ರಿಪ್ಪನ್‌ಪೇಟೆ ; ಗೋಕರ್ಣ ಪರ್ತಗಾಳಿ ಮಠ ಸಂಸ್ಥಾಪನೆಯಾಗಿ 550 ವರ್ಷಗಳಿಂದ ಕಳೆದಿದ್ದು ಈ ಶುಭ ಸಂದರ್ಭದಲ್ಲಿ ಮಠಾಧೀಶರಾದ ಶ್ರೀವಿದ್ಯಾದೀಶ ತೀರ್ಥ ಸ್ವಾಮಿಜಿವರ ಅಶಯದಂತೆ 550 ದಿನಗಳ ಕಾಲ 550 ಕೋಟಿ ರಾಮನಾಮ ಜಪ ಪಠಣ ಸಂಕಲ್ಪದಂತೆ ರಿಪ್ಪನ್‌ಪೇಟೆಯ ಜಿ.ಎಸ್.ಬಿ. ಸಮಾಜ ಬಾಂಧವರು ತಮ್ಮ ಗುರಿಯಾದ ಒಂದು ಕೋಟಿ ಶ್ರೀರಾಮನಾಮ ಜಪ ಪಠಣ ಪೂರೈಸಿ ಶ್ರೀರಾಮನಾಮ ತಾರಕ ಮಂತ್ರ ಪಠಣ ಕೋಟಿ ಸಂಭ್ರಮಹಾಗೂ ಸಮಾಜದ ಮಹಿಳಾ ಮಂಡಳಿಯವರಿಂದ ಶ್ರಾವಣ ಮಾಸದ ಸಾಮೂಹಿಕ ಚೂಡಿ ಪೂಜನ ಕಾರ್ಯಕ್ರಮವನ್ನು ಸಂಭ್ರಮ ಸಡಗರದೊಂದಿಗೆ ಆಚರಿಸಿದರು.
ಇದೇ ಸಂದರ್ಭದಲ್ಲಿ ಮಹಿಳೆಯರು ಪರಸ್ಪರ ಚೂಡಿ ವಿನಿಮಯ ಮಾಡಿಕೊಂಡು ಹಿರಿಯರಿಂದ ಆಶೀರ್ವಾದವನ್ನು ಪಡೆದರು.
ಜಿ.ಎಸ್.ಬಿ.ಸಮಾಜದ ಆಧ್ಯಕ್ಷ ಗಣೇಶ್ ಎನ್.ಕಾಮತ್,ಮಠದ ಪರಂಪರೆಯ ವಿಚಾರವನ್ನು ಪ್ರಸ್ತಾಪಿಸಿ ಸಮಾಜದ ಇಂದಿನ ಯುವ ಪೀಳಿಗಗೆ ಪರಿಚಯಿಸಿದರು.

ಎಂ.ಆರ್.ಭಟ್ ಇವರ ನೇತೃತ್ವದಲ್ಲಿ ಶ್ರೀರಾಮನಾಮ ತಾರಕ ಮಂತ್ರ ಫಠಣ ಕಾರ್ಯಕ್ರಮ ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಿಸಿದರು.
ಈ ಸಂದರ್ಭದಲ್ಲಿ ಜಿ.ಎಸ್.ಬಿ.ಸಮಾಜದ ಮುಖಂಡರಾದ ಜೆ.ರಾಧಾಕೃಷ್ಣ, ಹರೀಶ್‌ಶಂಕರ್ ಶರಾಫ್, ಹರೀಶ್ ಪ್ರಭು, ಉಪೇಂದ್ರ ಬಾಳಿಗಾ, ರಾಧಿಕಾ ನಾಯಕ್, ಯಶೋಧ ಶೆ.ನೈ, ಸಂಧ್ಯಾಕಾಮತ್, ಇನ್ನಿತರ ಸಮಾಜ ಬಾಂಧವರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಸಾಮೂಹಿಕ ಅನ್ನಸಂತರ್ಪಣೆ ನೆರವೇರಿತು.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.