ಆಯತಪ್ಪಿ ಬಾವಿಗೆ ಬಿದ್ದು 3 ವರ್ಷದ ಮಗು ಸಾವು !

0 589

ಆಯತಪ್ಪಿ ಬಾವಿಗೆ ಬಿದ್ದು 3 ವರ್ಷದ ಮಗು ಸಾವು !

ಸಾಗರ : ಆಟವಾಡುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿದ ಘಟನೆ ನಗರದ ಎಸ್ ಎನ್ ನಗರದಲ್ಲಿ ಬುಧವಾರ ನಡೆದಿದೆ.

ಮನೆ ಹಿಂಭಾಗದ ಬಳಿ ಆಟವಾಡುತ್ತಿದ್ದಾಗ ಬಾವಿಗೆ ಬಿದ್ದು ಮನ್ನತ್ (03) ಮೃತಪಟ್ಟಿದ್ದಾಳೆ. ಬಾಲಕಿ ಆಟವಾಡುತ್ತಾ ಬಾವಿ ಬಳಿ ತೆರಳಿದ್ದಾಳೆ, ಈ ವೇಳೆ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾಳೆ.

ಮಗುವಿನ ತಾಯಿ ತಕ್ಷಣ ನೋಡಿ ಕೂಗಿಕೊಂಡಿದ್ದಾರೆ. ಸ್ಥಳೀಯರು ಮಗುವನ್ನು ಮೇಲಕ್ಕೆತ್ತಿದ್ದು, ಮಗುವಿನ ತಲೆ ಹಾಗೂ ಹಣೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಮನ್ನತ್ ಅಷ್ಟಾರಲ್ಲಾಗಲೇ ಮೃತಪಟ್ಟಿದ್ದಳು ಎಂದು ತಿಳಿದುಬಂದಿದೆ.

Leave A Reply

Your email address will not be published.

error: Content is protected !!