ಕಾಡು ಗಿಳಿಗಳನ್ನು ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು

0 458

ಕಾಡು ಗಿಳಿಗಳನ್ನು ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು
ಚಿಕ್ಕಮಗಳೂರು: ಹಾಂದಿ ಅಂಚೆ, ಮಾಚಗೊಂಡನಹಳ್ಳಿ ಇಂದಿರಾನಗರದ ಆರೋಪಿ ಉಮೇಶ್. ಎಂ.ಸಿ ಬಿನ್ ಲೇ/ ಚನ್ನಶೆಟ್ಟಿ (56) ಇವರ ವಾಸದ ಮನೆಯ ಕಾಂಪೌಂಡ್ ಒಳಗೆ ಇರುವ ಶೆಡ್‌ನಲ್ಲಿ ಸರ್ಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಎರಡು ಜೀವಂತ ಕಾಡು ಗಿಳಿಗಳನ್ನು 02 ಪಂಜರಗಳಲ್ಲಿ ಪ್ರತ್ಯೇಕವಾಗಿ ಅಕ್ರಮ ಬಂಧನದಲ್ಲಿ ಇಟ್ಟುಕೊಂಡು ಸಾಕುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ  ದಾಳಿ ನಡೆಸಿ ಎರಡು ಕಾಡು ಗಿಳಿಗಳನ್ನು ವಶಕ್ಕೆ ಪಡೆಯಲಾಗಿದೆ.

ಏಪ್ರಿಲ್ 17 ರಂದು ಚಿಕ್ಕಮಗಳೂರು ನಗರದ ಶಂಕರಪುರ 4ನೇ ಕ್ರಾಸ್, ಸ್ವೀಪರ್ ಕಾಲೋನಿಯಲ್ಲಿ ಆರೋಪಿ ವಿನೋದ್ ಕುಮಾರ್‌ರವರು ಅವರ ವಾಸದ ಮನೆಯ ಮುಂಭಾಗದಲ್ಲಿ ಸರ್ಕಾರದ ಪರವಾನಗಿ ಇಲ್ಲದೆ  ಅಕ್ರಮವಾಗಿ ಒಂದು ಜೀವಂತ ಗಿಳಿಯನ್ನು  ಪಂಜರದಲ್ಲಿ ಅಕ್ರಮ ಬಂಧನದಲ್ಲಿ ಇಟ್ಟುಕೊಂಡು ಸಾಕುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ  ದಾಳಿ ನಡೆಸಿ ಒಂದು ಕಾಡು ಗಿಳಿಯನ್ನು ವಶಕ್ಕೆ ಪಡೆದು ವನ್ಯಜೀವಿ ಸಂರಕ್ಷಣೆ ಕಾಯ್ದೆ- 1972 ರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಕ್ಕಮಗಳೂರು ಸಿ.ಐ.ಡಿ ಪೊಲೀಸ್ ಅರಣ್ಯ ಸಂಚಾರಿ ದಳದವರು ಸಿಐಡಿ ಬೆಂಗಳೂರು ಪೊಲೀಸ್ ಉಪ ಮಹಾ ನಿರೀಕ್ಷಕರು, ಸುಧೀರ್ ಕುಮಾರ್ ರೆಡ್ಡಿ ಹಾಗೂ  ಸಿ.ಐ.ಡಿ ಅರಣ್ಯ ಘಟಕ ಮಡಿಕೇರಿ, ಪೊಲೀಸ್ ಅಧೀಕ್ಷಕರು, ಎಸ್.ಎಸ್. ಕಾಶಿ ರವರ ಮಾರ್ಗದರ್ಶನದಲ್ಲಿ ಕೆ.ಆರ್. ಸುನಿತ ಪೊಲೀಸ್ ಉಪ ನಿರೀಕ್ಷಕರುರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಡಿ.ಹೆಚ್.ದಿನೇಶ, ಎಸ್.ಕೆ. ದಿವಾಕರ. ಕೆ.ಎಸ್. ದಿಲೀಪ, ಎ.ಜಿ. ಹಾಲೇಶ, ದೇವರಾಜ. ಹೆಚ್,  ಹೇಮಾವತಿ ದಾಳಿಯಲ್ಲಿ ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!