ಬೆಳೆ ಸಮೀಕ್ಷೆ ವರದಿ “ಅಪ್ರೂವ್‌” ಇದ್ದವರಿಗೆ ಮಾತ್ರ ವಿಮೆ ಹಾಗೂ ಪರಿಹಾರ: ರೈತರಿಗೆ ಮುನ್ನೆಚ್ಚರಿಕೆ ಸೂಚನೆ

Written by Koushik G K

Published on:

Bele Samikshe: ಕರ್ನಾಟಕದಲ್ಲಿ ರೈತರಿಗೆ ಲಭ್ಯವಿರುವ ಬೆಳೆವಿಮೆ, ಬೆಳೆಹಾನಿ ಪರಿಹಾರ ಹಾಗೂ ಬೆಂಬಲ ಬೆಲೆ ಯೋಜನೆಗಳ ಲಾಭವನ್ನು ಪಡೆಯಲು, ಅವರ ಬೆಳೆ ಸಮೀಕ್ಷೆ ವರದಿ “Approved” (ಅನುಮೋದಿತ) ಆಗಿರಬೇಕು ಎಂಬುದು ಮಹತ್ವದ ಅಂಶವಾಗಿದೆ. ಸರ್ಕಾರ ರೈತರಿಗೆ ಸ್ಪಷ್ಟ ಸೂಚನೆ ನೀಡಿದ್ದು, ತಮ್ಮ ಬೆಳೆ ವಿವರಗಳ ಸ್ಥಿತಿಯನ್ನು ತಕ್ಷಣವೇ ಪರಿಶೀಲಿಸುವಂತೆ ತಿಳಿಸಿದೆ.

WhatsApp Group Join Now
Telegram Group Join Now
Instagram Group Join Now

ಬೆಳೆ ಸಮೀಕ್ಷೆ ಡೇಟಾ ಅತ್ಯಂತ ಪ್ರಮುಖ

ಬೆಳೆ ಸಮೀಕ್ಷೆ ಮೂಲಕ ಸಂಗ್ರಹಿಸಲಾಗುವ ಡೇಟಾ ಬಹುಪಾಲು ರೈತಪರ ಯೋಜನೆಗಳ ಮೂಲಾಧಾರವಾಗಿದ್ದು, ಈ ಮಾಹಿತೆಯ ಆಧಾರದಲ್ಲಿಯೇ:

  • ಬೆಳೆ ವಿಮೆ (Crop Insurance)
  • ಬೆಂಬಲ ಬೆಲೆ ಯೋಜನೆ (MSP)
  • ಬೆಳೆ ಹಾನಿ ಪರಿಹಾರ (Crop Loss Compensation)

ಇತ್ಯಾದಿ ಸೌಲಭ್ಯಗಳು ಒದಗಿಸಲಾಗುತ್ತವೆ. ಆದ್ದರಿಂದ, ರೈತರು ತಮ್ಮ ಬೆಳೆ ಸಮೀಕ್ಷೆ ಮಾಹಿತಿಯಲ್ಲಿ ಯಾವುದೇ ತಪ್ಪುಗಳಿಲ್ಲದೆ “ಅನುಮೋದಿತ” ಎಂದು ನೊಂದಾಯಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ.

ಆಕ್ಷೇಪಣೆ ಸಲ್ಲಿಸಲು ಅವಕಾಶ

ರೈತರಿಗೆ ಬೆಳೆ ದರ್ಶಕ ಮೊಬೈಲ್ ಆ್ಯಪ್ (Bele Darshaka App) ಅಥವಾ ಬೆಳೆ ಸಮೀಕ್ಷೆ ಪೋರ್ಟಲ್ (Crop Survey Portal) ಮೂಲಕ ತಮ್ಮ ವಿವರಗಳ ಕುರಿತು ಆಕ್ಷೇಪಣೆ ಸಲ್ಲಿಸುವ ಅವಕಾಶವಿದೆ. ಏನಾದರೂ ತಪ್ಪು ದಾಖಲಾಗಿದೆ ಎಂದು ಕಂಡುಬಂದರೆ ತಕ್ಷಣ ಆಕ್ಷೇಪಣೆ ನೀಡಬಹುದು.

ನಿಮ್ಮ ಸ್ಥಿತಿಯನ್ನು ಈಗಲೇ ಚೆಕ್ ಮಾಡಿ

👉 Crop Survey Report ಪರಿಶೀಲನೆಗಾಗಿ ಕ್ಲಿಕ್ ಮಾಡಿ

ರೈತ ಬಂಧುಗಳೇ, ನಿಖರ ಮಾಹಿತಿಯು ನಿಮ್ಮ ಬೆಳೆ ವಿಮೆ ಮತ್ತು ಪರಿಹಾರದ ಹಕ್ಕುಗಳನ್ನು ನಿರ್ಧರಿಸುತ್ತದೆ. ಅದನ್ನು ಕೈಚೆಲ್ಲದೆ, ಈಗಲೇ ನಿಮ್ಮ ಸ್ಥಿತಿಯನ್ನು ಪರಿಶೀಲಿಸಿ, ಅಗತ್ಯವಿದ್ದರೆ ತಿದ್ದುಪಡಿ ಅಥವಾ ಆಕ್ಷೇಪಣೆ ಸಲ್ಲಿಸಿ.crop survey report

Read MOre :Karnataka PM-Kisan – ಈ ದಿನ ಕೈ ಸೇರಲಿದೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯ 20ನೇ ಕಂತು !

Leave a Comment