ಹೊಸನಗರ ; ಪಾಕಿಸ್ತಾನದಲ್ಲಿ ಅಕ್ರಮ ಚಟುವಟಿಕೆ ಹಾಗೂ ನಾಗರಿಕರ ಜೀವ ತೆಗೆಯುತ್ತಿರುವ ಪಾಕಿಸ್ತಾನದ ಉಗ್ರಗಾಮಿಗಳನ್ನು ತಕ್ಷಣ ಕೊಲ್ಲಬೇಕು ಹಾಗೂ ಭಾರತ ದೇಶ ಶಾಂತಿ ಪ್ರಿಯವಾಗಿದ್ದು ಇಲ್ಲಿ ಶಾಂತಿ ನೆಲೆಸುವಂತೆ ಮಾಡಿ ಎಂದು ಹೊಸನಗರದ ನ್ಯಾಯವಾದಿ ವಾಲೆಮನೆ ಶಿವಕುಮಾರ್ ಹೇಳಿದರು.
ಇಲ್ಲಿನ ನ್ಯಾಯಾಲಯದ ನ್ಯಾಯವಾದಿಗಳು ಗುರುವಾರ ಬಾರ್ ಅಸೋಸಿಯೇಷನ್ ಅಧ್ಯಕ್ಷ ಚಂದ್ರಪ್ಪನವರ ನೇತೃತ್ವದಲ್ಲಿ ಪಹಲ್ಗಾಮ್ ಘಟನೆ ಖಂಡಿಸಿ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಮಾತನಾಡಿದರು.
22ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ 28 ಹಿಂದುಗಳನ್ನು ಹತ್ಯೆ ಮಾಡಲಾಗಿದ್ದು ಅವರ ಆತ್ಮಕ್ಕೆ ಶಾಂತಿ ದೂರಕಬೇಕಾದರೆ ಪಾಕಿಸ್ತಾನದಲ್ಲಿರುವ ಉಗ್ರಗಾಮಿಗಳನ್ನು ಹೊಡೆದುರುಳಿಸುವ ಜೊತೆಗೆ ಉಗ್ರಗಾಮಿಗಳಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನವನ್ನು ನಿರ್ನಾಮ ಮಾಡಬೇಕು ಅದಕ್ಕೆ ಬೇಕಾಗಿರುವ ಬೆಂಬಲವನ್ನು ನಮ್ಮ ವಕೀಲರ ಸಂಘ ನೀಡಲಿದೆ. ಇಡೀ ಭಾರತ ದೇಶವೇ ಶಾಂತಿಯುತವಾಗಿ ಇರಬೇಕಾದರೆ ಪಾಕಿಸ್ತಾನದಂತಹ ಉಗ್ರಪೋಷಕ ರಾಷ್ಟ್ರವನ್ನು ಹೊಡೆದುರುಳಿಸಿದರೆ ಮಾತ್ರ ಭಾರತ ದೇಶ ಶಾಂತಿಯುತವಾಗಿ ಇರಲು ಸಾಧ್ಯವಾಗಿದ್ದು ತಕ್ಷಣ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಲಿ ಎಂದರು.
ಈ ಸಂದರ್ಭದಲ್ಲಿ ನ್ಯಾಯಾವಾಧಿಗಳಾದ ಚಂದ್ರಪ್ಪ, ವಾಲೆಮನೆ ಶಿವಕುಮಾರ್, ವೈ.ಪಿ ಮಹೇಶ್, ಗುರುಕಿರಣ್, ಕರ್ಣಕುಮಾರ್, ರಾಮಚಂದ್ರ, ವಿಜಯ ಹೊಳೆಗದ್ದೆ, ಈರಪ್ಪ, ಷಣ್ಮುಖಪ್ಪ, ಉಮೇಶ್, ಮೋಹನ್ ಶೆಟ್ಟಿ, ನಂಜುಂಡಪ್ಪ, ಗುರು, ಗಗ್ಗ ಬಸವರಾಜ್, ಇನ್ನೂ ಮುಂತಾದವರು ಉಪಸ್ಥಿತರಿದ್ದರು.