ಶಿವಮೊಗ್ಗ: ಇನ್ಮುಂದೆ ಮಹಿಳೆಯರು, ಶಾಲಾ ಮಕ್ಕಳು, ವಿದ್ಯಾರ್ಥಿಗಳು ನಗರದಲ್ಲಿ ಕಿಡಿಗೇಡಿಗಳು ಹಾಗೂ ರೋಡ್ ರೋಮಿಯೊಗಳ ಭಯವಿಲ್ಲದೇ ಸ್ವಚ್ಛಂದವಾಗಿ ಸಂಚರಿಸಬಹುದು. ಈ ಉದ್ದೇಶಕ್ಕಾಗಿ ಜಿಲ್ಲಾ ಪೊಲೀಸ್ ಕಛೇರಿಯು ಕೆಳದಿ ರಾಣಿ ಅವರ ಸ್ಮರಣಾರ್ಥವಾಗಿ ‘ಚೆನ್ನಮ್ಮ ಪಡೆ’ ಸ್ಥಾಪಿಸಿದೆ..
ಹಳೆಯ ಓಬವ್ವ ಪಡೆಗೆ ಚೆನ್ನಮ್ಮ ಪಡೆ ಎಂದು ಮರುನಾಮಕರಣ
ಚೆನ್ನಮ್ಮ ಪಡೆ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುವ ಅಥವಾ ಶಾಲಾ/ಕಾಲೇಜುಗಳಲ್ಲಿ ಅನವಶ್ಯಕವಾಗಿ ಓಡಾಡುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಮಹಿಳಾ ಸುರಕ್ಷತೆಗೆ ಆದ್ಯತೆ ನೀಡಲಾಗುವುದು. ಹಳೆಯ ಓಬವ್ವ ಪಡೆಗೆ ಚೆನ್ನಮ್ಮ ಪಡೆ ಎಂದು ಮರುನಾಮಕರಣ ಮಾಡಲಾಗಿದೆ.
ಮಹಿಳೆಯರು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವ ಹಾಗೂ ಶಾಲಾ-ಕಾಲೇಜುಗಳಲ್ಲಿ ಅನವಶ್ಯಕವಾಗಿ ಓಡಾಡುವ ಕಿಡಿಗೇಡಿಗಳ ವಿರುದ್ಧ ಚೆನ್ನಮ್ಮ ಪಡೆ ಕಾನೂನು ಕ್ರಮ ಕೈಗೊಳ್ಳಲಿದೆ. ಈ ಘಟಕದಲ್ಲಿರುವ ಎಲ್ಲಾ ಪೊಲೀಸ್ ಅಧಿಕಾರಿಗಳು ಮಹಿಳೆಯರು. ಚೇಷ್ಟೆಗಳಿಂದ ಬೇಸತ್ತ ಮಹಿಳೆಯರು ಮತ್ತು ವಿದ್ಯಾರ್ಥಿಗಳು ತಮಗೆ ಕಿರುಕುಳ ನೀಡುವವರ ಬಗ್ಗೆ ಮೌಖಿಕವಾಗಿ ದೂರು ನೀಡಲು ಹಿಂಜರಿಯಬಾರದು. ಶಾಲಾ-ಕಾಲೇಜುಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುವ ಯುವಕರ ಮೇಲೂ ಈ ಪಡೆಗಳು ನಿಗಾ ಇಡುತ್ತವೆ.
ಈ ಸಂಖ್ಯೆಗೆ ಕರೆ ಮಾಡಿ
ಮಹಿಳೆಗೆ ಯಾರಾದರೂ ಕಿರುಕುಳ ನೀಡಿದರೆ ತುರ್ತು ಸಂಖ್ಯೆ 112, ಮಹಿಳಾ ಪೊಲೀಸ್ ಠಾಣೆ 9480803349, ನಿಯಂತ್ರಣ ಕೇಂದ್ರ 08182 261413 ಮತ್ತು ಎಸ್‌ಐ ನಿಯಂತ್ರಣ ಕೇಂದ್ರ 9480800947 ಗೆ ಕರೆ ಮಾಡಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ, ದೂರುದಾರರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು.
ಶಿವಮೊಗ್ಗ ಕೆಳದಿ ಅರಸರ ನಾಡು. ಸ್ಥಳೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕೆಳದಿ ರಾಣಿ ಚೆನ್ನಮ್ಮನ ಹೆಸರನ್ನು “ಚೆನ್ನಮ್ಮ ಪಡೆ” ಎಂದು ಮರುನಾಮಕರಣ ಮಾಡಲಾಯಿತು. ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ನಿರ್ಭೀತ ವಾತಾವರಣ ನಿರ್ಮಿಸುವುದು ಈ ಪಡೆಯ ಉದ್ದೇಶವಾಗಿದೆ. ಮಹಿಳೆಯರಿಗೆ ಕಿರುಕುಳ ನೀಡುವವರ ವಿರುದ್ಧ ಚೆನ್ನಮ್ಮ ಪಡೆಗಳ ಜತೆಗೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ.
-ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾರಕ್ಷಣಾಧಿಕಾರಿ
Read More
Adike Price | 26 ಮೇ 2024 | ಇಂದಿನ ಅಡಿಕೆ ರೇಟ್ ಎಷ್ಟಿದೆ ?
Karnataka Rain | ಇನ್ನೂ ನಾಲ್ಕು ದಿನ ಮುಂದುವರೆಯಲಿದೆ ಮಳೆ