿಗಳು ತಮ್ಮ ಪಾಡಿಗೆ ತಾವೇ ಕ್ರೀಡೆಗಳ ಅಭ್ಯಾಸ…

ಹೊಸನಗರ

ಹುಲಿಕಲ್ ಘಾಟ್‌ನಲ್ಲಿ ಭಾರಿ ವಾಹನಗಳಿಗೆ ತಾತ್ಕಾಲಿಕ ನಿಷೇಧ – ಪರ್ಯಾಯ ಮಾರ್ಗಗಳು ಹೀಗಿವೆ !

ಶಿವಮೊಗ್ಗ : ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52 ರ ಬಾಳೆಬರೆ ಘಾಟ್ (ಹುಲಿಕಲ್ ಘಾಟ್) ರಸ್ತೆಯಲ್ಲಿ ನಿರಂತರ ಮಳೆಯಿಂದಾಗಿ ಭೂ ಕುಸಿತದ ಸಂಭವ ಹೆಚ್ಚಾದ ಹಿನ್ನೆಲೆಯಲ್ಲಿ, ಮಾಸ್ತಿಕಟ್ಟೆಯಿಂದ ಹೊಸಂಗಡಿವರೆಗೆ ಭಾರಿ ವಾಹನಗಳ ಸಂಚಾರಕ್ಕೆ…

Ripponpete

ರೋಟರಿ ಕ್ಲಬ್‌ ವತಿಯಿಂದ ಕೃಷಿಕರಿಗೆ ಪರಿಕರ ಹಾಗೂ ರೈನ್ ಕೋಟ್ ವಿತರಣೆ

ರಿಪ್ಪನ್‌ಪೇಟೆ ; ರೈತ ದೇಶದ ಬೆನ್ನೆಲುಬು ಅವರ ಪರಿಶ್ರಮವನ್ನು ಗೌರವಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ರೈತ ಶ್ರಮವಿಲ್ಲದೆ ಯಾವ ದೇಶವೂ ಅಭಿವೃದ್ದಿ ಹೊಂದಲಾರದು. ಕೃಷಿಕರು ನಮ್ಮ ಅನ್ನದಾತರು ಅವರ ಶ್ರಮದ ಸಾಧನೆಗೆ ಕೃತಜ್ಞತೆ…

ಶಿವಮೊಗ್ಗ ಸುದ್ದಿ

ತುಂಗಾ ಸೇತುವೆ ಮೇಲೆ ತಾಳಗುಪ್ಪ – ಮೈಸೂರು ರೈಲಿನ ಬೋಗಿ ಬೇರ್ಪಟ್ಟು ಆತಂಕ !

ಶಿವಮೊಗ್ಗ, ಆ.6: ಇಂದು ಶಿವಮೊಗ್ಗದಿಂದ ಮೈಸೂರು ಕಡೆಗೆ ಹೊರಟ್ಟಿದ್ದ ರೈಲಿನಲ್ಲಿ ತಾಂತ್ರಿಕ ದೋಷ ಸಂಭವಿಸಿ ತುಂಗಾ ನದಿಯ ಸೇತುವೆ ಮೇಲೆ ಒಂದಿಷ್ಟು ಬೋಗಿಗಳು ರೈಲಿನಿಂದ ಬೇರ್ಪಟ್ಟ ಘಟನೆ  ಶಿವಮೊಗ್ಗದ ಹೊಳೆ ಬಸ್​ ಸ್ಟಾಪ್​…

ಸಾಗರ

ಆನಂದಪುರ: ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕನ ಮೇಲೆ ಹಲ್ಲೆ – ಇಬ್ಬರು ಆರೋಪಿಗಳು ಬಂಧನ

ಆನಂದಪುರ: ಆನಂದಪುರ ಬಸ್ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಘಟನೆ ಬುಧವಾರ ನಡೆದಿದೆ. ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸಾಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ.…