ಅಕ್ರಮವಾಗಿ ಮರಳು, ಕಲ್ಲು ಸಾಗಿಸುತ್ತಿದ್ದ ಮೂರು ಲಾರಿಗಳು ವಶಕ್ಕೆ

0 363

ರಿಪ್ಪನ್‌ಪೇಟೆ: ಸ್ಥಳೀಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಟಿಪ್ಪರ್ ಲಾರಿಗಳು ಹಾಗೂ ಕಲ್ಲು ಸಾಗಿಸುತ್ತಿದ್ದ ಒಂದು ಟಿಪ್ಪರ್ ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಪಟ್ಟಣದ ಪಿಎಸ್‌ಐ ನಿಂಗರಾಜ್ ಕೆ.ವೈ.ನಿಂಗರಾಜ್ ನೇತೃತ್ವದಲ್ಲಿ ಸೋಮವಾರ ರಾತ್ರಿ ಹರತಾಳು ರಸ್ತೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ 2 ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದಿದ್ದು ಗವಟೂರು ಬಳಿಯಲ್ಲಿ ಅಕ್ರಮ ಕಲ್ಲು ಸಾಗಿಸುತ್ತಿದ್ದ ಒಂದು ಟಿಪ್ಪರ್ ಲಾರಿ ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಉಮೇಶ, ಶಿವಕುಮಾರ್, ಸಂತೋಷ ಕೊರವರ ಹಾಗೂ ಮಧುಸೂದನ್, ಇದ್ದರು.

Leave A Reply

Your email address will not be published.

error: Content is protected !!