ರಿಪ್ಪನ್‌ಪೇಟೆ ; ವಿವಿಧೆಡೆ ಗ್ರಾಮ ದೇವರುಗಳ ದೀಪಾವಳಿ ನೋನಿ ಪೂಜೆ ಸಂಭ್ರಮ

Written by Mahesha Hindlemane

Updated on:

ರಿಪ್ಪನ್‌ಪೇಟೆ ; ದೀಪಾವಳಿಗೆ ಮುನ್ನ ಮಲೆನಾಡಿನ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಗ್ರಾಮದ ಚೌಡೇಶ್ವರಿ ತಾಯಿ ಪರಿವಾರ ದೇವರುಗಳಿಗೆ ನೋನಿ ಪೂಜೆಯು ಸಂಭ್ರಮ ಸಡಗರದೊಂದಿಗೆ ಇಂದು ನಡೆಯುತ್ತಿದೆ‌.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಸಮೀಪದ ಬೆಳಕೋಡು ಗ್ರಾಮದ ಚೌಡೇಶ್ವರಿ ತಾಯಿ ಪರಿವಾರ ದೇವರುಗಳಿಗೆ ಕೋಣಂದೂರು ಬೃಹನ್ಮಠದ ಶ್ರೀಪತಿಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ರುದ್ರಾಭಿಷೇಕ ಪೂಜೆ ತೀರ್ಥ ಪ್ರಸಾದ ವಿತರಣೆ ಜರುಗಿತು.

ಇನ್ನೂ ಕೋಟೆತಾರಿಗ, ಗವಟೂರು, ಕಲ್ಲುಕೊಪ್ಪ, ತಾರಿಗ, ಕಣಬಂದೂರು, ಬಸವಾಪುರ, ಬೆಳ್ಳೂರು, ಕಳಸೆ, ಮೂಡುಬಾ, ಬೈರಾಪುರ, ಕಾರಗೋಡು, ಕುಕ್ಕಳಲೆ, ಮಲ್ಲಾಪುರ, ಮಳಲಿಕೊಪ್ಪ, ಹುಗುಡಿ ಇನ್ನಿತರೆ ಗ್ರಾಮದಲ್ಲಿ ಗ್ರಾಮದೇವತೆಗಳಿಗೆ ಭೂತ, ರಣ, ಯಕ್ಷೆ ದೇವರುಗಳ ವಿಶೇಷ ಅಲಂಕಾರ ಪೂಜೆ ಹಾಗೂ ಹಣ್ಣು ಕಾಯಿ ಸಮರ್ಪಣೆ ನಂತರ ಕುರಿ-ಕೋಳಿಗಳ ಬಲಿ ನೀಡಲಾಯಿತು.

ಮಲೆನಾಡಿನ ವ್ಯಾಪ್ತಿಯಲ್ಲಿ ಇಂದು ಭಾನುವಾರವಾಗಿರುವ ಕಾರಣ ಹಲವು ಗ್ರಾಮಗಳಲ್ಲಿ ಶ್ರದ್ದಾ ಭಕ್ತಿಯಿಂದ ಗ್ರಾಮದ ದೇವಾನು ದೇವತೆಗಳಿಗೆ ದೀಪಾವಳಿಯಲ್ಲಿ ಯಾವುದೇ ಜಾತಿ ಭೇದ ಭಾವನೆಯನ್ನು ತೋರದೆ ಎಲ್ಲರೂ ಒಗ್ಗಟಿನಿಂದ ಸೇರಿಕೊಂಡು ಮನೆ-ಮನೆಯಲ್ಲಿ ವರಾಡ ಸಂಗ್ರಹಿಸಿ
ಕುರಿ-ಕೋಳಿಯನ್ನು ತಂದು ದೇವಿಗೆ ಸಮರ್ಪಿಸುವುದು ಪುರಾತನ ಕಾಲದಿಂದಲೂ ಆಚರಿಸಿಕೊಂಡು ಬಂದಂತಹ ಪದ್ದತಿಯನ್ನು ಇಂದಿಗೂ ಮುಂದುವರಿಸಿಕೊಂಡು ಮುಂದಿನ ತಲೆಮಾರಿಗೂ ಜಾಗೃತಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಒಟ್ಟಾರೆಯಾಗಿ ಈ ಬಾರಿಯಲ್ಲಿ ದೀಪಾವಳಿ ನೋನಿ ಹಬ್ಬವು ವಿಜೃಂಭಣೆಯೊಂದಿಗೆ ನಡೆಯುತ್ತಿರುವುದು ಗ್ರಾಮಸ್ಥರಲ್ಲಿ ಹರ್ಷ ತಂದಿದೆ.

Leave a Comment