ಕೈ ತೆಕ್ಕೆಗೆ ಮುಂಬಾರು ಸಹಕಾರಿ ಸಂಘ

Written by Mahesha Hindlemane

Published on:

HOSANAGARA ; ಇತ್ತೀಚೆಗೆ ತಾಲೂಕಿನ ಮುಂಬಾರು ಕೃಷಿ ಮತ್ತು ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿತ ಹನ್ನೊಂದು ಸ್ಪರ್ಧಾಳು ಭರ್ಜರಿ ಗೆಲುವು ದಾಖಲಿಸಿ, ಬಿಜೆಪಿ ಬೆಂಬಲಿತ ಸ್ಪರ್ಧಾಕಾಂಕ್ಷಿಗಳಿಗೆ ಮುಖಭಂಗ ಉಂಟು ಮಾಡಿದ ಹಿನ್ನಲೆಯಲ್ಲಿ ಪಟ್ಟಣದ ಗಾಂಧಿ ಮಂದಿರದಲ್ಲಿ ವಿಜೇತರಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆತ್ಮೀಯ ಸನ್ಮಾನ ಹಮ್ಮಿಕೊಳ್ಳಲಾಗಿತ್ತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

12 ಸದಸ್ಯ ಬಲದ ಈ ಸಹಕಾರಿ ಸಂಸ್ಥೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿತ 11 ಆಕ್ಷಾಂಕ್ಷಿಗಳು ಜಯಗಳಿಸುವ ಮೂಲಕ ಪಕ್ಷ ಸಹಕಾರಿ ಕ್ಷೇತ್ರದಲ್ಲಿ ಹೊಸ ಮುನ್ನುಡಿ ಬರೆದಿದೆ. ನೂತನ ನಿರ್ದೇಶಕ ಮಂಡಳಿಯ ಸದಸ್ಯರಾಗಿ ಆಯ್ಕೆಯಾದ ಲೇಖನಮೂರ್ತಿ, ಕೊಲ್ಲೂರಪ್ಪ, ತಿಮ್ಮಪ್ಪ, ಟೀಕಪ್ಪ, ನಾಗಪ್ಪ, ಯೋಗೇಂದ್ರಪ್ಪ, ವೆಂಕಟೇಶ್, ಜಯಂತ್, ವೀರಭದ್ರಪ್ಪ ಗೌಡ, ಶೋಭಕ್ಕ, ಈರಮ್ಮ ಅವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ ಆತ್ಮೀಯವಾಗಿ ಸನ್ಮಾನಿಸಿ, ಇದೊಂದು ಪಕ್ಷದ ಸಂಘಟನಾತ್ಮಕ ಹೋರಾಟದ ಫಲವಾಗಿದ್ದು, ಮುಂದೆಯೂ ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ದರಾಗಿರುವಂತೆ ವಿಜೇತರಿಗೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎಂ.ಸದಾಶಿವ, ಟೌನ್ ಘಟಕದ ಅಧ್ಯಕ್ಷ ಕೆ.ಎಸ್. ಗುರುರಾಜ್, ಜಿಲ್ಲಾ ಕಾರ್ಯದರ್ಶಿ ಬಿ.ಆರ್. ಪ್ರಭಾಕರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಬಿ. ಚಿದಂಬರ, ಪ್ರಮುಖರಾದ ಎಂ.ಪಿ.ಸುರೇಶ್, ಜಯನಗರ ಗುರು, ಆಶ್ರಯ ಸಮಿತಿ ಸದಸ್ಯ ಮೂರ್ತಿ, ತಾ.ಪಂ.ಮಾಜಿ ಸದಸ್ಯ ಎರಗಿ ಉಮೇಶ್, ಬ್ಲಾಕ್ ಮಾಜಿ ಅಧ್ಯಕ್ಷ ಬಿ.ಜಿ.ನಾಗರಾಜ್, ಪಟ್ಟಣ ಪಂಚಾಯತಿ ಅಧ್ಯಕ್ಷ ನಾಗಪ್ಪ, ಸದಸ್ಯ ಅಶ್ವಿನಿ ಕುಮಾರ್‌, ಎಸ್.ಎನ್.ರಾಜಮೂರ್ತಿ, ಶ್ರೀನಿವಾಸ್ ಕಾಮತ್, ನಾಸಿಕ್ ಕಚ್ಚಿಗೆಬೈಲು, ಉಬೇದ್ ಸಾಬ್ ಮೊದಲಾದವರು ಉಪಸ್ಥಿತರಿದ್ದರು.

Leave a Comment