ವಿಕಲಚೇತನರ ರೈಲ್ವೆ ರಿಯಾಯತಿಯಲ್ಲಿ ತಾರತಮ್ಯ: ಶಾಸಕರಿಗೆ ಮನವಿ ಸಲ್ಲಿಸಿದ ದಿವ್ಯಾಂಗ ಸಂಘಟನೆ

Written by Koushik G K

Published on:

ಭಾರತೀಯ ರೈಲ್ವೆ ಇಲಾಖೆ ವಿಕಲಚೇತನರಿಗೆ ರಿಯಾಯತಿ ಪಾಸು ನೀಡುವ ಸಂದರ್ಭದಲ್ಲಿ ತಾರತಮ್ಯ ಧೋರಣೆ ಅಳವಡಿಸಿಕೊಂಡಿರುವುದನ್ನು ಖಂಡಿಸಿ, ಈ ಸಮಸ್ಯೆಯನ್ನು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಗಮನಕ್ಕೆ ತರಬೇಕೆಂದು ಶಿವಮೊಗ್ಗ ಶಾಸಕ ಎಸ್. ಎನ್. ಚನ್ನಬಸಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ.

WhatsApp Group Join Now
Telegram Group Join Now
Instagram Group Join Now

ಇಂಡಿಯನ್ ದಿವ್ಯಾಂಗ ಎಂಪವರ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಕೊಡಕ್ಕಲ್ ಶಿವಪ್ರಸಾದ್ ಅವರು ಬೆಂಗಳೂರಿನ ಶಾಸಕರ ಭವನದಲ್ಲಿರುವ ಶಾಸಕ ಚನ್ನಬಸಪ್ಪ ಅವರ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದರು.

ತಾರತಮ್ಯದ ವಿರುದ್ಧ ನ್ಯಾಯಾಲಯದ ಆದೇಶವೂ ಇದ್ದುೂ…ಅಂಗವಿಕಲರ ಮುಖ್ಯ ಆಯುಕ್ತರ ನ್ಯಾಯಾಲಯವು ಈಗಾಗಲೇ ರೈಲ್ವೆ ಇಲಾಖೆಯ ತಾರತಮ್ಯವನ್ನು ಪ್ರಶ್ನಿಸಿ, ಎಲ್ಲ ತರಹದ ಅಂಗವಿಕಲರಿಗೆ ಯಾವುದೇ ಭೇದವಿಲ್ಲದೆ ರಿಯಾಯತಿ ಪಾಸು ನೀಡಬೇಕೆಂದು ಆನ್‌ಲೈನ್ ವಿಚಾರಣೆಯ ವೇಳೆ ಆದೇಶ ಹೊರಡಿಸಿದೆ. ಆದರೆ ಸರ್ಕಾರದಿಂದ ಅನುದಾನ ಬಿಡುಗಡೆ ಆಗದೆ ವಿಳಂಬವಾಗುತ್ತಿರುವುದರಿಂದ, ರೈಲ್ವೆ ಇಲಾಖೆ ಹಠಮಾರಿ ಧೋರಣೆಯನ್ನು ತಳೆದಿರುವುದಾಗಿ ಕೊಡಕ್ಕಲ್ ಶಿವಪ್ರಸಾದ್ ವಿವರಿಸಿದರು.

ಶಾಸಕರಿಂದ ಭರವಸೆ

ಈ ಮನವಿಯನ್ನು ಮನೋಜ್ಞವಾಗಿ ಆಲಿಸಿದ ಶಾಸಕ ಚನ್ನಬಸಪ್ಪ, ಈ ಬಗ್ಗೆ ಶೀಘ್ರದಲ್ಲೇ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

Leave a Comment