ಶಿವಮೊಗ್ಗ ; ಸಿಡಿಲು ಬಡಿದು ಚಿಕನ್ ಅಂಗಡಿಯ ಮಾಲಿಕ ಸಾವನಪ್ಪಿದ ಘಟನೆ ಸೋಮವಾರ ನಡೆದಿದೆ.
ಶೇಕ್ ಮುಜೀಬ್(45) ಮೃತ ದುರ್ದೈವಿ. ಶಿವಮೊಗ್ಗ ತಾಲೂಕಿನ ರಾಮನಗರದಲ್ಲಿ ಚಿಕನ್ ಅಂಗಡಿಯಲ್ಲಿದ್ದಾಗ ಸಿಡಿಲು ಬಡಿದಿದ್ದು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಶೇಕ್ ಮುಜೀಬ್ ಹಾರನಹಳ್ಳಿ ನಿವಾಸಿಯಾಗಿದ್ದು, ರಾಮನಗರದಲ್ಲಿ ಚಿಕನ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಅಂಗಡಿ ಪಕ್ಕದಲ್ಲಿದ್ದ ಮರಕ್ಕೆ ಸಿಡಿಲು ಬಡಿದು ಅಲ್ಲೇ ಇದ್ದ ಶೇಕ್ ಮುಜೀಬ್ ಗೆ ಸಿಡಿಲು ಬಡಿದಿದೆ. ಈ ಘಟನೆ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇನ್ನು ಶಿವಮೊಗ್ಗದ ವಿನೋಬ ನಗರದ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿದ್ದ ತೆಂಗಿನಮರಕ್ಕೆ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡ ಘಟನೆ ಸಹ ನಡೆದಿದೆ.
ಭದ್ರಾವತಿಯಲ್ಲಿಯೂ ಸಿಡಿಲು ಬಡಿದು ದಂಪತಿಗಳು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಗೀತ ಮತ್ತು ಜಾನ್ ಎಂಬುವರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





