Bele Vime:ಕರ್ನಾಟಕದ ರೈತರಿಗಾಗಿ ಇಲ್ಲಿದೆ ಒಂದು ಗುಡ್ ನ್ಯೂಸ್ ! ಮುಂಗಾರು 2023-24 ಹಂಗಾಮಿನಲ್ಲಿ ಬೆಳೆ ನಷ್ಟವನ್ನು ಅನುಭವಿಸಿರುವ 80,191 ರೈತರ ಖಾತೆಗಳಿಗೆ ₹81.36 ಕೋಟಿ ರೂ.ಗಳ ಬೆಳೆ ವಿಮಾ ಪರಿಹಾರ ಹಣವನ್ನು ನೇರ ಲಾಭ ವರ್ಗಾವಣೆಯ ಮೂಲಕ (DBT) ಮೂಲಕ ಜಮಾ ಮಾಡಲಾಗಿದೆ. ಇದು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ( PMFBY ) ಮತ್ತು ರಿವೈಸ್ಟ್ ವೆದರ್ ಬೇಸ್ಡ್ ಕ್ರಾಪ್ ಇನ್ಷುರೆನ್ಸ್ ಸ್ಕೀಮ್ (REBCIS) ಅಡಿಯಲ್ಲಿ ನೀಡಿದ ಪರಿಹಾರವಾಗಿದೆ.
ಬೆಳೆ ವಿಮೆ ಹಣವನ್ನು ಪರಿಶೀಲಿಸುವುದು ಹೇಗೆ?
ರೈತರು ಈ ಮಾಹಿತಿಯನ್ನು ಪರಿಶೀಲಿಸಲು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಸುಲಭವಾಗಿ ಬೆಳೆ ವಿಮೆ ಸ್ಟೇಟೆಸ್ ಅನ್ನು ತಿಳಿಯಬಹುದಾಗಿದೆ.
ಬೆಳೆ ವಿಮೆ ಹಣವನ್ನು ಪರಿಶೀಲಿಸುವ ಹಂತಗಳು
- ಸಮರಕ್ಷಣೆ ಗೆ ಲಾಗಿನ್ ಆಗಿ. (www.samrakshane.karnataka.gov.in)
- “Check Status” ಅಯ್ಕೆಯನ್ನ ಆರಿಸಿಕೊಳ್ಳಿ
- ಮೊಬೈಲ್ ಸಂಖ್ಯೆ ಅಥವಾ ಅರ್ಜಿ ಸಂಖ್ಯೆಯನ್ನು ನಮೂದು ಮಾಡಿ.
- ವರ್ಷ ಮತ್ತು ಋತು (ಮುಂಗಾರು/ಖರೀಫ್) ಇದನ್ನ ಆಯ್ಕೆ ಮಾಡಿ.
- ಪರಿಹಾರ ಹಣದ ವಿವರಣೆಯನ್ನು ಕುರಿತಾಗಿ ತಪಾಸಣೆಯನ್ನು ಮಾಡಿ.
ಹಣವು ಈಗಾಗಲೇ ಎಲ್ಲಾ ರೈತರಿಗೂ ಬಿಡುಗಡೆ ಆಗಿದೆಯೇ?
- ಉತ್ತರ ಕನ್ನಡ ಜಿಲ್ಲೆಯ 80,191 ರೈತರಿಗೆ ₹81.36 ಕೋಟಿ ಹಣ ಬಿಡುಗಡೆ ಆಗಿದೆ.
- ರಾಜ್ಯದಾದ್ಯಂತ 5.58 ಲಕ್ಷ ರೈತರಿಗೆ ಒಟ್ಟು ₹1,248. ಕೋಟಿ ಬಿಡುಗಡೆ ಆಗಿದೆ.
ಈ ಹಣವನ್ನು ಆಧಾರ್ ಗೆ ಲಿಂಕ್ ಆಗಿರುವಂತಹ ಬ್ಯಾಂಕ್ ಖಾತೆಗಳಿಗೆ ನೇರ ವರ್ಗಾವಣೆ ಮಾಡಲಾಗಿದೆ.
ಯಾವ ಯಾವ ಬೆಳೆಗಳಿಗೆ ಈ ಬೆಳೆ ವಿಮೆ ಅನ್ವಯವಾಗುತ್ತದೆ ?
ಅಕ್ಕಿ, ಜೋಳ, ಹತ್ತಿ, ಸೋಯಾಬೀನ್ ರಾಗಿ ಹಾಗೂ ಇನ್ನಿತರೆ ಬೆಳೆಗಳಿಗೆ ಈ ಬೆಳೆ ವಿಮೆ ಅನ್ವಯವಾಗುವುದು. ಅಡಿಕೆ, ಬಾಳೆ, ಏಲಕ್ಕಿಯಂತಹ ತೋಟಗಾರಿಕೆ ಬೆಳೆಗಳಿಗೆ ಈ ವಿಮೆಯು ಅನ್ವಯವಾಗುವುದಿಲ್ಲ.
ಈ ಯೋಜನೆಯ ಉದ್ದೇಶದ ಕುರಿತಾಗಿ ಹೇಳುವುದಾದರೆ, ರೈತರಿಗೆ ಹಲವು ಕಾರಣಗಳಿಂದ ಅಂದರೆ ಹವಾಮಾನ ವೈಪರೀತ್ಯ, ಅತಿವೃಷ್ಟಿ, ಅನಾವೃಷ್ಟಿ ಮತ್ತು ಬೆಳೆಗೆ ರೋಗಗಳಂತಹು ತಗುಲಿ ಬೆಳೆ ನಷ್ಟವಾದಾಗ ಪರಿಹಾರ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಇಲ್ಲಿ ವಿಮೆ ಹಣ ತಕ್ಷಣವೇ ಸಿಗದಿದ್ದರೂ ನಿಗಧಿತ ಪ್ರಕ್ರಿಯೆಗಳ ನಂತರ ಖಾತೆಯಲ್ಲಿ ಹಣ ಜಮೆಯಾಗುವುದು.
ಹೆಚ್ಚಿನ ಮಾಹಿತಿಗಳಿಗಾಗಿ ತಾಲೂಕು ಕೃಷಿ ಕಛೇರಿ / ಬ್ಯಾಂಕ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.
Read More
ಜೂನ್ 30ರಿಂದ ಹಣ ಕಳಿಸುವ ಮೊದಲು ಫೋನ್ ಪೇ, ಗೂಗಲ್ ಪೇ ಬಗ್ಗೆ ತಿಳಿದುಕೊಂಡರೆ ಒಳ್ಳೆಯದು!
ಮಹಾಮಳೆಗೆ ಕಾಫಿನಾಡಿನಲ್ಲಿ ಮೂರನೇ ಬಲಿ ; ಆಟೋ ಮೇಲೆ ಮರ ಬಿದ್ದು ಚಾಲಕ ಸಾವು !
MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.